Advertisement

ಅಲ್ಪಸಂಖ್ಯಾತರ ರಕ್ಷಣೆಗೆ ಕಾಂಗ್ರೆಸ್‌ ಬದ್ಧ

10:40 AM Mar 03, 2018 | |

ವಾಡಿ: ಸಾಮಾಜಿಕ ನ್ಯಾಯ ಹಾಗೂ ಸಮಬಾಳು ಸಮಪಾಲು ತತ್ವದಡಿ ನಂಬಿಕೆಯಿಟ್ಟು ಆಡಳಿತ ನೀಡುತ್ತಿರುವ ಕಾಂಗ್ರೆಸ್‌ ಪಕ್ಷದಿಂದ ಮಾತ್ರ ಅಲ್ಪಸಂಖ್ಯಾತರ ರಕ್ಷಣೆ ಸಾಧ್ಯ ಎಂದು ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ವಿಭಾಗೀಯ ಸಂಚಾಲಕ ಬಾಬಾಖಾನ್‌ ಹೇಳಿದರು.

Advertisement

ಪಟ್ಟಣದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ದೇಶದಲ್ಲಿ ಕೋಮುವಾದಿಗಳು ಅಧಿಕಾರಕ್ಕೆ ಬಂದ ಬಳಿಕ ಅಲ್ಪಸಂಖ್ಯಾತರ ಧಾರ್ಮಿಕ ನಂಬಿಕೆಗಳ ಮೇಲೆ ಸವಾರಿ ನಡೆದಿದೆ. ಕೋಮು ಸೌಹಾರ್ದದಿಂದ ಕೂಡಿ ಬಾಳುತ್ತಿರುವ ಅಲ್ಪಸಂಖ್ಯಾತರ ಒಗ್ಗಟ್ಟು ಮುರಿಯುವ ಹುನ್ನಾರ ನಡೆಸಲಾಗುತ್ತಿದೆ. ಕಾಂಗ್ರೆಸ್‌ ಪಕ್ಷದ ಆಡಳಿತದಿಂದ ಅಲ್ಪಸಂಖ್ಯಾತರಿಗೆ ಹೆಚ್ಚಿನ ಸೌಲಭ್ಯ ಒದಗಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ಉತ್ತಮ ಜನಪರ ಆಡಳಿತ ನೀಡಿದ್ದು, ಬರುವ ಚುನಾವಣೆಯಲ್ಲೂ ಕಾಂಗ್ರೆಸ್‌ ಜಯಭೇರಿ ಭಾರಿಸಿ ಮತ್ತೆ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯಲಿದೆ. ಇದಕ್ಕಾಗಿ ಬೂತ್‌ ಮಟ್ಟದಲ್ಲಿ ಪಕ್ಷದ ಪ್ರಚಾರ ಆರಂಭಿಸಬೇಕು ಎಂದು ಹೇಳಿದರು. 

ಬ್ಲಾಕ್‌ ಕಾಂಗ್ರೆಸ್‌ ಮೈನಾರಿಟಿ ಘಟಕದ ಉಪಾಧ್ಯಕ್ಷ ಬಾಬುಮಿಯ್ನಾ ಮಾತನಾಡಿ, ಜಾತಿ ಮತ್ತು ಧರ್ಮ ನೋಡದೆ ಸರ್ವ ಜನಾಂಗದ ಬಡವರ ಕಣ್ಣೀರು ಒರೆಸುವ ಕಾರ್ಯವನ್ನು ಕಾಂಗ್ರೆಸ್‌ ಮಾಡಿಕೊಂಡು ಬಂದಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಅಲ್ಪಸಂಖ್ಯಾತರ ಒಗ್ಗಟ್ಟಿನಲ್ಲಿ ಬಿರುಕು ಮೂಡಿಸುವ ಕೆಲಸಕ್ಕೆ ಕೆಲವರು ಕೈಹಾಕಿದ್ದಾರೆ.

ಸಚಿವ ಪ್ರಿಯಾಂಕ್‌ ಖರ್ಗೆ ಅವರು ಕ್ಷೇತ್ರಕ್ಕೆ ಕೊಟ್ಟ ಅನೇಕ ಅಭಿವೃದ್ಧಿ ಕೊಡುಗೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು. ಆ ಮೂಲಕ ಮತ್ತೂಮ್ಮೆ ಪ್ರಿಯಾಂಕ್‌ ಖರ್ಗೆ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಹೇಳಿದರು. 

ಮೈನಾರಿಟಿ ಘಟಕದ ಜಿಲ್ಲಾಧ್ಯಕ್ಷ ಫಾತ್ಯಾ ಖಾನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸೈಯ್ಯದ್‌ ಮಹೆಮೂದ್‌ ಸಾಹೇಬ, ಮೈನಾರಿಟಿ ಘಟಕದ ಅಧ್ಯಕ್ಷ ಮುಕುಲ್‌ ಜಾನಿ, ಮುಖಂಡರಾದ ಟೋಪಣ್ಣ ಕೋಮಟೆ, ಜಾಫರ್‌ ಪಟೇಲ, ಚಂದ್ರಸೇನ ಮೇನಗಾರ, ಇಂದ್ರಜೀತ ಸಿಂಗೆ, ಭಶೀರ ಖುರೇಶಿ ಪಾಲ್ಗೊಂಡಿದ್ದರು.

Advertisement

ಪದಾಧಿಕಾರಿಗಳ ಪಟ್ಟಿ: ವಾಡಿ ಬ್ಲಾಕ್‌ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಕ್ಕುಲ್‌ ಜಾನಿ ಅವರು ಅಲ್ಪಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಿದರು. ಉಪಾಧ್ಯಕ್ಷರಾಗಿ ಬಾಬುಮಿಯ್ನಾ, ಅಜೀಜ್‌ ತೇಲಿ ವಾಡಿ, ನಾಶೀರ ಹುಸೇನ್‌, ಅಲ್ತಾಫ್‌ ಸೌದಾಗರ, ಜಾವೇದ್‌ ಅಲಿ ನಾಲವಾರ, ಶೇರಅಲಿ ಇಂಗಳಗಿ, ಮಶಾಖಸೇಠ ರಾವೂರ ಹಾಗೂ ನಝೀರ್‌ ಪಟೇಲ ಹೊನಗುಂಟಾ, ಸಹ ಸಂಚಾಲಕರಾಗಿ ಯುನ್ಯೂಸ್‌ ಪ್ಯಾರೆ ರಾವೂರ, ಬಾಬು ಅತ್ತಾರ ಬಳವಡಗಿ, ಮಹ್ಮದ್‌ ಗೌಸ್‌ ವಾಡಿ, ಮಹ್ಮದ್‌ ಫಜಲ್‌ ನಾಲವಾರ, ಫರ್ವೇಜ್‌ ಪಟೇಲ್‌ ಕೊಂಚೂರ, ಖದೀರ ಕಮರವಾಡಿ, ಜಾವೇದ್‌ ಪಟೇಲ್‌ ಕುಂದನೂರ, ಮುನ್ನಾ ಪಟೇಲ್‌ ಭಂಕೂರ, ಭಾಷಾಮಿಯ್ನಾ ಕಡಬೂರ, ಮುಕುºಲ್‌ ಖುರೇಶಿ ನಾಲವಾರ, ಮಹೆಮೂದ್‌ ತರಕಸಪೇಟ್‌, ಮಹೆಬೂಬ್‌ ಸೂಗೂರ (ಎನ್‌), ಮಹ್ಮದ್‌ ಎಕ್ಬಾಲ್‌ ತುನ್ನೂರ, ಮಹ್ಮದ್‌ ಹುಸೇನಬಾಬಾ ರಾವೂರ, ಸಾಲೋಮನ ರಾಜಣ್ಣ ವಾಡಿ ಆಯ್ಕೆಯಾದರು

Advertisement

Udayavani is now on Telegram. Click here to join our channel and stay updated with the latest news.

Next