Advertisement

ಕಾಂಗ್ರೆಸ್‌ ಮುಳುಗುತ್ತಿರುವ ಹಡಗು: ಅಶೋಕ್‌

12:20 PM Mar 31, 2017 | |

ನಂಜನಗೂಡು: ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವ ಹಡಗಾಗಿದ್ದು  ಆ ಪಕ್ಷದಿಂದ ಒಬ್ಬೊಬ್ಬ ನಾಯಕರು ಅಲ್ಲಿಂದ ಹೊರಬರುವ ಪ್ರಯತ್ನ ನಡೆಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಆರ್‌.ಅಶೋಕ್‌ ಹೇಳಿದರು.

Advertisement

ಉಪಚುನಾವಣೆಯಲ್ಲಿ ಬಿಜೆಪಿಯ ಪ್ರಸಾದ್‌ ಪರ ಗುರುವಾರ ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿ ನಂತರ  ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಈಗ ಮುಳುಗುತ್ತಿರುವ ಹಡಗಾಗಿದೆ. ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಇದು ಸಾಬೀತಾಗಿದೆ ಎಂದರು.

ಸಿಎಂ ಸಿದ್ಧರಾಮಯ್ಯ ತಮ್ಮ ಮಂತ್ರಿಮಂಡಲದ ಸರ್ವ ಸದಸ್ಯರೊಂದಿಗೆ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರಗಳಲ್ಲಿ ಏಳು ದಿನಗಳ ಕಾಲ ಠಿಕಾಣಿ ಹೂಡಿ ಚುನಾವಣಾ ಪ್ರಚಾರ ನಡೆಸುವುದಾಗಿ ಹೇಳಿದ್ದಾರೆ. ಎರಡು ಉಪ ಚುನಾವಣೆಗಳನ್ನು ಎದುರಿಸುವುದಕ್ಕಾಗಿ ಓರ್ವ ಮುಖ್ಯಮಂತ್ರಿ ಅಷ್ಟು ದಿನ ಪ್ರಚಾರ ನಡೆಸುವ ಅಗತ್ಯವೇ ಇಲ್ಲ.

ಆದರೆ, ಗುಪ್ತಚಾರ ದಳದವರು ಈ ಕ್ಷೇತ್ರಗಳಲ್ಲಿ ಜನರು ಕಾಂಗ್ರೆಸ್‌  ವಿರುದ್ಧ ತಿರುಗಿನಿಂತಿರುವ ಬಗ್ಗೆ ಮಾಹಿತಿ ನೀಡಿರಬಹುದು. ಹಾಗಾಗಿ ರಾಜಾÂದ್ಯಂತ ಭೀಕರ ಬರ ಆವರಿಸಿ ಕೊಂಡಿದ್ದರೂ ಜನತೆಕಷ್ಟ ಕಡೆಗಣೆಸಿದ ಮುಖ್ಯಮಂತ್ರಿಗಳು  ಸೋಲಿನ ಭೀತಿ ಯಿಂದ ಇಲ್ಲಿಯೇ ಮೊಕ್ಕಾಂ ಹೂಡುವ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಟೀಕಿಸಿದರು.

ಕಾಂಗ್ರೆಸ್‌ಗೆ  ಉಳಿಗಾಲವಿಲ್ಲ ಎಂದು ಮನಗಂಡಿರುವ ಕಾಂಗ್ರೆಸ್‌ ಮುಖಂಡರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಎಸ್‌.ಎಂ. ಕೃಷ್ಣ  ಸೇರಿದಂತೆ ಈಗಾಗಲೇ ಹಲವು ನಾಯಕರರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದರು.

Advertisement

ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿರುವ ಕೆಲವರು ಸೇರಿದಂತೆ ಹಲವು ಮುಖಂಡರು ಆ ಪಕ್ಷದಿಂದ ಈಗಾಗಲೇ ಒಂದು ಹೆಜ್ಜೆ ಹೊರಗಿಟ್ಟಿದ್ದು ಬಿಜೆಪಿಗೆ ಸೇರ್ಪಡೆಗೊಳ್ಳಲು ಸಜಾjಗಿದ್ದಾರೆ ಎಂದು ಭವಿಷ್ಯ ನುಡಿದರು. ಮಾಜಿ ಸಚಿವ ಎಸ್‌.ಎ. ರಾಮದಾಸ್‌, ನಟ ಜಗ್ಗೇಶ್‌, ಎಲ್‌.ನಾಗೇಂದ್ರ, ಬಸವೇಗೌಡ, ಎನ್‌.ವಿ.ಪಣೀಶ್‌, ಎಸ್‌ ಮಹದೇವಯ್ಯ, ಬಿ.ಪಿ.ಬೋರೇಗೌಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next