Advertisement

ಮನಪಾ ಆರ್ಥಿಕ ಸ್ಥಿತಿಗತಿಯ ಶ್ವೇತ ಪತ್ರಕ್ಕೆ ಕಾಂಗ್ರೆಸ್ ಒತ್ತಾಯ

12:06 PM Dec 31, 2022 | Team Udayavani |

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಆರ್ಥಿಕ ಸ್ಥಿತಿಗತಿ ಕುರಿತಂತೆ ಶ್ವೇತ ಪತ್ರ ಹೊರಡಿಸಬೇಕು ಎಂದು ಮಹಾನಗರ ಪಾಲಿಕೆಯ ಪ್ರತಿಪಕ್ಷವಾಗಿರುವ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ.

Advertisement

ಮಲ್ಲಿಕಟ್ಟೆಯ ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಒತ್ತಾಯ ಮಾಡಿದ ಪಾಲಿಕೆಯ ವಿಪಕ್ಷ ನಾಯಕ ನವೀನ್ ಡಿಸೋಜಾ, ಚರಂಡಿ, ಆವರಣಗೋಡೆಯಂತಹ ಕಾಮಗಾರಿಗಳಿಗೆ ಸಾಲ ಪಡೆಯುವುದನ್ನು ಕಾಂಗ್ರೆಸ್ ವಿರೋಽಸುತ್ತದೆ ಎಂದರು.

ಶುಕ್ರವಾರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ 30 ಕೋಟಿ ರೂ.ಗಳ ಸಾಲಕ್ಕೆ ಮೇಯರ್ ವಿಪಕ್ಷ ಸದಸ್ಯರ ಜತೆ ಚರ್ಚಿಸದೆ, ಸಲಹೆ ಪಡೆಯದೆ ಪೂರ್ವ ಮಂಜೂರಾತಿ ನೀಡಿದ್ದಾರೆ. ಇದಕ್ಕೆ ಸಭೆಯಲ್ಲಿ ಈಗಾಗಲೇ ಆಕ್ಷೇಪ ವ್ಯಕ್ತಪಡಿಸಲಾಗಿದೆ.  ಸಣ್ಣ ಪುಟ್ಟ ಕಾಮಗಾರಿಗಳಿಗೆ ಕೆಯುಡಿಎಫ್ ಸಿಯ ಸಾಲ ಪಡೆಯುವ ದುರ್ಗತಿ ಮಹಾನಗರ ಪಾಲಿಕೆಗೆ ಬಂದಿದೆಯೇ? ಎಂದು ಪ್ರಶ್ನಿಸಿದ ಅವರು ಈ ಬಗ್ಗೆ ಮುಖ್ಯಮಂತ್ರಿ, ನಗರಾಭಿವೃದ್ಧಿ ಸಚಿವರು ಹಾಗೂ ಕಾರ್ಯದರ್ಶಿಗೆ ಪತ್ರ ಬರೆಯಲಾಗುವುದು ಎಂದರು.

ಮುಂಬರುವ ಚುನಾವಣೆಯ ಸಂದರ್ಭದಲ್ಲಿ ಈ ವಿಷಯವನ್ನು ಜನತೆಯ ಮುಂದಿಡಲಾಗುವುದು. ಇದಕ್ಕಾಗಿ ಹೋರಾಟ ಮಾಡುವ ಕುರಿತಂತೆ ಮುಂದಿನ ದಿನಗಳಲ್ಲಿ ಪಕ್ಷದ ನಾಯಕರ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು ಎಂದು ನವೀನ್ ಡಿಸೋಜಾ ಹೇಳಿದರು.

ಮನಪಾದ ಕ್ರಿಯಾ ಯೋಜನೆ ರೂಪಿಸಲು ಅವಕಾಶ ಇರುವುದು ಮೇಯರ್‌ಗೆ ಮಾತ್ರ. ಶಾಸಕರು ಸರಕಾರದಿಂದ ವಿಶೇಷ ಅನುದಾನದ ತಂದು ಯೋಜನೆಗಳನ್ನು ರೂಪಿಸಲಿ ಎಂದು ಮನಪಾ ಹಿರಿಯ ಸದಸ್ಯ ಶಶಿಧರ ಹೆಗ್ಡೆ ಹೇಳಿದರು.

Advertisement

ಗೋಷ್ಠಿಯಲ್ಲಿ ಅನಿಲ್ ಕುಮಾರ್, ಅಬ್ದುಲ್ ರವೂಫ್, ಅಶ್ರಫ್ , ಕೇಶವ ಮರೋಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next