Advertisement

ಖರ್ಗೆಯವರನ್ನು ಸಿಎಂ ಮಾಡಲು’ಕೈ’ಹೈಕಮಾಂಡ್ ಒಪ್ಪಿರಲಿಲ್ಲ: ದೇವೇಗೌಡ ಬಾಂಬ್

09:46 AM Nov 12, 2019 | keerthan |

ಕಲಬುರಗಿ: ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿರಲಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸೋಮವಾರ ಬಹಿರಂಗ ಪಡಿಸಿದರು.

Advertisement

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆರನ್ನು ಸಿಎಂ ಮಾಡಿ.  ನಿಮಗೆ ಬೆಂಬಲ ಸಂಪೂರ್ಣ ನೀಡುತ್ತೇವೆ ಅಂತಾ ಕಾಂಗ್ರೆಸ್ ಹೈಕಮಾಂಡ್ ಗೆ ಹೇಳಿದ್ದೆ ಎಂದರು.

ಖರ್ಗೆ ಅವರು ಕೂಡ ಹೈಕಮಾಂಡ್ ಒಪ್ಪಿದರೆ ಮುಖ್ಯಮಂತ್ರಿ ಆಗೋದಾಗಿ ಹೇಳಿದ್ದರು.  ಖರ್ಗೆ ಸಿಎಂ ಆಗುವುದಕ್ಕೆ ಸಿದ್ದರಾಮಯ್ಯನವರು ಸಹ ಯಾವುದೇ ಆಕ್ಷೇಪ ಎತ್ತಿರಲಿಲ್ಲ. ಆದರೆ ಕಾಂಗ್ರೆಸ್ ಹೈಕಮಾಂಡ್ ಕುಮಾರಸ್ವಾಮಿ ಆಗಬೇಕು ಅಂತ ಹೇಳಿದರು. ಕಾಂಗ್ರೆಸ್ ಹೈಕಮಾಂಡ್ ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಲು ಒಪ್ಪಲಿಲ್ಲ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next