Advertisement

Loksabha ಚುನಾವಣೆಗೆ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ: ಮಂಕಾಳು ವೈದ್ಯ

05:05 PM Aug 15, 2023 | Team Udayavani |

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಗೆಲ್ಲುವೆವು. ಜನರ ಕೆಲಸ ಮಾಡುತ್ತಿರುವ ನಮಗೆ ವಿಶೇಷವಾಗಿ ತಯಾರಿ ಬೇಕೆಂದಿಲ್ಲ. ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರಸ್ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ‌ಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದರು.

Advertisement

ಕಾರವಾರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳನ್ನು ಈಡೇರಿಸಿ ನುಡಿದಂತೆ ನಡೆದಿದ್ದೇವೆ. ಹಾಗಾಗಿ ಕಾಂಗ್ರೆಸ್ ಸುಲಭವಾಗಿ ಕೆನರಾ ಕ್ಷೇತ್ರದಲ್ಲಿ ಗೆಲ್ಲಲಿದೆ. ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದಿಂದ ಜನರ ಕಷ್ಟಗಳಿಗೆ ನಮ್ಮ ಸರ್ಕಾರ‌ ನೆರವಾಗಿದೆ. ಹಾಗಾಗಿ ಜಿಲ್ಲೆಯ ಲಕ್ಷಾಂತರ ಕುಟುಂಬಗಳನ್ನು ಸರ್ಕಾರ ತಲುಪಿದೆ. ಇಷ್ಟು ಸಾಕು ಎಂದರು.

‌ಸರ್ಕಾರಗಳು ಜನರಿಗೆ ನೆರವಾಗಬೇಕು. ಅದನ್ನು ನಾವು ಮಾಡುತ್ತಿದ್ದೇವೆ ಎಂದು ಸಚಿವ ಮಂಕಾಳು ನುಡಿದರು.

ಯತ್ನಾಳ್ ಮನಸು ಸರಿ ಮಾಡಿಕೊಳ್ಳಲಿ:  ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹಿರಿಯರು. ಅವರು ಬಿಜೆಪಿ ಸರ್ಕಾರ ಇದ್ದಾಗ ಮುಖ್ಯಮಂತ್ರಿಯಾಗಲು ಎರಡು ಸಾವಿರ ಕೋಟಿಯನ್ನು ಬಿಜೆಪಿ ಹೈಕಮಾಂಡ್ ಗೆ ಕೊಡಬೇಕು ಎಂದು ಹೇಳಿದ್ದರು. ನಮ್ಮ ಸರ್ಕಾರ ಗಟ್ಟಿ ಇದೆ. ಐದು ವರ್ಷ ಅಧಿಕಾರದಲ್ಲಿ ಇರುತ್ತೇವೆ. ಇದೇ ಸತ್ಯ. ಲೋಕಸಭಾ ಚುನಾವಣೆ ನಂತರ ಬಿಜೆಪಿ ಸ್ಥಿತಿ ಏನಾಗಲಿದೆ ಕಾದು ನೋಡಿ. ಅವರಿಗೆ ಒಬ್ಬ ವಿರೋಧ ಪಕ್ಷದ ನಾಯಕನ ಆಯ್ಕೆ ಸಾಧ್ಯವಾಗಿಲ್ಲ ಎಂದರು‌.

ಬಿಜೆಪಿ ಚುನಾವಣಾ ಸಮಯದಲ್ಲಿ ‌ಮಾಡಿದ ಪಾಪದ ಕೆಲಸಕ್ಕೆ ನಾವು ಹಣ ಜೋಡಿಸಿ ಗುತ್ತಿಗೆದಾರರನ್ನು ರಕ್ಷಿಸಬೇಕಿದೆ. ಸಾವಿರಾರು ಕೋಟಿ ಹಣ ಇಲ್ಲದೆ, ಅನುದಾನ ಕೊಡದೆ ಕೆಲಸಕ್ಕೆ ಅಡಿಗಲ್ಲು ಹಾಕಿ, ಜನರಿಗೆ, ಗುತ್ತಿಗೆದಾರರಿಗೆ‌ ಮೋಸ‌ಮಾಡಿ ಬಿಜೆಪಿ ಸೋತಿದೆ. ಆ ಪಾಪದ ಕೆಲಸ ನಾವು ಸರಿ ಮಾಡುತ್ತಿದ್ದೇವೆ ಎಂದು ಸಚಿವ ವೈದ್ಯ ಹೇಳಿದರು.

Advertisement

ಶಾಸಕ ಸತೀಶ್ ಸೈಲ್, ಡಿಸಿ ಗಂಗೂಬಾಯಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next