Advertisement

ವೈದ್ಯಕೀಯ ಶಿಕ್ಷಣವನ್ನು ದುಬಾರಿಯನ್ನಾಗಿ ಮಾಡಿದ್ದು ಕಾಂಗ್ರೆಸ್: ಬಿಜೆಪಿ ಆರೋಪ

01:22 PM Mar 03, 2022 | Team Udayavani |

ಬೆಂಗಳೂರು: ಭಾರತದಾದ್ಯಂತ ವೈದ್ಯಕೀಯ ಶಿಕ್ಷಣವನ್ನು ಬಲಪಡಿಸುವ ಸಲುವಾಗಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಕೇವಲ 7 ವರ್ಷಗಳಲ್ಲಿ 209 ಹೊಸ ವೈದ್ಯಕೀಯ ಕಾಲೇಜುಗಳನ್ನು ಸೇರಿಸಿದೆ. ಕಾಂಗ್ರೆಸ್ ಇಷ್ಟು ವೇಗದಲ್ಲಿ ಕಾಲೇಜುಗಳನ್ನು ಕಟ್ಟಿದ್ದರೆ ನಮ್ಮ ವಿದ್ಯಾರ್ಥಿಗಳು ವ್ಯಾಸಂಗಕ್ಕಾಗಿ ಹೊರ ದೇಶಗಳಿಗೆ ಹೋಗಬೇಕಾಗುತ್ತಿರಲಿಲ್ಲ ಎಂದು ಬಿಜೆಪಿ ಆರೋಪಿಸಿದೆ.

Advertisement

ಈ ಕುರಿತು ‘ಕೂ’ ಮಾಡಿರುವ ರಾಜ್ಯ ಬಿಜೆಪಿ, ಕೇವಲ 7 ವರ್ಷಗಳಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರವು ಪದವಿಪೂರ್ವ ಸೀಟುಗಳನ್ನು 72% ಮತ್ತು ಸ್ನಾತಕೋತ್ತರ ಸೀಟುಗಳನ್ನು 78% ರಷ್ಟು ಹೆಚ್ಚಿಸಿದೆ. ಇದು ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣವನ್ನು ಭಾರತದಲ್ಲಿಯೇ ಪಡೆಯಲು ನೆರವಾಗಿದೆ. ತನ್ನ ಆಳ್ವಿಕೆಯಲ್ಲಿ ಹೆಚ್ಚು ಸ್ಥಾನಗಳನ್ನು ಸೇರಿಸದಿರಲು ಕಾಂಗ್ರೆಸ್ ಗೆ ತಡೆಯಾಗಿದ್ದು ಏನು ಎಂದು ಪ್ರಶ್ನಿಸಿದೆ.

ಇದನ್ನೂ ಓದಿ:ವಿವಾದಾತ್ಮಕ ಹೇಳಿಕೆ: ಮಹಾರಾಷ್ಟ್ರ ರಾಜ್ಯಪಾಲರ ವಿರುದ್ಧ ಆಡಳಿತ ಪಕ್ಷದ ಪ್ರತಿಭಟನೆ

ಭಾರತದಾದ್ಯಂತ ಹೆಚ್ಚಿನ ಖಾಸಗಿ ವೈದ್ಯಕೀಯ ಕಾಲೇಜುಗಳು ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ನಾಯಕರ ಒಡೆತನದಲ್ಲಿದೆ ಎಂಬುದು ಸತ್ಯ. ಕಾಲೇಜುಗಳು ವಿಧಿಸುತ್ತಿರುವ ಹೆಚ್ಚಿನ ಶುಲ್ಕ ನಮ್ಮ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡುವುದಕ್ಕೆ ಪ್ರಮುಖ ಕಾರಣವಾಗಿದೆ. ವೈದ್ಯಕೀಯ ಶಿಕ್ಷಣವನ್ನು ಕಾಂಗ್ರೆಸ್ ದುಬಾರಿಯನ್ನಾಗಿ ಮಾಡಿದ್ದು ಏಕೆ? ವೈದ್ಯಕೀಯ ಶಿಕ್ಷಣದಲ್ಲಿ ಆತ್ಮನಿರ್ಭರ ಭಾರತವನ್ನು ನಿರ್ಮಿಸಲು, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಸೀಟುಗಳನ್ನು ಹೆಚ್ಚಿಸಿದೆ ಮತ್ತು ವೈದ್ಯಕೀಯ ಶಿಕ್ಷಣವನ್ನು ಭಾರತದಲ್ಲಿ ಕೈಗೆಟುಕುವಂತೆ ಮಾಡಿದೆ. ಭಾರತವನ್ನು ಅಭಿವೃದ್ಧಿಪಡಿಸುವ ದೂರದೃಷ್ಟಿ ಕಾಂಗ್ರೆಸ್‌ಗೆ ಏಕೆ ಇರಲಿಲ್ಲ ಎಂದು ಬಿಜೆಪಿ ಪ್ರಶ್ನಿಸಿದೆ.

Koo App

Advertisement

Udayavani is now on Telegram. Click here to join our channel and stay updated with the latest news.

Next