ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರೀ ಬಹು ಮತದೊಂದಿಗೆ ಅಧಿಕಾರಕ್ಕೆ ತಂದಿರುವ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ಬಗ್ಗೆ ಜಿಲ್ಲಾದ್ಯಂತ ಭಾರೀ ಸದ್ದು ಆಗು ತ್ತಿದ್ದು, ಇದರ ಪರಿಣಾಮ ಜಿಲ್ಲೆಯಲ್ಲೂ ಕೂಡ ಬೆಸ್ಕಾಂಗೆ ವಿದ್ಯುತ್ ಬಿಲ್ ಪಾವ ತಿಗೆ ಗ್ರಾಹಕರು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ.
ಚುನಾವಣೆ ಘೋಷಣೆಗೂ ಮೊದಲು ಕಾಂಗ್ರೆಸ್ ಪಕ್ಷ ಚುನಾ ವಣೆ ಪ್ರಣಾಳಿಕೆ ಬಿಡುಗಡೆಗೂ ಮೊದಲೇ ಪ್ರತಿ ಬಿಪಿ ಎಲ್ ಕುಟುಂಬಕ್ಕೆ ತಲಾ 10 ಕೆ.ಜಿ ಅಕ್ಕಿ, ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಮನೆಯ ಯಾಜಮಾನಿಗೆ ಮಾಸಿಕ 2000 ರೂ., ಎಲ್ಲ ಮಹಿಳೆಯರಿಗೆ ಬಸ್‌ನಲ್ಲಿ ಉಚಿತ ಪ್ರಯಾನ ಸೇರಿದಂತೆ ಹಲವು ಗ್ಯಾರೆಂಟಿ ಕಾರ್ಯಗಳನ್ನು ವಿತರಿಸಿ ಮತ ಪಡೆದು ಅಧಿಕಾರಕ್ಕೆ ಬಂದಿದೆ. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ದಿನಗಣನೆ ಶುರುವಾಗಿರುವ ಬೆನ್ನಲ್ಲೇ ಬೆಸ್ಕಾಂಗೆ ಭಾರೀ ಹೊಡೆತ ಬಿದ್ದಿದೆ. ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಕಾರ್ಡ್‌ಗಳ ಅನುಷ್ಠಾನಕ್ಕೆ ಸರ್ಕಾರ ಅಸ್ತಿತ್ವಕ್ಕೆ ಬಂದು ಸಿಎಂ ಸೇರಿದಂತೆ ಸಚಿವ ಸಂಪುಟ ರಚನೆ ಆಗಬೇಕಿದೆ. ಆದರೆ ಅದಕ್ಕೂ ಮೊದಲೇ ಜಿಲ್ಲೆಯ ಜನತೆ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್‌ಗಳ ಅನುಷ್ಠಾನ ಯಾವಾಗಿನಿಂದ ಜಾರಿ ಎಂದು ಎದುರು ನೋಡುತ್ತಿದ್ದಾರೆ.
ಗ್ಯಾರೆಂಟಿ ಕಾರ್ಡ್ ಕೊಟ್ಟಿದ್ದಾರೆ, ಹೋಗಿ: ಜಿಲ್ಲೆಯಲ್ಲಿ ಮಾಸಿಕ ವಿದ್ಯುತ್ ಬಿಲ್ ವಸೂಲಿಗೆ ಹೋಗುತ್ತಿರುವ ಬೆಸ್ಕಾಂ ಸಿಬ್ಬಂದಿಗೆ ಗ್ರಾಹಕರು ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ತೋರಿಸಿ ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಿಸಿದೆ, ನಮಗೆ ಕಾರ್ಡ್ ಕೊಟ್ಟಿದ್ದಾರೆ, ನಾವು ಬಿಲ್ ಕಟ್ಟಲ್ಲ ಹೋಗಿ ಎಂದು ಬೆಸ್ಕಾಂ ಸಿಬ್ಬಂದಿಯನ್ನು ವಾಪಸ್ ಕಳುಹಿಸುತ್ತಿದ್ದಾರೆ. ಇದರ ನಡುವೆ ಬೆಸ್ಕಾಂ ಸಿಬ್ಬಂದಿ ಸರ್ಕಾರದ ಆದೇಶ ಬಂದಿಲ್ಲ. ಅಲ್ಲಿವರೆಗೂ ಬಳ ಸಿದ ವಿದ್ಯುತ್ ಬಿಲ್ ಪಾವತಿಸಬೇಕೆಂದು ಕೇಳಿಕೊಳ್ಳು ತ್ತಿದ್ದರೂ ಜನ ಅದಕ್ಕೆ ಸೊಪ್ಪು ಹಾಕುತ್ತಿಲ್ಲ. ಇದರಿಂದ ಜಿಲ್ಲೆಯಲ್ಲಿ ಸದ್ಯ “ಕಾಂಗ್ರೆಸ್ ಗ್ಯಾರೆಂಟಿ’ ಪರಿಣಾಮ ಬಿಲ್ ವಸೂಲಿಯಲ್ಲಿ ಹಿನ್ನಡೆ ಆಗುತ್ತಿದೆ.
ಜಿಲ್ಲೆಯಲ್ಲಿವೆ 93,440 ಕುಟುಂಬಗಳು: ಜಿಲ್ಲೆಯಲ್ಲಿ ಬರೋಬ್ಬರಿ 93,440 ಕುಟುಂಬಗಳು ಗೃಹ ಬಳಕೆಯ ವಿದ್ಯುತ್ ಬಳಸುತ್ತಿವೆ. ಏಪ್ರೀಲ್ ತಿಂಗಳಲ್ಲಿ ಒಟ್ಟು 3.50 ಕೋಟಿ ವಿದ್ಯುತ್ ಬಿಲ್ ವಸೂಲಿ ಆಗಬೇಕಿತ್ತು. ಆದರೆ ಕೇವಲ 67 ಲಕ್ಷ ಸಂಗ್ರಹ ರೂ. ಮಾತ್ರ ಇಲ್ಲಿವರೆಗೂ ಸಂಗ್ರಹವಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಬೆಸ್ಕಾಂ ಹಿರಿಯ ಅಧಿಕಾರಿಯೊಬ್ಬರು ಉದಯವಾಣಿಗೆ ತಿಳಿಸಿದರು.
ಚಿಕ್ಕಬಳ್ಳಾಪುರ ಉಪ ವಿಭಾಗಕ್ಕೆ ಶಿಡ್ಲಘಟ್ಟ, ಚಿಂತಾಮಣಿ ಹೊರತುಪಡಿಸಿ ಮಂಚೇನಹಳ್ಳಿ, ಚೇಳೂರು, ಬಾಗೇಪಲ್ಲಿ , ಗುಡಿಬಂಡೆ ಹಾಗೂ ಗೌರಿಬಿದನೂರು ಸೇರಲಿದ್ದು ಕೋಟ್ಯಾಂತರ ರು, ವಿದ್ಯುತ್ ಬಿಲ್ ವಸೂಲಾತಿ ಬಾಕಿ ಇದೆ.