Advertisement

Congress Government; ಕಾಂಗ್ರೆಸ್‌ ಹೈಕಮಾಂಡ್‌ಗೂ ವಾಲ್ಮೀಕಿ ನಿಗಮದ ಹಣ: ವಿಜಯೇಂದ್ರ

10:39 PM Jul 20, 2024 | Team Udayavani |

ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಕಾಂಗ್ರೆಸ್‌ ಹೈಕಮಾಂಡ್‌ಗೂ ತಲುಪಿದೆ. ನೆರೆಯ ತೆಲಂಗಾಣ ಹಾಗೂ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲೂ ಬಳಕೆಯಾಗಿದ್ದು, ಅದೇ ಹಣದಲ್ಲಿ ಹೆಂಡ ಖರೀದಿಸಿ ಹಂಚಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಹಗರಣದ ಹಣದಲ್ಲಿ ರಾಜ್ಯದ ಕಾಂಗ್ರೆಸ್‌ ಸಂಸದರಿಂದ ಹೆಂಡ ಖರೀದಿಯಾಗಿದೆ ಎಂದು ಇಡಿ ನಿರ್ದೇಶಕರೊಬ್ಬರಿಂದ ತಿಳಿದು ಬಂದಿದೆ. ಸರಕಾರ ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಾಗೇಂದ್ರ ಅನುಭವಿ ರಾಜಕಾರಣಿ, ಮುಖ್ಯಮಂತ್ರಿಗೆ ಆಪ್ತ. ಆರೋಪಿ ಸತ್ಯನಾರಾಯಣ ವರ್ಮ ಹಗರಣ ಮಾಡುವಲ್ಲಿ ನಿಪುಣ ಆಗಿದ್ದರಿಂದಲೇ ಈ ಭ್ರಷ್ಟಾಚಾರ ಮಾಡಲು ಆಯ್ಕೆ ಮಾಡಿಕೊಳ್ಳಲಾಗಿದೆ. ಇದೇ ರೀತಿ ಭ್ರಷ್ಟಾಚಾರ ಮಾಡುತ್ತಾ ಹೋದರೆ ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ಸರಕಾರ ಪತನವಾಗಲಿದೆ ಎಂದರು.

ನಿಗಮ ಹಗರಣದಲ್ಲಿ ಸಿಎಂ ಏಕಾಂಗಿ: ಸಂಸದ ಕಾರಜೋಳ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಅವರ ಪಕ್ಕದಲ್ಲಿ ಕುಳಿತುಕೊಳ್ಳಲು, ಸದನದಲ್ಲಿ ಸಮರ್ಥಿಸಿಕೊಳ್ಳಲು ಯಾವುದೇ ಸಚಿವ-ಶಾಸಕನೂ ಮುಂದೆ ಬರುತ್ತಿಲ್ಲ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಅವಧಿಯ 21 ಹಗರಣಗಳಿವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಬಂದು ಒಂದು ವರ್ಷ ಮೂರು ತಿಂಗಳಾದರೂ ತನಿಖೆ ಮಾಡದೇ ಕಡುಬು ತಿನ್ನುತ್ತಿದ್ದರಾ? ಈಗ ಹತಾಶರಾಗಿ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.

Advertisement

ವಾಲ್ಮೀಕಿ ಹಗರಣ ನಾನು ಮಾಡಿಲ್ಲ, ಅಧಿಕಾರಿಗಳು ಮಾಡಿದ್ದಾರೆ ಎಂದು ಹೇಳುವ ಸಿದ್ದರಾಮಯ್ಯನವರೇ ಹಾಗಾದರೆ ಮುಖ್ಯಮಂತ್ರಿಯಾ ನಿಮ್ಮ ಪಾತ್ರವೇನು? ನೀವು ಅಸಹಾಯಕರಾ? ಅಧಿಕಾರಿಗಳಿಗೆ ಹಗರಣ ಮಾಡಲು ಏಕೆ ಬಿಟ್ಟಿದ್ದೀರಿ ಎಂದು ಪ್ರಶ್ನಿಸಿದರು.

ಸರಕಾರ ಭ್ರಷ್ಟಾಚಾರದಲ್ಲಿ ತೇಲುತ್ತಿದೆ: ರವಿಕುಮಾರ್‌
ರಾಜ್ಯ ಕಾಂಗ್ರೆಸ್‌ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ ಎಂದು ಬಿಜೆಪಿ ಮುಖಂಡ, ವಿಧಾನಪರಿಷತ್‌ ಸದಸ್ಯ ರವಿ ಕುಮಾರ್‌ ದೂರಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಮುಡಾದಲ್ಲಿ ಅಕ್ರಮವಾಗಿ ಸೈಟುಗಳನ್ನು ಪತ್ನಿಯ ಹೆಸರಿನಲ್ಲಿ ಪಡೆದಿರುವುದು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ 187 ಕೋಟಿ ರೂ. ತೆಲಂಗಾಣಕ್ಕೆ ಕಳುಹಿಸಿ ಲೋಕಸಭಾ ಚುನಾವಣೆ ಮಾಡಿರುವ ಬಗ್ಗೆ ಬಿಜೆಪಿ ನಿರಂತರ ಹೋರಾಟ ಮಾಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next