ಧಾರವಾಡ: ವಕ್ಫ್ ಸಂಬಂಧ ಜಿಲ್ಲೆಯ ಯಾವ ರೈತರಿಗೂ ನೋಟೀಸ್ ಕೊಟ್ಟಿಲ್ಲ. ಅದರಲ್ಲೂ ಕಾಂಗ್ರಸ್ ಸರ್ಕಾರ ಬಂದಾಗಿನಿಂದ ನೋಟೀಸ್ ಕೊಟ್ಟಿಲ್ಲ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಶುಕ್ರವಾರ (ನ.01) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ನೋಟೀಸ್ ಕೊಡಲಾಗಿದೆ. ಇದು ಕಾಂಗ್ರೆಸ್ ಬಂದಾಗಿನಿಂದ ನೋಟೀಸ್ ಹೋಗಿಲ್ಲ. 2018ನಲ್ಲಿ ಹೋಗಿರುವ ನೋಟೀಸ್ ಅದಾಗಿದ್ದು, ಇದು ನಮ್ಮ ಗಮನಕ್ಕೆ ಇಲ್ಲಿವರೆಗೂ ಬಂದಿರಲಿಲ್ಲ, ಈಗ ಗಮನಕ್ಕೆ ಬಂದಿದೆ ಎಂದರು.
ಬರುವ ಸೋಮವಾರ ಈ ಸಂಬಂಧ ಸಭೆ ಮಾಡಲು ಧಾರವಾಡ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಸಂಬಂಧಿಸಿದವರ ಜೊತೆ ಸಭೆ ಮಾಡಿ ವರದಿ ಕೊಡಲು ಹೇಳಿದ್ದೇನೆ ಎಂದರು.
ಮುಸ್ಲಿಂ ರೈತರ ಪಹಣಿಯಲ್ಲಿಯೂ ವಕ್ಫ್ ಪ್ರಸ್ತಾಪ ವಿಚಾರ ಮಾಡಲಾಗಿ, ವಕ್ಫ್ ಮಾತ್ರವಲ್ಲ, ಮುಜರಾಯಿ ಇಲಾಖೆಯ ಜಾಗವೂ ಕಬಳಿಕೆ ಆಗಿದೆ. ಕಂದಾಯ ಇಲಾಖೆ, ಬಿಡಿಎ ಸೈಟ್ ಗಳೂ ಕಬಳಿಕೆಯಾಗಿವೆ. ಹೀಗಾಗಿ ನೋಟೀಸ್ ಗಳನ್ನು ಕೊಟ್ಟಿರುತ್ತಾರೆ. ಇದಕ್ಕಾಗಿಯೇ ನ್ಯಾಯಾಧೀಕರಣ ಇದೆ ಎಂದರು.
ಉಪಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಸಂಡೂರನಲ್ಲಿ ಚೆನ್ನಾಗಿ ಪ್ರಚಾರ ನಡೆದಿದೆ. ಸಂಪೂರ್ಣ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಸಚಿವ ಲಾಡ್ ಹೇಳಿದರು.