Advertisement

ಅಣ್ಣ ರಮೇಶ್ ಕ್ಷೇತ್ರದಲ್ಲಿ ಸತೀಶಗೆ ಹಿನ್ನಡೆ, ಹೆಬ್ಬಾಳಕರ ಕ್ಷೇತ್ರದಲ್ಲೂ ‘ಕೈ’ಗೆ ಹಿನ್ನಡೆ

11:33 AM May 02, 2021 | Team Udayavani |

ಬೆಳಗಾವಿ: ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಅಣ್ಣ ರಮೇಶ ಜಾರಕಿಹೊಳಿಯ ಕ್ಷೇತ್ರ ಗೋಕಾಕದಲ್ಲಿ ಕಾಂಗ್ರೆಸ್ ನ ಸತೀಶ ಜಾರಕಿಹೊಳಿಗೆ ಈ ಕ್ಷಣದಲ್ಲಿ ಹಿನ್ನಡೆ ಆಗಿದ್ದು, ಜತೆಗೆ ಲಕ್ಷ್ಮೀ ಹೆಬ್ಬಾಳಕರ ಅವರ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ಕುಸಿದಿದೆ.

Advertisement

ಬೆಳಗಾವಿ ಲೋಕಸಭೆ ಚುನಾವಣಾ ಫಲಿತಾಂಶ ಕ್ಷಣ ಕ್ಷಣಕ್ಕೂ ರೋಚಕ ಪಡೆಯುತ್ತಿದ್ದು, ಬಿಜೆಪಿಯ ಹಾಗೂ ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಶುರುವಾಗಿದೆ. ಸದ್ಯ 11,831 ಸಾವಿರಕ್ಕೂ ಹೆಚ್ಚು ಮತಗಳ ಅಂತರವನ್ನು ಮಂಗಳಾ ಅಂಗಡಿ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ:ಬಂಗಾಳದಲ್ಲಿ ದೀದಿ, ಕೇರಳದಲ್ಲಿ ಎಲ್ ಡಿಎಫ್, ತಮಿಳುನಾಡಿನಲ್ಲಿ ಡಿಎಂಕೆ ಜಯದ ಓಟ

ಗೋಕಾಕ್ ಮತ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ. ಲಕ್ಷ್ಮೀ ಹೆಬ್ಬಾಳಕರ ಅವರ ಕ್ಷೇತ್ರದಲ್ಲಿ ಕಾಂಗ್ರೆಸ್ ಭಾರೀ ಹಿನ್ನಡೆ ಅನುಭವಿಸಿದೆ. ಇಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಶುಭಂ ಶೇಳಕೆ ಅತಿ ಹೆಚ್ಚು ಮತಗಳ ಮುನ್ನಡೆ ಸಾಧಿಸಿ ಮೊದಲನೇ ಸ್ಥಾನದಲ್ಲಿದ್ದಾರೆ. 11 ಗಂಟೆ ಸುಮಾರಿಗೆ ಎಂಇಎಸ್ ಗೆ 19536, ಬಿಜೆಪಿಗೆ 10,148 ಹಾಗೂ ಕಾಂಗ್ರೆಸ್ ಗೆ 9865 ಮತಗಳನ್ನು ಪಡೆದಿದೆ.

ಒಟ್ಟಾರೆ ಬೆಳಗಾವಿ ಕ್ಷೇತ್ರದಲ್ಲಿ ಇದುವರೆಗಿನ ಮತ ಎಣಿಕೆಯಲ್ಲಿ ಬಿಜೆಪಿಯ ಮಂಗಳಾ ಅಂಗಡಿಯವರ1,26,555 ಮತ, ಕಾಂಗ್ರೆಸ್ ನ ಸತೀಶ ಜಾರಕಿಹೊಳಿಯವರು 1,15,359 ಮತಗಳನ್ನು ಪಡೆದಿದ್ದಾರೆ. ಸದ್ಯ ಬಿಜೆಪಿ ಅಂತರ 11,196 ಮತಗಳ ಮುನ್ನಡೆ ಸಾಧಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next