Advertisement
ಬಿಜೆಪಿ ಪಾಲಿಗೆ ಗುರುದಾಸ್‌ಪುರ (ಸನ್ನಿ ದೇವಲ್), ಹೋಶಿಯಾರ್‌ಪುರ್ (ಸೋಮ್ ಪ್ರಕಾಶ್) ಒಲಿದಿದ್ದರೆ, ಅದರ ಮೈತ್ರಿ ಪಕ್ಷವಾದ ಶಿರೋಮಣಿ ಅಕಾಲಿದಳಕ್ಕೆ ಫಿರೋಜ್‌ಪುರ್ (ಸುಖೀàರ್ ಸಿಂಗ್ ಬಾದಲ್), ಬಟಿಂಡಾ (ಹರ್‌ಸಿಮ್ರತ್ ಕೌರ್ ಬಾದಲ್) ಒಲಿದು ಬಂದಿವೆ. ಇನ್ನು, ಕಾಂಗ್ರೆಸ್ ಪಕ್ಷಕ್ಕೆ ಫರೀದ್‌ಕೋಟ್ (ಮೊಹಮ್ಮದ್ ಸಾದಿಕ್), ಖದೂರ್ ಸಾಹಿಬ್ (ಜಸಿರ್ ಸಿಂಗ್ ಗಿಲ್), ಅಮೃತಸರ (ಗುರ್‌ಪ್ರೀತ್ ಸಿಂಗ್ ಔಜ್ಲಾ), ಜಲಂಧರ್ (ಸಂತೋಖ್ ಸಿಂಗ್ ಚೌಧರಿ), ಲೂಧಿಯಾನಾ (ರವನೀತ್ ಸಿಂಗ್ ಬಿಟ್ಟು ), ಫತೇಗಢ ಸಾಹಿಬ್ (ಅಮರ್ ಸಿಂಗ್), ಆನಂದ್‌ಪುರ್ ಸಾಹಿಬ್ (ಮನೀಶ್ ತಿವಾರಿ), ಪಟಿಯಾಲಾ (ಪ್ರಣೀತ್ ಕೌರ್) ದಕ್ಕಿವೆ. ಕಳೆದ ಬಾರಿ ನಾಲ್ಕು ಸ್ಥಾನ ಗಳಿಸಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಸಂಗ್ರೂರ್ (ಭಗವಂತ್ ಮನ್°) ಕ್ಷೇತ್ರ ಉಳಿಸಿಕೊಂಡಿದೆ. ಎಸ್‌ಪಿ, ಬಿಎಸ್‌ಪಿ, ಎಲ್‌ಎಸ್‌ಪಿ ಮೈತ್ರಿಯು ಶೂನ್ಯ ಸಾಧನೆ ಮಾಡಿದೆ.
ಸನ್ನಿ ದೇವಲ್ (ಬಿಜೆಪಿ), ಗುರುದಾಸ್‌ಪುರ
ಮನೀಶ್ ತಿವಾರಿ (ಕಾಂಗ್ರೆಸ್), ಆನಂದ್‌ಪುರ್ ಸಾಹಿಬ್
ಅಮರ್ ಸಿಂಗ್ (ಕಾಂಗ್ರೆಸ್), ಫತೇಗಢ್ ಸಾಹಿಬ್ ಸೋತ ಪ್ರಮುಖರು
ಪ್ರೇಮ್ ಸಿಂಗ್ (ಶಿರೋಮಣಿ), ಆನಂದ್‌ಪುರ್