Advertisement
ಅವಿರೋಧ ಆಯ್ಕೆ: ಬಾಗೇಪಲ್ಲಿ ಪುರಸಭೆ ಅಧ್ಯಕ್ಷಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಹಾಗೂ ಹಿಂಪಡೆಯಲು ಚುನಾವಣಾಧಿಕಾರಿ ಚುನಾವಣಾ ವೇಳಾಪಟ್ಟಿ ಹಾಗೂ ಸಮಯ ನಿಗದಿಪಡಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಗುಲ್ನಾಜ್ ಬೇಗಂ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಶ್ರೀನಿವಾಸ್ ಕಾಂಗ್ರೆಸ್ ಪಕ್ಷದಿಂದ ಮಾತ್ರ ನಾಮಪತ್ರ ಸಲ್ಲಿಸಿದ್ದಾರೆ. ಬೇರೆ ಸದಸ್ಯರು ನಾಮಪತ್ರ ಸಲ್ಲಿಸದ ಕಾರಣ ಹಾಜರಾಗಿರುವ ಸದಸ್ಯರ ಸಂಖ್ಯೆ ಪಡೆದುಕೊಂಡ ಚುನಾವಣಾಧಿಕಾರಿಗಳು ಅಧ್ಯಕ್ಷ ಸ್ಥಾನಕ್ಕೆ ಗುಲನ್ನಾಜ್‌ಬೇಗಂ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಶ್ರೀನಿವಾಸ್‌ರನ್ನು ಅವಿರೋಧ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.
Related Articles
Advertisement
ಸದಸ್ಯರಿಗೆ ಗೋವಾ ಟ್ರಿಪ್ : ಬಹುಮತಕ್ಕೆ ಅಗತ್ಯವಿರುವ ಸಂಖ್ಯಾಬಲವನ್ನು ಕಾಂಗ್ರೆಸ್ ಪಡೆದುಕೊಂಡಿದ್ದರೂ ಕೆಲ ಕಾಂಗ್ರೆಸ್ ಸದಸ್ಯರು ಪಕ್ಷಾಂತರಗೊಳ್ಳುತ್ತಾರೆಂದು ಶಂಕಿಸಿದ್ದ ಕಾಂಗ್ರೆಸ್ ಮುಖಂಡರು ಚುನಾವಣೆಗೂ ಐದು ದಿನಗಳ ಮುಂಚಿತವಾಗಿ ನಾಲ್ವರು ಪಕ್ಷೇತರ, 12 ಕಾಂಗ್ರೆಸ್ ಸದಸ್ಯರನ್ನು ಸೇರಿಸಿಕೊಂಡು ಗೋವಾ ಪ್ರವಾಸಕ್ಕೆ ತೆರಳಿ ಸುರಕ್ಷತೆಕಾಪಾಡಿಕೊಂಡು ಚುನಾವಣೆ ಸಮಯಕ್ಕೆ ಸದಸ್ಯರನ್ನು ಚುನಾವಣಾ ಕೇಂದ್ರಕ್ಕೆಕರೆತಂದು, ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಸೂಚಿಸಿದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದರು.
ಗೈರಾದ ಸದಸ್ಯರು : ಸಂಸದ ಬಿ.ಎನ್.ಬಚ್ಚೇಗೌಡ, ಆ.ನ.ಮೂರ್ತಿ, ಸರೋಜಮ್ಮ, ಬಿ.ಎ.ನರಸಿಂಹಮೂರ್ತಿ, ವನಿತಾದೇವಿ, ಎಸ್.ಸುಜಾತಾ ನರಸಿಂಹನಾಯ್ಡು, ಸುಶೀಲಾ ಗೈರು ಆಗಿದ್ದಾರೆ.
ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದೇ ನೂತನ ಅಧ್ಯಕ್ಷರು, ಉಪಾಧ್ಯಕ್ಷರಕರ್ತವ್ಯ ಆಗಿರುತ್ತದೆ.ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿರುವ ಪಕ್ಷದ ಹಾಗೂ ಪಕ್ಷೇತರ ಸದಸ್ಯರಿಗೆ ಅಭಿನಂದನೆಗಳು. – ಎಸ್.ಎನ್.ಸುಬ್ಟಾರೆಡ್ಡಿ, ಶಾಸಕರು
ಶಾಸಕರಹಾಗೂ ಸದಸ್ಯರ ಮಾರ್ಗ ದರ್ಶನದಂತೆ ಪಟ್ಟಣವ್ಯಾಪ್ತಿಯಲ್ಲಿ ರುವಕುಡಿಯುವ ನೀರಿನ ಸಮಸ್ಯೆಇತ್ಯರ್ಥಕ್ಕೆ ಮುಂದಾಗಿ ಸ್ವಚ್ಛತೆ ಆದ್ಯತೆ ನೀಡಿ ಪಾರದರ್ಶಕ ಆಡಳಿತ ನೀಡುತ್ತೇನೆ. – ಗುಲ್ನಾಜ್ ಬೇಗಂ, ನೂತನ ಅಧ್ಯಕ್ಷರು, ಬಾಗೇಪಲ್ಲಿ ಪುರಸಭೆ