Advertisement

ಹವಾಲಾ ಮೂಲಕ ಬೊಕ್ಕಸಕ್ಕೆ 170 ಕೋಟಿ ರೂ.ಕಪ್ಪು ಹಣ; ಕಾಂಗ್ರೆಸ್ ಗೆ IT ಶೋಕಾಸ್ ನೋಟಿಸ್

09:35 AM Dec 04, 2019 | Nagendra Trasi |

ಹೈದರಾಬಾದ್:ಕಾಂಗ್ರೆಸ್ ಪಕ್ಷದ ಬೊಕ್ಕಸಕ್ಕೆ ಹೈದರಾಬಾದ್ ಕಂಪನಿಯೊಂದರಿಂದ ವರ್ಗಾವಣೆಯಾಗಿದ್ದ 170 ಕೋಟಿ ರೂಪಾಯಿ ಕಪ್ಪು ಹಣಕ್ಕೆ ಸಂಬಂಧಿಸಿದಂತೆ ದಾಖಲೆಯನ್ನು ಸಲ್ಲಿಸುವಲ್ಲಿ ವಿಫಲವಾಗಿದ್ದರಿಂದ ಆದಾಯ ತೆರಿಗೆ ಇಲಾಖೆ ಕಾಂಗ್ರೆಸ್ ಗೆ ಶೋಕಾಸ್ ನೋಟಿಸ್ ಜಾರಿ ಮಾಡಿರುವುದಾಗಿ ವರದಿ ತಿಳಿಸಿದೆ.

Advertisement

ಕಪ್ಪು ಹಣದ ವಿಚಾರದಲ್ಲಿ ಐಟಿ ಇಲಾಖೆಯ ಸಮನ್ಸ್ ಮೇರೆಗೆ ಕಾಂಗ್ರೆಸ್ ಕಚೇರಿಯ ಹಿರಿಯ ಸಿಬ್ಬಂದಿಯೊಬ್ಬರು ನವೆಂಬರ್ 4ರಂದು ಹಾಜರಾಗಿದ್ದರು. ಆದರೆ ಯಾವುದೇ ದಾಖಲೆಯನ್ನು ಅವರು ನೀಡಿರಲಿಲ್ಲ ಎಂದು ವರದಿ ವಿವರಿಸಿದೆ.

ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಬೊಕ್ಕಸಕ್ಕೆ ಹೈದರಾಬಾದ್ ಮೂಲದ ಕಂಪನಿಯೊಂದು ಹವಾಲಾ ಮೂಲಕ 170 ಕೋಟಿ ರೂಪಾಯಿ ನೀಡಿರುವುದು ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಈ ಹಣವನ್ನು ಸರ್ಕಾರಿ ಯೋಜನೆಗಳಲ್ಲಿ ನಕಲಿ ಬಿಲ್ ಗಳ ಮೂಲಕ ನೀಡಲಾಗಿದೆ ಎಂದು ವರದಿ ಹೇಳಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗಾಗಿ ಮೀಸಲಿಟ್ಟ ಸರ್ಕಾರಿ ಯೋಜನೆಗಳ ಅನುದಾನವನ್ನು ಕಂಪನಿ ನಕಲಿ ಬಿಲ್ ಗಳನ್ನು ಸೃಷ್ಟಿಸಿ ವಂಚಿಸಿರುವುದು ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next