ಶಿರಸಿ: ನಗರದಲ್ಲಿ ನಡೆದ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಕಂಡು ಬಂದಿದೆ ಎಂದು ಬಿಜೆಪಿ ಆರೋಪಿಸಿದೆ.
ನಗರ ಮಂಡಳಿ ಅಧ್ಯಕ್ಷ ರಾಜೇಶ ಶೆಟ್ಟಿ, ಕಾರ್ಯದರ್ಶಿ ರಾಕೇಶ ತಿರುಮಲೆ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಜಗದೀಶ ನಾಯ್ಕಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮದುವೆ ಕಾರ್ಯಕ್ರಮಕ್ಕೆ ಹೋದದ್ದು ಸಿದ್ದಾಪುರ ತಾಲೂಕಿನಲ್ಲಿ ಕೋರೊನಾ ಹೆಚ್ಚಾಗಲು ಕಾರಣ ಎಂದು ಬೊಬ್ಬೆ ಹೊಡೆಯುತ್ತಿದ್ದ ಇದೇ ಜಿಲ್ಲಾ ಕಾಂಗ್ರೆಸ್ ಇಂದು ಹಣಬಲದೊಂದಿಗೆ ಜನರನ್ನು ಸೇರಿಸಿ ತಾಲೂಕಾಡಳಿತದ ಅನುಮತಿಯಿಲ್ಲದೇ ಸೈಕಲ್ ಜಾಥ ನೆಪದಲ್ಲಿ ಜನರನ್ನು ಸೇರಿಸಿದೆ. ಹಿಂದಿನಿಂದಲೂ ಹೇಳುವುದೊಂದು ಮಾಡುವುದೊಂದು ಮಾಡುತ್ತಿರುವ ಕಾಂಗ್ರೆಸ್ ಬಡವರ ಕಣ್ಣಿಗೆ ಮಣ್ಣೆರಚಿ ಕಾಗೆ ಹಾರಿಸುವ ಬುದ್ದಿ ಇನ್ನೂ ಬಿಟ್ಟಂತಿಲ್ಲ ಎಂದಿದ್ದಾರೆ.
ಸರ್ಕಾರದ ಸ್ಪಷ್ಟ ನಿರ್ದೇಶನವಿದ್ದರೂ ಗಾಳಿಗೆ ತೂರುವ ಇವರು ವಿರೋಧ ಪಕ್ಷದಲ್ಲಿದ್ದಾಗಲೇ ಇಷ್ಟೊಂದು ಅಸುರಕ್ಷಿತ ವಾತಾವರಣ ನಿರ್ಮಾಣ ಮಾಡುತ್ತಿರುವ ಇವರು ಬಹುಶ: ಅಧಿಕಾರದಲ್ಲಿದ್ದಿದ್ದರೆ ತಮ್ಮ ರಾಜಕಾರಣಕ್ಕಾಗಿ ಕೋರೊನಾ ಸಂಧರ್ಭದ ಈ ಸಮಯದಲ್ಲಿ ಕರ್ನಾಟಕವನ್ನೇ ಸಾವಿನ ಮನೆಯನ್ನಾಗಿ ಮಾರ್ಪಡಿಸುತ್ತಿದ್ದರು. ತಾಲೂಕಾಡಳಿತದ ಅನುಮತಿಯಿಲ್ಲದೇ ನಡೆದ ಈ ರಾಜಕೀಯ ಪ್ರೇರಿತ ಸಭೆಯಿಂದ ಆಗುವ ದುಷ್ಪರಿಣಾಮದ ಸಂಪೂರ್ಣ ಹೊಣೆಯನ್ನು ಕಾಂಗ್ರೆಸ್ ನ ಮುಂದಿನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೆ ಹೊರಬೇಕಾಗುತ್ತದೆ ಎಂದಿದ್ದಾರೆ.
ಸಾರ್ವಜನಿಕರು ಸಹ ಈ ವಿಚಾರವನ್ನು ಗಮನಿಸಬೇಕಿದೆ ಎಂದೂ ಉಲ್ಲೇಖಿಸಿದ್ದಾರೆ. ಭಾರತೀಯ ಜನತಾ ಪಾರ್ಟಿ ಶಿರಸಿ ನಗರ ಮಂಡಲ ನಗರದ ಜನತೆಯಲ್ಲಿ ಮನವಿ ಮಾಡಿಕೊಳ್ಳುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.