ಪಂಜಾಬ್(ಪಠಾಣ್ ಕೋಟ್): ನೆಹರು-ಗಾಂಧಿ ಕುಟುಂಬದ ವಂಶಾಡಳಿತದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಪ್ರಧಾನಿ ನರೇಂದ್ರ ಮೋದಿ ಬುಧವಾರ(ಫೆ.16) , ಗುರುನಾನಕ್ ದೇವ್ ಅವರ ಪವಿತ್ರ ಸ್ಥಳವಾದ ಕರ್ತಾರ್ಪುರ್ ಸಾಹಿಬ್ ಅನ್ನು 1947ರಲ್ಲಿ ದೇಶ ವಿಭಜನೆ ಸಂದರ್ಭದಲ್ಲಿ ಭಾರತದ ಪ್ರದೇಶದೊಳಕ್ಕೆ ವಿಲೀನಗೊಳಿಸುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿತ್ತು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ ರಾಯಲ್ಸ್ ಕ್ಯಾಂಪ್ ಸೇರಿದ ಬಡ ಕ್ಷೌರಿಕನ ಪುತ್ರ..! ಈತನ ಕಥೆಯೇ ರೋಚಕ
1965ರ ಯುದ್ಧದ ವೇಳೆಯಲ್ಲಿಯೂ ಕರ್ತಾರ್ಪುರ್ ಪ್ರದೇಶವನ್ನು ವಾಪಸ್ ಪಡೆಯಲು ಕಾಂಗ್ರೆಸ್ ಮುತುವರ್ಜಿ ವಹಿಸಲಿಲ್ಲ. 1971ರ ಯುದ್ಧದಲ್ಲಿಯೂ ದೆಹಲಿಯ ಗದ್ದುಗೆಯಲ್ಲಿ ಕುಳಿತಿದ್ದ ಕಾಂಗ್ರೆಸ್ ಸರಕಾರವು ಕರ್ತಾಪುರ್ ನಲ್ಲಿರುವ ಗುರುನಾನಕ್ ದೇವ್ ಜೀಯವರ ತಪೋಭೂಮಿಯನ್ನು ವಾಪಸ್ ನೀಡುವ ಷರತ್ತಿನ ಮೇಲೆ 90,000 ಪಾಕಿಸ್ತಾನಿ ಸೈನಿಕರನ್ನು ವಾಪಸ್ ಕಳುಹಿಸಿತ್ತು ಪ್ರಧಾನಿ ಮೋದಿ ಆರೋಪಿಸಿದರು.
ಭಾರತ ಇಬ್ಭಾಗವಾಗುವ ಸಂದರ್ಭದಲ್ಲಿಯೂ ಕಾಂಗ್ರೆಸ್ ಮುಖಂಡರು ಇದ್ದಿದ್ದರು. ಆದರೂ ಗಡಿಯಿಂದ ಕೇವಲ ಆರು ಕಿಲೋ ಮೀಟರ್ ದೂರದಲ್ಲಿರುವ ಕರ್ತಾರಪುರದಲ್ಲಿನ ಗುರುನಾನಕ್ ದೇವ್ ಜೀ ಅವರ ತಪೋಭೂಮಿಯನ್ನು ಭಾರತದೊಳಕ್ಕೆ ವಿಲೀನಗೊಳಿಸುವ ಬಗ್ಗೆ ಕಾಂಗ್ರೆಸ್ ಅರ್ಥಮಾಡಿಕೊಂಡಿಲ್ಲ. ಕಾಂಗ್ರೆಸ್ ಸದಸ್ಯರು ಅಪರಾಧದಲ್ಲಿ ತೊಡಗಿಕೊಂಡಿದ್ದು, ನಮ್ಮ ಭಾವನೆಗಳನ್ನು ಹೊಸಕಿ ಹಾಕಿತ್ತಿರುವುದಾಗಿ ದೂರಿದರು.
ಭಾರತದ ಈ ಪರಂಪರೆಗೆ ಭಾರತೀಯ ಜನತಾ ಪಕ್ಷ ವಿಶ್ವಾದ್ಯಂತ ಮನ್ನಣೆ ನೀಡುವಂತೆ ಮಾಡಿದೆ. ನಾವು ಅಭಿವೃದ್ಧಿಯ ಪರವಾಗಿದ್ದು, ನಾವು ನಮ್ಮ ಪರಂಪರೆ ಬಗ್ಗೆ ಅಭಿಮಾನ ಹೊಂದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.