Advertisement

ಕಾಂಗ್ರೆಸ್‌ ಅಸ್ತಿತ್ವಕ್ಕೇ ಸಂಕಷ್ಟ

06:45 AM Aug 08, 2017 | Team Udayavani |

ಕೊಚ್ಚಿ: ಕಾಂಗ್ರೆಸ್‌ ಪಕ್ಷ ಇದೇ ಮೊದಲ ಬಾರಿ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ ಎಂದು ಪಕ್ಷದ ಹಿರಿಯ ಮುಖಂಡ ಜೈರಾಮ್‌ ರಮೇಶ್‌ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಮೂಲಕ ಎದುರಾಗಿರುವ ಈ ಸಂಕಷ್ಟ ಸ್ಥಿತಿಯಿಂದ ಪಕ್ಷ ಹೊರಬರಲು ಮುಖಂಡರ “ಸಂಘಟಿತ ಶ್ರಮ’ ಅತ್ಯಗತ್ಯ ಎಂದಿದ್ದಾರೆ.

Advertisement

ಕೆಲ ತಿಂಗಳ ಹಿಂದಷ್ಟೇ ನಡೆದ ಪಂಚರಾಜ್ಯಗಳ ಚುನಾವಣೆ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ್‌ ಸಾಲುಸಾಲಾಗಿ ಮುಖಭಂಗ ಅನುಭವಿಸುತ್ತಿದೆ. ಅಲ್ಲದೆ ಪಕ್ಷ ರಾಜಕೀಯವಾಗಿ ಭಾರೀ ಹಿನ್ನಡೆ ಅನುಭವಿಸಿರುವ ಈ ಸಂದರ್ಭದಲ್ಲಿ ಜೈರಾಮ್‌ ರಮೇಶ್‌ ಅವರ ಈ ಹೇಳಿಕೆಗೆ ಹೆಚ್ಚು ಮಹತ್ವ ಬಂದಿದೆ. “1996ರಿಂದ 2004ರ ನಡುವೆ ತೀವ್ರ ಸ್ವರೂಪದ “ರಾಜಕೀಯ ಬಿಕ್ಕಟ್ಟು’ ಎದುರಿಸಿದ್ದ ಪಕ್ಷ ಅಧಿಕಾರದಿಂದ ದೂರ ಉಳಿದಿತ್ತು. ತುರ್ತು ಪರಿಸ್ಥಿತಿ ನಂತರ, 1977ರಲ್ಲಿ ಪಕ್ಷ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದಾಗಲೂ ಇದೇ ಪರಿಸ್ಥಿತಿಯಿತ್ತು. ಆದರೆ ಪಕ್ಷದ ಅಸ್ತಿತ್ವಕ್ಕೇ ಕುತ್ತು ಬಂದೊದಗಿರುವುದು ಇದೇ ಮೊದಲು,’ ಎಂದು ರಮೇಶ್‌ ಕಳವಳ ವ್ಯಕ್ತಪಡಿಸಿದ್ದಾರೆ.

ಗುಜರಾತ್‌ನ ಶಾಸಕರನ್ನು ಕರ್ನಾಟಕದ ರೆಸಾರ್ಟ್‌ಗೆ ಕಳಿಸಿದ ಬಗ್ಗೆ ಪ್ರತಿಕ್ರಿಯಿಸಿದ ಜೈರಾಮ್‌, “ಬಿಜೆಪಿಯವರು ಹಣದ ಆಮಿಷ ತೋರಿ ಅವರನ್ನು ತಮ್ಮ ಪಕ್ಷಕ್ಕೆ ಸೆಳೆಯುತ್ತಾರೆ ಎಂಬ ಅನುಮಾನದಿಂದಲೇ 44 ಶಾಸಕರನ್ನು ಕರ್ನಾಟಕದ ರೆಸಾರ್ಟ್‌ಗೆ ಕಳಿಸಲಾಗಿತ್ತು. ಬಿಜೆಪಿ ಕೂಡ ಹಿಂದೆ ತನ್ನ ಶಾಸಕರನ್ನು ರೆಸಾರ್ಟ್‌ ಪ್ರವಾಸಕ್ಕೆ ಕಳಿಸಿದ್ದಿದೆ,’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next