ದಾಂಡೇಲಿ: ನೀಲವ್ವಾ ಬಂಡಿವಡ್ಡರ ಅವರ ನಿಧನದಿಂದ ತೆರವಾಗಿದ್ದ ದಾಂಡೇಲಿ ನಗರ ಸಭೆಯ ವಾರ್ಡ್ ನಂ:18 ರ ಉಪ ಚುನಾವಣೆಗಾಗಿ ಕಾಂಗ್ರೆಸ್ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಗಂಧ ಪ್ರಕಾಶ ಕಾಂಬಳೆಯವರ ಪರವಾಗಿ ಕಾಂಗ್ರೆಸ್ ಮುಖಂಡ ಮುನ್ನಾ ವಹಾಬ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರಾದಿಯಾಗಿ ಬುಧವಾರ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.
ಗೆಲುವಾಗಿದೆ. ಘೋಷಣೆಯೊಂದೆ ಬಾಕಿ ಎಂಬಷ್ಟರ ಮಟ್ಟಿಗೆ ಗೆಲುವಿನ ವಿಶ್ವಾಸದಲ್ಲಿ ಕಾಂಗ್ರೆಸಿಗರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಇದು ಕಾಂಗ್ರೆಸಿನ ಭದ್ರಕೋಟೆಯಾಗಿದ್ದು, ಕಾಂಗ್ರೆಸಿನ ಮುನ್ನ ವಹಾಬ ಅವರೆ ಗೆಲುವಿನ ಸೂತ್ರದಾರರಾಗಿದ್ದಾರೆ. ಬಿಜೆಪಿ ಸ್ಪರ್ಧೆಯಲ್ಲಿದ್ದರೂ ಸಂಘ ಪರಿವಾರದ ಶೈಲಿಯ ಪ್ರಚಾರದಲ್ಲಿ ತೊಡಗಿಕೊಂಡಿದೆ.
ಇಂದು ನಡೆದ ಮತ ಪ್ರಚಾರದಲ್ಲಿ ಬ್ಲಾಕ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾದ ವಿ.ಆರ್.ಹೆಗಡೆ, ಮುನ್ನಾ ವಹಾಬ, ನಗರ ಸಭಾ ಅಧ್ಯಕ್ಷೆ ಸರಸ್ವತಿ ರಜಪೂತ್, ನಗರ ಸಭಾ ಸದಸ್ಯರುಗಳಾದ ಯಾಸ್ಮಿನ್ ಕಿತ್ತೂರು, ಮಜೀದ್ ಸನದಿ, ಮಹಾದೇವ ಜಮಾದಾರ, ಸುಧಾ ರಾಮಲಿಂಗ ಜಾಧವ, ಪ್ರೀತಿ ನಾಯರ್, ರುಕ್ಮಿಣಿ ಬಾಗಾಡೆ, ರುಹೀನಾ ಖತೀಬ್, ಸಪೂರ ಯರಗಟ್ಟಿ, ಶಾಹಿದಾ ಪಠಾಣ್ ಹಾಗೂ ಕಾಂಗ್ರೆಸ್ ಮುಖಂಡರುಗಳಾದ ದಿವಾಕರ ನಾಯ್ಕ, ಎನ್.ಜಿ.ಸಾಳೊಂಕೆ, ರಾಮಲಿಂಗ ಜಾಧವ, ಮಹಮ್ಮದ್ ಗೌಸ ಫನಿಂದ್, ವಿಜಯಕುಮಾರ್ ಮೊದಲಾದವರು ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.