ಬೆಂಗಳೂರು: ಲೋಕಸಭಾ ಚುನಾ ವಣೆಗೆ ಕಾಂಗ್ರೆಸ್ ಪಕ್ಷವು ಧಾರವಾಡ ಹಾಗೂ ದಾವಣಗೆರೆ ಹೊರತುಪಡಿಸಿ 26 ಕ್ಷೇತ್ರಗಳಿಗೂ ಚುನಾವಣಾ ಉಸ್ತುವಾರಿ ಗಳನ್ನು ನೇಮಿಸಿದೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರು ಸ್ಪರ್ಧೆ ಮಾಡಿರುವ ತುಮಕೂರು ಕ್ಷೇತ್ರದ ಉಸ್ತುವಾರಿಯ ಜವಾಬ್ದಾರಿ ನೀಡಲಾಗಿದೆ. ಕೆನರಾ ಲೋಕಸಭಾ ಕ್ಷೇತ್ರಕ್ಕೆ ಸಚಿವ ಆರ್.ವಿ. ದೇಶಪಾಂಡೆ, ಮೈಸೂರು ಕ್ಷೇತ್ರಕ್ಕೆ ಮಾಜಿ ಸಚಿವ ಎಚ್.ಸಿ. ಮಹದೇವಪ್ಪ, ಮಂಡ್ಯಕ್ಕೆ ಮಾಜಿ ಶಾಸಕ ಎನ್.ಸಂಪಂಗಿ ಉಸ್ತುವಾರಿಗಳಾಗಿದ್ದಾರೆ.
ಉಳಿದಂತೆ, ಚಿಕ್ಕೋಡಿಗೆ- ವೀರ್ ಕುಮಾರ್ ಪಾಟೀಲ್, ಬೆಳಗಾವಿಗೆ- ಪಿ.ಎಂ.ಅಶೋಕ್, ಬಾಗಲಕೋಟೆಗೆ- ಆರ್.ಎಸ್.ಪಾಟೀಲ್, ವಿಜಯಪುರಕ್ಕೆ-ಎಂ.ಬಿ.ಪಾಟೀಲ್, ಕಲಬುರಗಿಗೆ- ಡಾ.ಶರಣ ಪ್ರಕಾಶ್ ಪಾಟೀಲ್, ರಾಯಚೂರು- ಎನ್.ಎಸ್.ಬೋಸ್ ರಾಜು, ಬೀದರ್- ರಹೀಂ ಖಾನ್, ಕೊಪ್ಪಳ- ಬಸವನಗೌಡ ಬಾದರ್ಲಿ, ಬಳ್ಳಾರಿ – ಸೂರ್ಯನಾರಾಯಣ ರೆಡ್ಡಿ, ಹಾವೇರಿ – ಶಿವಣ್ಣನವರ್, ಶಿವಮೊಗ -ಕಿಮ್ಮನೆ ರತ್ನಾಕರ, ಉಡುಪಿ- ಚಿಕ್ಕಮಗಳೂರು – ಡಾ.ಜಯಮಾಲ, ಹಾಸನ- ಗಂಡಸಿ ಶಿವರಾಮು, ದಕ್ಷಿಣ ಕನ್ನಡ- ರಮಾನಾಥ ರೈ, ಚಿತ್ರದುರ್ಗ- ಟಿ.ರಘು ಮೂರ್ತಿ, ಚಾಮರಾಜ ನಗರ- ಚೆಲುವರಾಯಸ್ವಾಮಿ, ಬೆಂಗಳೂರು ಗ್ರಾಮಾಂತರ- ಜಿ.ಸಿ.ಚಂದ್ರ ಶೇಖರ್, ಬೆಂಗಳೂರು ಉತ್ತರ-ಕೆ.ಸಿ.ರಾಮಮೂರ್ತಿ, ಬೆಂಗಳೂರು ಕೇಂದ್ರ- ಕೆ.ಜೆ.ಜಾರ್ಜ್, ಬೆಂಗಳೂರು ದಕ್ಷಿಣ- ಎಂ.ಸಿ.ವೇಣುಗೋಪಾಲ್, ಚಿಕ್ಕಬಳ್ಳಾಪುರ- ಶಿವಶಂಕರ ರೆಡ್ಡಿ ಹಾಗೂ ಕೋಲಾರಕ್ಕೆ- ಆರ್.ವಿ.ಸುದರ್ಶನ್ ಅವರನ್ನು ಉಸ್ತುವಾರಿಗಳನ್ನಾಗಿ ನೇಮಕ
ಮಾಡಿ ಆದೇಶ ಹೊರಡಿಸಲಾಗಿದೆ.