ನವದೆಹಲಿ: ಹೊಸ ಸಂಸತ್ ಕಟ್ಟಡವನ್ನು ಇನ್ನು ಮುಂದೆ “ಮೋದಿ ಮಲ್ಟಿಪ್ಲೆಕ್ಸ್” ಎಂದು ಕರೆಯಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಶನಿವಾರ ವ್ಯಂಗ್ಯವಾಡಿದ್ದಾರೆ.
ಈ ಕುರಿತು ಟ್ವಿಟರ್ X ನಲ್ಲಿ ಟ್ವೀಟ್ ಮಾಡಿರುವ ಜೈರಾಮ್ ರಮೇಶ್ ಹಳೆಯ ಸಂಸತ್ ಕಟ್ಟಡದಲ್ಲಿ ಸದಸ್ಯರಿಗೆ ಸಂವಾದ ನಡೆಸಲು ಸ್ಥಳವಿಲ್ಲವಾಗಿದೆ ಅಲ್ಲದೆ ನೂತನ ಸಂಸತ್ ಭವನದಲ್ಲಿ ಕೆಲವೊಂದು ನ್ಯೂನತೆಗಳು ಇವೆ ಎಂದು ಹೇಳಿಕೊಂಡಿದ್ದಾರೆ.
ಹೊಸ ಸಂಸತ್ ಕಟ್ಟಡದ ವಿಶಾಲವಾಗಿರುವ ಜಾಗದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ನೋಡಬೇಕಾದರೆ ಬೈನಾಕ್ಯುಲರ್ ಹಿಡಿದು ಯಾರು ಎಲ್ಲಿದ್ದಾರೆ ಎಂದು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಸಂಸತ್ತನ್ನು ವಾಸ್ತವವಾಗಿ ಮೋದಿ ಮಲ್ಟಿ ಕಾಂಪ್ಲೆಕ್ಸ್ ಎಂದು ಕರೆಯಬೇಕು, 4 ದಿನಗಳ ಕಲಾಪಗಳ ನಂತರ, ಸಂಸತ್ತಿನಲ್ಲಿ ಪರಸ್ಪರ ಸಂವಹನಕ್ಕೆ ಸ್ಥಳಾವಕಾಶವಿಲ್ಲ ಎಂಬುದನ್ನು ನಾನು ನೋಡಿದೆ ಎಂದು ಹೇಳಿದ್ದಾರೆ.
ಹೊಸ ಮತ್ತು ಹಳೆಯ ಸಂಸತ್ತಿನ ಕಟ್ಟಡಗಳ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸಿದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಹೊಸ ಕಟ್ಟಡದ ಸಭಾಂಗಣಗಳು ಆರಾಮದಾಯಕವಾಗಿಲ್ಲ, ಹಿಂದಿನ ಸಂಸತ್ ಕಟ್ಟಡದಲ್ಲಿ ಸಂವಹನಕ್ಕೆ ಉತ್ತಮ ವ್ಯವಸ್ಥೆ ಇದ್ದು ನೂತನ ಕಟ್ಟಡದಲ್ಲಿ ಸಂವಹನ ನಡೆಸುವುದೇ ಕಷ್ಟ ಸಾಧ್ಯವಾಗಿದೆ, ಅಷ್ಟೊಂದು ವಿಶಾಲವಾದ ಜಾಗದಲ್ಲಿ ಕುಳಿತುಕೊಂಡರೆ ಯಾರು ಎಲ್ಲಿ ಇದ್ದಾರೆ ಎಂಬುದೇ ಕಣ್ಣಿಗೆ ಕಾಣದ ಸ್ಥಿತಿ ನಿರ್ಮಾಣವಾಗುತ್ತದೆ ಎಂದರು.
ಹಳೆಯ ಸಂಸತ್ತಿನಲ್ಲಿ ಎಲ್ಲಿಯಾದರೂ ದಾರಿ ತಪ್ಪಿದರೆ ಅದರ ಆಕಾರವು ವೃತ್ತಾಕಾರವಾಗಿರುವುದರಿಂದ ಅವರು ಸುಲಭವಾಗಿ ದಾರಿ ಕಂಡುಕೊಳ್ಳಬಹುದು, ಆದರೆ ಹೊಸ ಸಂಸತ್ತಿನ ಕಟ್ಟಡ ಒಂದು ರೀತಿಯಲ್ಲಿ ಚಕ್ರವ್ಯೂಹ ಇದ್ದಂತೆ ಒಮ್ಮೆ ದಾರಿ ತಪ್ಪಿದರೆ ಹೊರಬರಲು ಹರಸಾಹಸ ಪಡೆಬೇಕಾಗುತ್ತದೆ ಎಂದು ಹೇಳಿದ್ದಾರೆ.
2024ರಲ್ಲಿ ಹೊಸ ಸರಕಾರ ಬಂದ ಬಳಿಕ ಕಟ್ಟಡದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: Nikki Haley: ಅಮೆರಿಕದ ಮೇಲೆ ಯುದ್ಧ ಸಾರಲು ಚೀನಾ ಸಿದ್ಧತೆ ನಡೆಸುತ್ತಿದೆ: ನಿಕ್ಕಿ ಹ್ಯಾಲೆ