Advertisement

ಕಾಂಗ್ರೆಸ್‌ಗಿಲ್ಲ ಅಂಬೇಡ್ಕರ್‌ ಹೆಸರೇಳುವ ನೈತಿಕತೆ

02:23 PM Apr 15, 2022 | Team Udayavani |

ಚಿತ್ರದುರ್ಗ: ಇನ್ನು ನೂರು ವರ್ಷಗಳ ನಂತರವೂ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ ವಿಚಾರಧಾರೆಗಳು ಈ ದೇಶಕ್ಕೆ ಬೇಕಾಗಿವೆ ಎಂದು ವಿಧಾನ ಪರಿಷತ್‌ ಸದಸ್ಯ ಕೆ.ಎಸ್. ನವೀನ್‌ ಹೇಳಿದರು.

Advertisement

ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಾಲೆಯ ಗಂಟೆ ಬಾರಿಸುವ ವ್ಯಕ್ತಿಯನ್ನು ಅಂಬೇಡ್ಕರರ ವಿರುದ್ಧ ಚುನಾವಣೆಗೆ ನಿಲ್ಲಿಸಿ ಎರಡು ಬಾರಿ ಸೋಲಿಸಿದ ಪಕ್ಷ ಕಾಂಗ್ರೆಸ್‌. ಹಾಗಾಗಿ ಅಂಬೇಡ್ಕರರ ಬಗ್ಗೆ ಮಾತನಾಡಲು ಕಾಂಗ್ರೆಸ್‌ ಪಕ್ಷಕ್ಕೆ ಯಾವ ನೈತಿಕ ಹಕ್ಕುಗಳೂ ಇಲ್ಲ ಎಂದರು.

ಡಾ| ಬಿ.ಆರ್. ಅಂಬೇಡ್ಕರ್‌ ಮಹಾನ್‌ ವ್ಯಕ್ತಿ. ಅವರು ಅನುಭವಿಸಿದ ಶೋಷಣೆ, ಕಷ್ಟ, ಅವಮಾನವನ್ನು ಬೇರೆ ಯಾರು ಅನುಭವಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ನಮ್ಮ ಮಾತಿಗೆ ಗೌರವ ಸಿಗದಿದ್ದರೆ, ಸ್ವಲ್ಪ ಅವಮಾನ ಆದರೆ ಅಥವಾ ಸ್ವಾಭಿಮಾನಕ್ಕೆ ಪೆಟ್ಟು ಬಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದು, ನಿಷ್ಕ್ರಿಯರಾಗುವುದನ್ನು ನಾವು ಕಾಣುತ್ತೇವೆ. ಡಾ| ಬಿ.ಆರ್.ಅಂಬೇಡ್ಕರ್‌ ಅವರು ಅವಮಾನ ಆದಾಗಲೆಲ್ಲ ಹೆಚ್ಚು ಸಕ್ರಿಯರಾದರು. ಜೀವನಪೂರ್ತಿ ಅವರು ಕಾಂಗ್ರೆಸ್‌ ವಿರುದ್ಧ ಚಳವಳಿ ಮಾಡಿದರು. ಈ ದೇಶದಲ್ಲಿ ಪರಿವರ್ತನೆ ತರಲು ಕಾಂಗ್ರೆಸ್‌ ಪಕ್ಷದಿಂದ ಸಾಧ್ಯವಿಲ್ಲ ಎಂಬ ಚಿಂತನೆ ಅವರದಾಗಿತ್ತು ಎಂದು ತಿಳಿಸಿದರು.

ಬಿಜೆಪಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಬರೀ ಅಂಬೇಡ್ಕರ್‌ ಜಯಂತಿಗೆ ಸೀಮಿತವಾಗಬಾರದು. ಅವರ ವಿಚಾರಗಳನ್ನು ಸಮಾಜಕ್ಕೆ ತಲುಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡಿದ ಅಭಿವೃದ್ಧಿ ಹಾಗೂ ಜನಪರ ಕಾರ್ಯಗಳನ್ನು ಪ್ರತಿ ಬೂತ್‌ ಗಳಿಗೆ ತಲುಪುವ ಕೆಲಸ ಆಗಬೇಕಾಗಿದೆ ಎಂದರು.

ಅಂಬೇಡ್ಕರರು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ವಿರೋ ಧಿಸಿದ್ದರು. ಆ ಭಾಗಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ ಯನ್ನು ನರೇಂದ್ರ ಮೋದಿಯವರು ರದ್ದುಪಡಿಸಿದ್ದಾರೆ. ಇದು ದೇಶಕ್ಕೆ ಮಾಜಿ ಪ್ರಧಾನಿ ನೆಹರೂ ಮಾಡಿದ ದ್ರೋಹವಾಗಿದೆ. ಜಾತ್ಯತೀತ ಶಬ್ದವನ್ನು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಇಂದಿರಾ ಗಾಂಧಿ ಸಂವಿಧಾನದಲ್ಲಿ ಸೇರಿಸಿದರು ಎಂದು ಹೇಳಿದರು.

Advertisement

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ, ತುಮಕೂರು ವಿಭಾಗ ಪ್ರಭಾರಿ ಟಿ.ಜಿ. ನರೇಂದ್ರನಾಥ್‌, ಎಸ್‌ಸಿ ಮೊರ್ಚಾ ಜಿಲ್ಲಾಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ, ಆರೋಗ್ಯ ಅಬಿಯಾನದ ಜಿಲ್ಲಾ ಸಂಚಾಲಕ ಡಾ| ಸಿದ್ಧಾರ್ಥ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್‌ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರೇಂದ್ರ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್‌, ಎಸ್‌ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ಪಾಂಡು, ಜಿಲ್ಲಾ ಖಜಾಂಚಿ ಎಸ್‌. ಆರ್‌. ಗಿರೀಶ್‌, ಕಾರ್ಯದರ್ಶಿ ರೇಖಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next