Advertisement

ಬಳ್ಳಾರಿ,ವಿಜಯನಗರದಲ್ಲಿ ಕಾಂಗ್ರೆಸ್ ಮೇಲುಗೈ, ಖಾತೆ ತೆರೆದ ಎಎಪಿ

12:18 PM Dec 30, 2021 | Team Udayavani |

ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ. ಆದರೆ, ಹೊಸಪೇಟೆ ನಗರಸಭೆಯಲ್ಲಿ ಆಪ್ ಪಕ್ಷದಿಂದ ಒಬ್ಬರು ಜಯಗಳಿಸಿದ್ದು, ಉಭಯ ಜಿಲ್ಲೆಗಳಲ್ಲಿ ಮೊದಲಬಾರಿಗೆ ತನ್ನ ಖಾತೆ ತೆರೆದಿದೆ.

Advertisement

ಬಳ್ಳಾರಿ ಜಿಲ್ಲೆಯ ಕುರುಗೋಡು ಪುರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ಕುರೇಕುಪ್ಪ ಪುರಸಭೆಯಲ್ಲಿ ಅತಂತ್ರ ಪರಿಸ್ಥಿತಿ ಏರ್ಪಟ್ಟಿದ್ದು ಪಕ್ಷೇತರರೇ ನಿರ್ಣಾಯಕರಾಗಿದ್ದಾರೆ. ಇನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಮರಿಯಮ್ಮನಹಳ್ಳಿ ಪಪಂನಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿದೆ.

ಅದೇ ರೀತಿ ವಿಜಯನಗರ ಜಿಲ್ಲಾ ಕೇಂದ್ರವಾದ ಹೊಸಪೇಟೆ ನಗರಸಭೆಯಲ್ಲಿ ಕಾಂಗ್ರೆಸ್ ಮತ್ತು ಪಕ್ಷೇತರರು ಮೇಲುಗೈ ಸಾಧಿಸಿದ್ದಾರೆ.  ಬಿಜೆಪಿಗೆ ಹಿನ್ನೆಡೆಯಾಗಿದೆ.

ಕುರುಗೋಡು ಪುರಸಭೆ: 15 ಕಾಂಗ್ರೆಸ್, 7 ಬಿಜೆಪಿ, 1 ಪಕ್ಷೇತರ.
ಕುರೇಕುಪ್ಪ ಪುರಸಭೆ : 8 ಕಾಂಗ್ರೆಸ್, 7 ಬಿಜೆಪಿ, 2 ಜೆಡಿಎಸ್, 6 ಪಕ್ಷೇತರರು.
ಹ.ಬೊ.ಹಳ್ಳಿ ಪುರಸಭೆ: 12 ಕಾಂಗ್ರೆಸ್, 11 ಬಿಜೆಪಿ.
ಮರಿಯಮ್ಮನಹಳ್ಳಿ ಪಪಂ: ಕಾಂಗ್ರೆಸ್ 15, 1 ಬಿಜೆಪಿ. 2 ಪಕ್ಷೇತರ.
ಹೊಸಪೇಟೆ ನಗರಸಭೆ:  12 ಕಾಂಗ್ರೆಸ್, 10 ಬಿಜೆಪಿ, 1 ಎಎಪಿ,  12 ಪಕ್ಷೇತರ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next