Advertisement

ತ್ರಿವರ್ಣ ಧ್ವಜ ಸುಟ್ಟ ಉಗ್ರರರಿಗೆ ಬಿರಿಯಾನಿ ಹಂಚಿದ್ದು ಕಾಂಗ್ರೆಸ್ : ರವಿಕುಮಾರ್

07:36 PM Feb 16, 2022 | Team Udayavani |

ಬೆಂಗಳೂರು : ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಸುಟ್ಟ ಉಗ್ರರರಿಗೆ ಬಿರಿಯಾನಿ ಹಂಚಿದ್ದು ಕಾಂಗ್ರೆಸ್ ನವರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿ ಕುಮಾರ್ ಬುಧವಾರ ಕಿಡಿ ಕಾರಿದ್ದಾರೆ.

Advertisement

ವಿಧಾನಸಭಾ ಕಲಾಪದಲ್ಲಿ ಈಶ್ವರಪ್ಪ ಅವರ ಹೇಳಿಕೆಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿ, ಕಾಶ್ಮೀರದಲ್ಲಿ ಎರಡು ಧ್ವಜ ಹಾರಿಸಲಾಗುತ್ತಿತ್ತು, ಅದರ ವಿರುದ್ಧ ಹೋರಾಡಿದವರು ಬಿಜೆಪಿಗರು. ಕಾಂಗ್ರೆಸ್ ನವರಿಗೆ ಪ್ರಶ್ನಿಸುವ ನೈತಿಕತೆ ಇದ್ಯಾ? ಎಂದರು.

ಕಾಂಗ್ರೆಸ್ ಡಬಲ್ ಸ್ಟಾಂಡ್ ಹೊಂದಿದ್ದು, ಹಿಜಾಬ್ ಹಾಕಿ ಬರಬಹುದು ಅಂತಾರೆ. ಕೇಸರಿ ಶಾಲು ಹಾಕಿ ಬರಬೇಡಿ ಅಂತಾರೆ ಎಂದರು.

ಇದೆ ವೇಳೆ ಜೈನ ಸಮುದಾಯದವರ ಕ್ಷಮೆ ಕೋರಿದರು. ಜೈನ ಸಮುದಾಯದವರಿಗೆ ನೋವಾಗುವಂತೆ ಮಾತಾಡಿದ್ದೇನೆ ಎಂದು ಪಶ್ಚಾತ್ತಾಪ ಪಟ್ಟು ಕ್ಷಮೆ ಕೋರುತ್ತಿದ್ದೇನೆ ಎಂದರು. ಹಿಜಾಬ್ ವಿಚಾರದಲ್ಲಿ ಮಾಧ್ಯಮಕ್ಕೆ ಮಾತಾಡುವಾಗ ದಿಗಂಬರರು ಬರುವಂತೆ ಮಕ್ಕಳು ಶಾಲೆಗೆ ಬಂದರೆ ಹೇಗಿರುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ :ಕಾಂಗ್ರೆಸ್ ನವರು ತಮ್ಮ ತೆವಲಿಗಾಗಿ ರಾಷ್ಟ್ರ ಧ್ವಜವನ್ನು ಬಳಸಿಕೊಂಡಿದ್ದಾರೆ: ಸಿಎಂ ಬೊಮ್ಮಾಯಿ

Advertisement

ಇತಿಹಾಸದಲ್ಲೇ ಇದು ಕರಾಳ ದಿನ
ರಾಷ್ಟ್ರ ಧ್ವಜವನ್ನು ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಪ್ರತಿಭಟನೆಗಾಗಿ ಸದನದಲ್ಲಿ ಬಳಕೆ ಮಾಡಿರುವುದು ಸದನ, ಸಂವಿಧಾನ ಹಾಗೂ ತಿರಂಗ ಧ್ವಜಕ್ಕೆ ಮಾಡಿದ ಅಪಮಾನ. ಧ್ವಜ ಸಂಹಿತೆಯ ಬಗ್ಗೆ ಸದನದಲ್ಲಿ ಗಂಟೆಗಳ ಕಾಲ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ಸದನದಲ್ಲಿ ತಮ್ಮ ಪಕ್ಷದ ಶಾಸಕರು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಾಗ ಮೌನಕ್ಕೆ ಜಾರಿದ್ದರು. ಇದು ಜಾಣ ಮೌನವೋ, ಅಸಹಾಯಕತೆಯೋ ? ಎಂದು ಸಚಿವ ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.

ಸದನದ ನಿಯಮಾವಳಿ ಪ್ರಕಾರ ರಾಷ್ಟ್ರ ಧ್ವಜವನ್ನು ಸದನಕ್ಕೆ ತರುವಂತಿಲ್ಲ.ಆದರೆ ಕಾಂಗ್ರೆಸ್ ಶಾಸಕರು ರಾಷ್ಟ್ರ ಧ್ವಜವನ್ನು ಭಿತ್ತಿಪತ್ರದ ರೀತಿ ಬಳಸಿಕೊಂಡಿದ್ದಾರೆ. ಈ ದುರ್ವತನೆಗಾಗಿ ಕಾಂಗ್ರೆಸಿಗರು ಬೇಷರತ್ತಾಗಿ ರಾಷ್ಟ್ರದ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಇತಿಹಾಸದಲ್ಲೇ ಇದು ಕರಾಳ ದಿನ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next