Advertisement

ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನಿರಶನ

12:16 PM Jul 07, 2020 | Suhan S |

ಇಂಡಿ: ಪಟ್ಟಣದಲ್ಲಿ ಇಂಡಿ ಮತ್ತು ಬಳ್ಳೊಳಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಹಾಗೂ ಯುವ ಕಾಂಗ್ರೆಸ್‌ ಸಮಿತಿ ವತಿಯಿಂದ ಪೆಟ್ರೋಲ್‌, ಡೀಸೆಲ್‌ ಹಾಗೂ ಗ್ಯಾಸ್‌ ಬೆಲೆ ಏರಿಕೆ ಖಂಡಿಸಿ ಮತ್ತು ಜಿಪಂ ಮಾಜಿ ಅಧ್ಯಕ್ಷರ ಪಕ್ಷದ ವಿರೋ ಧಿ ಚಟುಚಟಿಕೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

Advertisement

ಈ ಸಂದರ್ಭದಲ್ಲಿ ಇಂಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಇಲಿಯಾಸ ಬೋರಾಮಣಿ ಹಾಗೂ ಯುವ ಕಾಂಗ್ರೆಸ್‌ ಅಧ್ಯಕ್ಷ ಅವಿನಾಶ ಬಗಲಿ, ಮುತ್ತಪ್ಪ ಪೊತೆ, ಪ್ರಶಾಂತ ಕಾಳೆ, ಬಸವನಬಾಗೇವಾಡಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪಕ್ಷದಿಂದ ಅಧಿಕಾರ ಅನುಭವಿಸಿ ನಂತರ ತಮ್ಮ ಸ್ವಾರ್ಥಕ್ಕಾಗಿ ಪಕ್ಷಕ್ಕೆ ದ್ರೋಹ ವೆಸಗಿದ್ದಾರೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಸೇರಿಸಿ ಸರಿ ಸಮಾನವಾಗಿ ಕಾಣುತ್ತಿರುವ ಪಕ್ಷ ಕಾಂಗ್ರೆಸ್‌. ಇಂತಹ ಪಕ್ಷದಿಂದಲೇ ಜಿಪಂ ಅಧ್ಯಕ್ಷರಾಗಿ ಅಧಿಕಾರದ ರುಚಿ ಉಂಡು ಇವತ್ತು ಅದೇ ಪಕ್ಷಕ್ಕೆ ದ್ರೋಹ ಮಾಡುತ್ತಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.

ಇದೇ ಸಂದರ್ಭದಲ್ಲಿ ಬಸವೇಶ್ವರ ವೃತ್ತದಲ್ಲಿ ಜಿಪಂ ಮಾಜಿ ಅಧ್ಯಕ್ಷರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಪದೇ-ಪದೇ ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ಹಾಗೂ ಗ್ಯಾಸ್‌ ಬೆಲೆ ಏರಿಸುತ್ತಿರುವ ಕ್ರಮದ ಕುರಿತು ರಾಷ್ಟ್ರಪತಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ಗೆ ಸಲ್ಲಿಸಿದರು.

ಬಳ್ಳೋಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಜಿಪಂ ಸದಸ್ಯ ಹಣಮಂತ ಖಂಡೆಕಾರ, ತಾಪಂ ಮಾಜಿ ಅಧ್ಯಕ್ಷ ರುಕು¾ದ್ದಿನ ತದ್ದೆವಾಡಿ, ಪುರಸಭೆ ಸದಸ್ಯರಾದ ಜಹಾಂಗಿರ ಸೌದಾಗರ, ಅಯುಬ ಬಾಗವಾನ, ಭೀಮಾಶಂಕರ ಮೋರಮನ, ಪುರಸಭೆ ಮಾಜಿ ಅಧ್ಯಕ್ಷ ಯಮುನಾಜಿ ಸಾಳುಂಕೆ, ರಶಿದ ಅರಬ, ಜಾವಿದ ಮೋಮಿನ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next