Advertisement

ಕಾಂಗ್ರೆಸ್‌ ಭ್ರಷ್ಟಾಚಾರ, ಗೂಂಡಾಗಿರಿಯಲ್ಲಿ ನಂ 1

12:11 PM Mar 19, 2018 | Team Udayavani |

ಪಿರಿಯಾಪಟ್ಟಣ: ರಾಜ್ಯದ ಕಾಂಗ್ರೆಸ್‌ ಪಕ್ಷ ಆಡಳಿತದಲ್ಲಿ ನಂಬರ್‌ ಒನ್‌ ಅಲ್ಲ ಭ್ರಷ್ಟಾಚಾರದಲ್ಲಿ, ಗುಂಡಾಗಿರಿಯಲ್ಲಿ, ನಂಬರ್‌ ಒನ್‌ ಕೂಡ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದರು. ಪಿರಿಯಾಪಟ್ಟಣದ ಕೊಡಗುಗೌಡ ಸಮಾಜದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

Advertisement

ರಾಜ್ಯದಲ್ಲಿ ಭ್ರಷ್ಟರನ್ನು ಸೆದೆಬಡಿಯುವ ಅಧಿಕಾರದಲ್ಲಿ ಇರುವ ಲೋಕಾಯುಕ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಂಗ್ರೆಸ್‌ನವರು ಆಲಿಬಾಬ ಮತ್ತು 40 ಮಂದಿ ಕಳ್ಳರಿದ್ದಂತೆ ರಾಜ್ಯವನ್ನು ಪರ್ಸಂಟೇಜ್‌ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಬೆಂಗಳೂರನ್ನು ಗಾಬೇìಜ್‌ಸಿಟಿ ಮಾಡಿದ್ದು ಇವರ ಸಾಧನೆ ಇದರಿಂದ ಸಾಮಾನ್ಯವರ್ಗ ಈ ಸರ್ಕಾರವನ್ನು ಕಿತ್ತೂಗೆಯುವಂತೆ ಮನಸ್ಸು ಮಾಡಿದ್ದಾರೆ.

ಭಾರತ ಮೋದಿ ಪ್ರಧಾನಿಯಾದ ನಂತರ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಮಾಡಿದೆ. ಅಲ್ಲದೆ ಭಾರತದಲ್ಲಿ ಜನಸಾಮಾನ್ಯರಿಗಾಗಿ ಜನ್‌ಧನ್‌ಯೋಜನೆ, ಭೇಟಿ ಬಚಾವೋ ಬೇಟಿ ಪಡಾವೋ, ಮುದ್ರಾ ಯೋಜನೆ ಮುಂತಾದ ಹಲವಾರು ಯೋಜನೆ ರೂಪಿಸಿ ಶ್ರೀ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಚುನಾವಣಾ ಉಸ್ತುವಾರಿ ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನಪರಿಷತ್‌ ಸದಸ್ಯ ಸುನೀಲ್‌ಸುಬ್ರಹ್ಮಣಿ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಜೆ.ರವಿ, ತಂಬಾಕು ಮಂಡಳಿ ಉಪಾಧ್ಯಕ್ಷ ಪಿ.ವಿ.ಬಸವರಾಜಪ್ಪ, ವಿಭಾಗ ಸಂಘಟನಾ ಕಾರ್ಯದರ್ಶಿ ಸುರೇಶ್‌ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಂಬಳ್ಳಿ ಮೂರ್ತಿ, ಆಕಾಂಕ್ಷಿಗಳಾದ ಡಾ.ಪ್ರಕಾಶ್‌ ಬಾಬುರಾವ್‌, ಎಸ್‌.ಮಂಜುನಾಥ್‌, ಶಂಭುಲಿಂಗಪ್ಪ, ಶಶಿಕುಮಾರ್‌, ಟಿ.ಡಿ.ಗಣೇಶ್‌ ಇತರರಿದ್ದರು.

ಹಣ, ಹೆಂಡದ ಸಂಪ್ರದಾಯವಿಲ್ಲ: ಪಕ್ಷವನ್ನು ಪ್ರತಿಯೊಬ್ಬರೂ ತಾಯಿ ಸಮಾನವಾಗಿ ಕಾಣಬೇಕು ಇಲ್ಲಿ ವ್ಯಕ್ತಿ ಮುಖ್ಯವಲ್ಲ ಪಕ್ಷ ಮುಖ್ಯ ಪಕ್ಷದ ಚಿಹ್ನೆಯಡಿ ಯಾರೆ ಸ್ಪರ್ಧಿಸಿದರು ಅವರಿಗೆ ಗೌರವ ನೀಡುವ ಕೆಲಸವಾಗಬೇಕು. ಚುನಾವಣೆ ಹತ್ತಿರ ಬರುತ್ತಿದ್ದಂತೆ ಜೆಡಿಎಸ್‌ ಮತ್ತು ಕಾಂಗ್ರೆಸ್‌  ಬೂತ್‌ ಮಟ್ಟದ ಕಾರ್ಯಕರ್ತರ ಸಭೆ  ನಡೆಸಿ ಹಣ ಮತ್ತು ಹೆಂಡ ಸಂಗ್ರಹಣೆಗೆ ತೊಡಗುತ್ತವೆ. ಆದರೆ ಬಿಜೆಪಿಯಲ್ಲಿ ಆ ಸಂಸ್ಕೃತಿ ಇಲ್ಲವಾಗಿದೆ ಎಂದು ಸಂಸದ ಪ್ರತಾಪ್‌ಸಿಂಹ ಹೇಳಿದರು.

Advertisement

ರಾಮ್‌ದಾಸ್‌ ಅರೋಪ ಸುಳ್ಳು: ಮತದಾರರ ಪಟ್ಟಿಯಲ್ಲಿ 11 ಸಾವಿರಕ್ಕೂ ಹೆಚ್ಚು ಮತದಾರರನ್ನು ಕೈಬಿಡಲಾಗಿದೆ ಎಂದು ಮಾಜಿ ಸಚಿವ ಎಸ್‌.ಎ.ರಾಮದಾಸ್‌ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕಾಂಗ್ರೆಸ್‌ನ ಪಾಲಿಕೆ ಸದಸ್ಯ ಸುನೀಲ್‌ಕುಮಾರ್‌ ಟೀಕಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರ¸‌ುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಯಶಸ್ವಿಯಾಗಿ ಚುನಾವಣೆಯನ್ನು ನಡೆಸಿಕೊಂಡು ಬರುತ್ತಿದೆ. ಆದರೂ ರಾಮದಾಸ್‌, ಮತಪಟ್ಟಿಯಲ್ಲಿ ಸಾವಿರಾರು ಮಂದಿ ಹೆಸರನ್ನು ಕೈಬಿಟ್ಟು ಬೇಕಾದವರನ್ನು ಸೇರಿಸಿಕೊಂಡಿದ್ದಾರೆ ಎಂದು ಬುದ್ದಿಹೀನರಂತೆ ಹೇಳಿಕೆ ನೀಡುತ್ತಿರುವುದು ಪ್ರಜಾಪ್ರ¸‌ುತ್ವಕ್ಕೆ ಮಾಡುವ ಅವಮಾನವಾಗಿದೆ ಎಂದು ಕಿಡಿಕಾರಿದರು.

ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿರುವ ರಾಮದಾಸ್‌ ಅವರು ಅನಗತ್ಯವಾಗಿ ಆಡಳಿತ ಪಕ್ಷದ ಕಾರ್ಯವೈಖರಿಯ ಬಗ್ಗೆ ಮಾತನಾಡುವ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಇವರ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ರಂದೀಪ್‌ ಸ್ಪಷ್ಟನೆಯನ್ನು  ನೀಡಿದ್ದು, ಅವರ ವರ್ಗಾವಣೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next