Advertisement

ಮಿಜೋರಾಂ “ಕೈ” ಸಿಎಂ ಅಭ್ಯರ್ಥಿ ಥಾನ್ ಹವ್ಲಾಗೆ 2 ಕ್ಷೇತ್ರಗಳಲ್ಲೂ ಸೋಲು

03:23 PM Dec 11, 2018 | Sharanya Alva |

ಮಿಜೋರಾಂ: 5 ಬಾರಿ ಮಿಜೋರಾಂ ರಾಜ್ಯದ ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದ ಲಾಲ್ ಥಾನ್ ಹವ್ಲಾ ಅವರು ಈ ಬಾರಿ ಸ್ಪರ್ಧಿಸಿದ್ದ ಎರಡೂ ವಿಧಾನಸಭಾ ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದ್ದಾರೆ.

Advertisement

ಛಾಂಫೈ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಮುಖ್ಯಮಂತ್ರಿಯಾಗಿ ಅಖಾಡಕ್ಕಿಳಿದಿದ್ದ ಲಾಲ್ ಥಾನ್ ಹವ್ಲಾ ಅವರನ್ನು ಮಿಜೋ ನ್ಯಾಶನಲ್ ಫ್ರಂಟ್ ನ ಟಿಜೆ ಲಾಲ್ ನುಂಟುಲುವಾಂಗಾ 1049 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಥಾನ್ 4163 ಮತ ಪಡೆದಿದ್ದರೆ, ಲಾಲ್ 5212 ಮತ ಗಳಿಸಿದ್ದರು.

ಮತ್ತೊಂದು ಕ್ಷೇತ್ರವಾದ ಸೆರ್ಛಿಪ್ ನಲ್ಲಿ ಲಾಲ್ ಥಾನ್ ಹವ್ಲಾ ಅವರನ್ನು ನ್ಯಾಶನಲಿಸ್ಟ್ ಪಕ್ಷದ ಸ್ಥಾಪಕ ಲಾಲ್ಡುಹೋಮಾ ಕೇವಲ 410 ಮತಗಳ ಅಂತರದಿಂದ ಸೋಲಿಸಿದ್ದಾರೆ. ಥಾನ್ ಹವ್ಲಾ 5071 ಮತ ಪಡೆದಿದ್ದರೆ, ಲಾಲ್ಡು 5481 ಮತ ಗಳಿಸಿದ್ದರು. ಥಾನ್ ಹವ್ಲಾ ಈ ಬಾರಿ ಗೆಲುವು ಸಾಧಿಸುವ ಮೂಲಕ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿಯುವ ಕನಸು ಕಂಡಿದ್ದರು. ಆದರೆ ಮಿಜೋರಾಂ ಮತದಾರ ಹಾಲಿ ಮುಖ್ಯಮಂತ್ರಿ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನೇ ಸಾರಸಗಟಾಗಿ ತಿರಸ್ಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next