Advertisement
ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಕಾಂಗ್ರೆಸ್‌ನ ಸೌಮ್ಯಾರೆಡ್ಡಿ 54457 ಮತಗಳನ್ನು ಪಡೆಯುವ ಮೂಲಕ ಜಯಭೇರಿ ಬಾರಿಸಿದ್ದಾರೆ. ತೀವ್ರ ಸ್ಪರ್ಧೆಯೊಡ್ಡಿದ ಬಿಜೆಪಿಯ ಬಿ.ಎನ್.ಪ್ರಹ್ಲಾದ್‌ಬಾಬು ಅವರು 2,889 ಮತಗಳ ಕಡಿಮೆ ಅಂತರದಿಂದ ಪರಾಭವಗೊಂಡಿದ್ದಾರೆ. ಇವರು ಕ್ಷೇತ್ರದಲ್ಲಿ ಕಳೆದ 2 ಅವಧಿಗೆ ಶಾಸಕರಾಗಿದ್ದು ಚುನಾವಣೆ ಹೊತ್ತಲ್ಲಿ ನಿಧನ ಹೊಂದಿದ ಬಿ.ಎನ್.ವಿಜಯಕುಮಾರ್ ಅವರ ಸಹೋದರರಾಗಿದ್ದಾರೆ. ವಿಭಿನ್ನ ರೀತಿಯ ಪ್ರಚಾರ, ಮತದಾರರ ಜಾಗೃತಿ ಮೂಲಕ ಗಮನ ಸೆಳೆದಿದ್ದ ಪಕ್ಷೇತರ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಕೇವಲ 1861 ಮತಗಳನ್ನಷ್ಟೇ ಪಡೆದು ಠೇವಣಿ ಕಳೆದುಕೊಂಡಿದ್ದಾರೆ.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಈ ಹಿಂದೆ ಪ್ರತಿನಿಧಿಸುತ್ತಿದ್ದ ಜಯನಗರ ಕ್ಷೇತ್ರಕ್ಕೆ ಇದೀಗ ಅವರ ಪುತ್ರಿ ಸೌಮ್ಯಾರೆಡ್ಡಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. 2008ರ ಕ್ಷೇತ್ರ ಪುನರ್‌ವಿಂಗಡಣೆಗೂ ಮೊದಲು ರಾಮಲಿಂಗಾರೆಡ್ಡಿ ಅವರು ಜಯನಗರ ಕ್ಷೇತ್ರದಿಂದಲೇ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ಬಿಟಿಎಂ ಲೇಔಟ್‌ನಿಂದ ಸ್ಪರ್ಧಿಸಲಾರಂಭಿಸಿದ ರಾಮಲಿಂಗಾರೆಡ್ಡಿ ಈವರೆಗೆ ಆ ಕ್ಷೇತ್ರದಿಂದಲೂ ಮೂರು ಬಾರಿ ಆಯ್ಕೆಯಾಗಿದ್ದಾರೆ. ಪುತ್ರಿಯ ರಾಜಕೀಯ ಪ್ರವೇಶಕ್ಕೆ ಜಯನಗರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದ ಅವರು ಸೌಮ್ಯಾ ರೆಡ್ಡಿ ಗೆಲುವಿನಲ್ಲೂ ಮಹತ್ವದ ಪಾತ್ರ ವಹಿಸಿದ್ದಾರೆ. ತಂದೆಯ ಹಳೆಯ ಕ್ಷೇತ್ರದ ಪ್ರತಿನಿಧಿಯಾಗಿ ಪುತ್ರಿ ಚುನಾಯಿತರಾಗಿದ್ದಾರೆ. ಕಾಂಗ್ರೆಸ್ ಸಂಖ್ಯಾಬಲ ಹೆಚ್ಚಳ
ಜಯನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸುವ ಮೂಲಕ ಕಾಂಗ್ರೆಸ್‌ನ ಸದಸ್ಯ ಬಲ 79ಕ್ಕೆ ಏರಿಕೆಯಾಗುವ ಜತೆಗೆ ವಿಧಾನಸಭೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರದ ಸಂಖ್ಯಾಬಲಕ್ಕೆ ಮತ್ತೂಂದು ಸ್ಥಾನ ಸೇರ್ಪಡೆಯಾಗಿದೆ. ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ 78 ಸ್ಥಾನ ಗಳಿಸಿತ್ತು. ನಂತರ ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ಸದಸ್ಯರ ಸಂಖ್ಯೆ 77ಕ್ಕೆ ಕುಸಿಯಿತು. ಬಳಿಕ ನಡೆದ ರಾಜರಾಜೇಶ್ವರಿನಗರ ಹಾಗೂ ಜಯನಗರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿದ್ದು, ಸದಸ್ಯ ಬಲ 79ಕ್ಕೆ ಏರಿಕೆಯಾಗಿದೆ.
Related Articles
Advertisement
ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಬಗ್ಗೆ ಮೊದಲೇ ಗೊತ್ತಿತ್ತು, ಸಮ್ಮಿಶ್ರ ಸರ್ಕಾರವನ್ನು ಜನ ಒಪ್ಪಿದ್ದಾರೆಂಬ ಸಂದೇಶ ಜಯನಗರ ಫಲಿತಾಂಶದಿಂದ ದೊರೆತಿದೆ. ಅಭಿವೃದ್ಧಿ ವಿಚಾರದಲ್ಲಿ ನಾನು ಮೋದಿಗಿಂತ ಮುಂದಿದ್ದೇನೆ.– ಎಚ್.ಡಿ.ಕುಮಾರಸ್ವಾಮಿ ಈ ಗೆಲುವು ಕಾಂಗ್ರೆಸ್ ಗೆಲುವೇ ಹೊರತು ಮೈತ್ರಿ ಸರ್ಕಾರದ ಗೆಲುವಲ್ಲ. ಜಯನಗರದಲ್ಲಿ ನಮ್ಮ ಗೆಲುವು ನಿರೀಕ್ಷಿತ. ಈ ಹಿಂದೆಯೇ ಚುನಾವಣೆ ನಡೆದಿದ್ದರೂ ನಾವೇ ಗೆಲ್ಲುತ್ತಿ¨ªೆವು. ಅದರಂತೆ ಈಗಲೂ ನಾವೇ ಗೆದ್ದಿದ್ದೇವೆ.
– ಸಿದ್ದರಾಮಯ್ಯ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು ಅವರು 2,889 ಮತಗಳ ಕಡಿಮೆ ಅಂತರದಿಂದ ಪರಾಭವಗೊಂಡಿದ್ದಾರೆ. ಮತದಾರರ ತೀರ್ಪನ್ನು ಗೌರವಿಸುತ್ತೇವೆ. ಕಳೆದ ಬಾರಿಗಿಂತ ಈ ಕ್ಷೇತ್ರದಲ್ಲಿ ಬಿಜೆಪಿ ಸುಮಾರು 7 ಸಾವಿರ ಅಧಿಕ ಮತಗಳನ್ನು ಪಡೆದಿದೆ.
– ಬಿ.ಎಸ್.ಯಡಿಯೂರಪ್ಪ ಅಭ್ಯರ್ಥಿಗಳ ಮತ ಗಳಿಕೆ ವಿವರ
ಸೌಮ್ಯಾರೆಡ್ಡಿ (ಕಾಂಗ್ರೆಸ್)- 54,457
ಬಿ.ಎನ್.ಪ್ರಹ್ಲಾದ್‌ಬಾಬು (ಬಿಜೆಪಿ)- 51,568
ರವಿಕೃಷ್ಣಾರೆಡ್ಡಿ (ಪಕ್ಷೇತರ)- 1861
ಪ್ರಸ್ತುತ ವಿಧಾನಸಭೆ ಬಲಾಬಲ
ಒಟ್ಟು ಸ್ಥಾನ-224
ಖಾಲಿ ಇರುವ ಸ್ಥಾನ 2 (ರಾಮನಗರ, ಜಮಖಂಡಿ)
ಬಿಜೆಪಿ-104
ಕಾಂಗ್ರೆಸ್-79
ಜೆಡಿಎಸ್-36
ಬಿಎಸ್‌ಪಿ-1
ಕೆಪಿಜೆಪಿ-1
ಪಕ್ಷೇತರ-1