Advertisement

ಆನೇಕಲ್‌ ತಾಲೂಕು ಕಾಂಗ್ರೆಸ್‌ ಭದ್ರಕೋಟೆ

12:17 PM Apr 20, 2023 | Team Udayavani |

ಆನೇಕಲ್‌: ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಬಿ.ಶಿವಣ್ಣ ಸಾವಿರಾರು ಸಂಖ್ಯೆಯ ಜನರೊಂದಿಗೆ ಬೃಹತ್‌ ಮೆರವಣಿಗೆ ನಡೆಸಿ ಉಮೇದುವಾರಿಕೆ ಸಲ್ಲಿಸಿದರು.

Advertisement

ಆನೇಕಲ್‌ ಪಟ್ಟಣದ ವೆಂಕಟೇಶ್ವರ ಚಿತ್ರಮಂದಿರ ದಿಂದ ತಮಟೆ ವಾದ್ಯ ಡೊಳ್ಳು ಕುಣಿತ ಹಾಗೂ ಕಲಾ ತಂಡಗಳ ನಡುವೆ ಸಾವಿರಾರು ಸಂಖ್ಯೆಯಲ್ಲಿ ತೆರೆದ ವಾಹನದ ಮೂಲಕ ಸಂಸದ ಡಿ.ಕೆ.ಸುರೇಶ್‌ ಹಾಗೂ ಮಾಜಿ ಸಚಿವ ರಾಮಲಿಂಗರೆಡ್ಡಿ ಬೆಂಗಳೂರು ನಗರ ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ರಾಮಚಂದ್ರ ತಾ.ಕಚೇರಿ ಯವರೆಗೆ ಮೆರವಣಿಗೆ ಮೂಲಕ ಬರಲಾಯಿತು. ತಾಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಲು ಸಂಸದ ಡಿ.ಕೆ.ಸುರೇಶ್‌ ಶಾಸಕ ಬಿ.ಶಿವಣ್ಣನವರಿಗೆ ಸಾಥ್‌ ನೀಡಿದರು.

ಆನೇಕಲ್‌ ತಾಲೂಕು ಕಾಂಗ್ರೆಸ್‌ ಭದ್ರಕೋಟೆ: ಉಮೇದುವಾರಿಕೆ ಸಲ್ಲಿಕೆ ಬಳಿಕ ಮಾತನಾಡಿದ ಸಂಸದ ಡಿ.ಕೆ.ಸುರೇಶ್‌ ಆನೇಕಲ್‌ ತಾಲೂಕು ಕಾಂಗ್ರೆಸ್‌ ಭದ್ರಕೋಟೆಯಾಗಿ ಹೊರಹೊಮ್ಮಿದೆ, ಬಿಜೆಪಿ ಅಭ್ಯರ್ಥಿ ಹೆಸರಿಗಷ್ಟೇ ಸೀಮಿತ ಆಗುತ್ತಾರೆ. ಈ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ಕಾಂಗ್ರೆಸ್‌ ಪಕ್ಷದ ಕೈಡಿಯಲಿದೆ.ಆನೇಕಲ್‌ ತಾಲೂಕಿನಲ್ಲಿ ಎಲ್ಲಾ ವರ್ಗದ ಜನರಿಗೆ ಯಾವುದೇ ತೊಂದರೆ ಇಲ್ಲದೆ ಜೀವನ ನಡೆಸ ಬೇಕಾದರೆ ಶಿವಣ್ಣ ನವರಿಗೆ ಜನ ಮತ ಹಾಕ ಬೇಕು. ಕಳೆದ ಎರಡು ಬಾರಿ ಶಿವಣ್ಣ ಗೆಲುವು ಸಾಧಿಸಲಿದ್ದ ಬಳಿಕ ಆನೇಕಲ್‌ ತಾಲೂಕಿನಲ್ಲಿ ಜನ ನೆಮ್ಮದಿಯ ಜೀವನ ನಡೆಸುತ್ತಿ ದ್ದಾರೆ. ಯಾವುದೇ ವರ್ಗಗಳ ನಡುವೆ ಗಲಾಟೆ ಇಲ್ಲದೆ ಉತ್ತಮ ಆಡಳಿತವನ್ನು ಕೊಟ್ಟ ಕೀರ್ತಿ ಶಿವಣ್ಣನವರಿಗಿದೆ ಎಂದರು.

ಕಾಂಗ್ರೆಸ್‌ ನಿಂದ ಬದಲಾವಣೆ ರಾಮಲಿಂಗ ರೆಡ್ಡಿ ಹೇಳಿಕೆ: ಕಾಂಗ್ರೆಸ್‌ ಪಕ್ಷ ರಾಜ್ಯದಲ್ಲಿ ಆಡಳಿತಕ್ಕೆ ಬರಲಿದೆ. ಈಗಾಗಲೇ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು ಬಿಜೆಪಿಯ ಹಲವರು ಈಗಾಗಲೇ ಪಕ್ಷವನ್ನು ತೊರೆ ಯುತ್ತಿದ್ದಾರೆ ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ ನಡೆಸಲು ಕಾಂಗ್ರೆಸ್‌ ಪಕ್ಷಕ್ಕೆ ಜನ ಮನ್ನಣೆ ನೀಡುವುದು ಶತಸಿದ್ಧ ಎಂದರು. ಆನೇಕಲ್‌ ತಾಲೂಕಿನ ಸುತ್ತಮುತ್ತಲ ಗ್ರಾಮ ಗಳಿಂದ ಬಸ್‌ ಮೂಲಕ ಹಾಗೂ ವಿವಿಧ ವಾಹನ ಗಳಲ್ಲಿ ಸಾವಿ ರಾರು ಸಂಖ್ಯೆಯಲ್ಲಿ ಜನ ಆಗಮಿಸಿ ದ್ದರಿಂದ ಆನೇಕಲ್‌ ಪಟ್ಟಣಕ್ಕೆ ಬರುವ ವಾಹನಗಳು ಟ್ರಾಫಿಕ್‌ನಲ್ಲಿ ಗಂಟೆಗಟ್ಟಲೆ ಸಿಲುಕಿ ಪರದಾಡ ಬೇಕಾಯಿತು.

ಎಲ್ಲಿ ನೋಡಿದರೂ ಕಿಲೋಮೀಟರ್‌ ಗಟ್ಟಲೆ ಜನಸಾಗರ: ಆನೇಕಲ್‌ ತಾಲೂಕಿನ ಚಂದಾಪುರ ಮುಖ್ಯ ರಸ್ತೆಯ ಮರಸೂರು ಹಾಗೂ ಬನ್ನೇರು ಘಟ್ಟ ರಸ್ತೆಯ ಇಂಡ್ಲವಾಡಿ ಕ್ರಾಸ್‌ವರೆಗೆ ಎಲ್ಲಿ ನೋಡಿದರೂ ಜನ ಜಂಗುಳಿ ಸೇರಿತ್ತು. ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಜನ ಟ್ರಾಫಿಕ್‌ನಲ್ಲಿ ಸಿಲುಕಿ ಶಿವಣ್ಣನವರ ನಾಮಪತ್ರ ಸಲ್ಲಿಕೆಯ ಕಾರ್ಯಕ್ರಮದ ತಾಲೂಕು ಕಚೇರಿಯವರಿಗೆ ಬರಲು ಸಾಧ್ಯವಾಗದೆ ಪರದಾಡ ಬೇಕಾಯಿತು. ತಾಲೂಕು ಕಚೇರಿ ಬಳಿ 144 ಸೆಕ್ಷನ್‌ ಜಾರಿ ಹಿನ್ನೆಲೆ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಹಾಗೂ ಮುಖಂಡರನ್ನು ಬ್ಯಾರಿಕೇಡ್‌ ಹಾಕಿ ನೂರಾರು ಜನ ಪೊಲೀಸರು ಹಾಗೂ ಅರೆಸೇನಾ ಪಡೆಯು ಜನರನ್ನು ತಡೆದರು. ಈ ಸಂದರ್ಭದಲ್ಲಿ ಕೆಲ ಹೊತ್ತು ಬ್ಯಾರಿಕೇಟ್‌ಗಳನ್ನು ತಳ್ಳಿ ನೌಕಾಟ ತಳ್ಳಾಟ ನಡೆಯಿತು.

Advertisement

ಮೆರವಣಿಗೆಯಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಆರ್‌. ಕೆ.ರಮೇಶ್‌, ಜಿಪಂ ಮಾಜಿ ಅಧ್ಯಕ್ಷ ಕೆ.ಸಿ.ರಾಮಚಂದ್ರ, ಗುಡ್ಡಟ್ಟಿ ಶಂಭಪ್ಪ, ಬಾಬುರೆಡ್ಡಿ, ಸಿ.ಆರ್‌.ಮನೋಹರ್‌, ಗಟ್ಟಳ್ಳಿ ಸೀನಪ್ಪ, ಹರೀಶ್‌ಗೌಡ, ಲಿಂಗಣ್ಣ, ರಘುಪತಿ ರೆಡ್ಡಿ, ಶ್ರೀನಿವಾಸ್‌, ಶ್ರೀರಾಮ್‌, ಪದ್ಮನಾಭ ಸೇರಿ ದಂತೆ ಮತ್ತಿ ತ ರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next