Advertisement
ಶ್ರಮಿಕ ವರ್ಗದ ನೆರವಿಗೆ ಆಗ್ರಹಕೋವಿಡ್ ದಿಂದ ಸಂಕಷ್ಟಕ್ಕೆ ಒಳಗಾಗಿರುವ ವಿವಿಧ ವರ್ಗಗಳಿಗೆ ಮುಖ್ಯಮಂತ್ರಿಯವರು ಪರಿಹಾರ ಘೋಷಣೆ ಮಾಡಿದ್ದರೂ ಕೆಲವು ವರ್ಗಗಳ ಶ್ರಮಿಕರನ್ನು ಕೈ ಬಿಟ್ಟಿದ್ದಾರೆ. ಕಾರ್ಮಿಕ ಬ್ಯಾಜ್ ಮತ್ತಿತರ ವ್ಯವಸ್ಥೆ ಇದ್ದವರಿಗೆ ಮಾತ್ರ ರಾಜ್ಯ ಸರಕಾರ ಪರಿಹಾರ ಘೋಷಿಸಿದೆ. ಬೀಡಿ ಕಾರ್ಮಿಕರು, ಕ್ಷೌರಿಕರು, ಗೂಡಂಗಡಿ, ಬೀದಿ ಬದಿ ವ್ಯಾಪಾರಸ್ಥರು, ಟೈಲರ್‌ಗಳು, ಖಾಸಗಿ ಬಸ್ ಸಿಬಂದಿಗೆ ಪ್ರತ್ಯೇಕ ಪ್ಯಾಕೇಜ್ ರೂಪಿಸಬೇಕು ಎಂದರು. ಪ್ರಧಾನಿ ರಾಜ್ಯ ಸರಕಾರಕ್ಕೆ ಯಾವುದೇ ಸಹಾಯಮಾಡಿಲ್ಲ. ಸಿಎಂ ಜತೆಗಿನ ವೀಡಿಯೋ ಸಂವಾದ ದಲ್ಲೂ ನೆರವು ನೀಡುವ ಬಗ್ಗೆ ಘೋಷಿಸದೇ ಕೇವಲ ಸಲಹೆಯನ್ನಷ್ಟೇ ನೀಡಿದ್ದಾರೆ ಎಂದರು.
ಶಾಸಕ ಯು.ಟಿ. ಖಾದರ್ ಮಾತನಾಡಿ, ಪ್ರಧಾನಮಂತ್ರಿಯ ಕೇರ್ ಫಂಡ್‌ಗೆ ಕರ್ನಾಟಕದಿಂದ 3 ಸಾವಿರ ಕೋ.ರೂ. ದೇಣಿಗೆ ಹೋಗಿದ್ದರೂ ಕೂಡ ಈವರೆಗೂ ಕೇಂದ್ರ ಸರಕಾರ ರಾಜ್ಯಕ್ಕೆ ನಯಾಪೈಸೆ ಬಿಡುಗಡೆ ಮಾಡಿಲ್ಲ. ಈ ಹಿಂದೆ ಜಿಎಸ್‌ಟಿಯ ರಾಜ್ಯದ ಪಾಲನ್ನೂ ಕೂಡ ಕೇಂದ್ರ ಸರಕಾರ ನೀಡಿರಲಿಲ್ಲ. ಈಗ ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಇತರ ರಾಜ್ಯಗಳಿಗೆ ಅನುದಾನ ಬಿಡುಗಡೆ ಮಾಡಿದ್ದರೂ ಕರ್ನಾಟಕವನ್ನ ಕೇಂದ್ರ ಸರಕಾರ ಅವಗಣಿಸಿದೆ ಎಂದು ಆರೋಪಿಸಿದರು. ಕೇಂದ್ರದಿಂದ ಅನುದಾನ ತರಿಸುವ ಧೈರ್ಯವಿಲ್ಲದ ರಾಜ್ಯದ ಸಂಸದರೆಲ್ಲ ತತ್‌ಕ್ಷಣ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.