Advertisement

‘ಅಡ್ಡಕಸುಬಿ ಬಜೆಟ್‌’ಎಂದು ಸಿದ್ಧರಾಮಯ್ಯ ಜನತೆಗೆ ಅವಮಾನ ಮಾಡಿದ್ದಾರೆ; ಬಿಜೆಪಿ

12:32 PM Mar 05, 2022 | Team Udayavani |

ಬೆಂಗಳೂರು : ರಾಜ್ಯ ಬಜೆಟ್ ವಿರುದ್ಧ ಸಿದ್ದರಾಮಯ್ಯ ಅವರು ಮಾಡಿರುವ ಟೀಕೆ ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಬಿಜೆಪಿ ಟ್ವೀಟ್ ಮಾಡಿದೆ.

Advertisement

ರಾಜಕೀಯ ಟೀಕೆಗಳು ಮರ್ಯಾದೆಯ ಗೆರೆ ದಾಟಬಾರದು. ಆದರೆ ಸಿದ್ದರಾಮಯ್ಯ ಅವರು ರಾಜ್ಯದ ಆಯವ್ಯಯವನ್ನೇ ಅಡ್ಡಕಸುಬಿ ಬಜೆಟ್‌ ಎಂದು ವ್ಯಾಖ್ಯಾನಿಸಿದ್ದಾರೆ.ಪ್ರಜಾಪ್ರಭುತ್ವದ ರೀತಿ ರಿವಾಜುಗಳಿಗೆ ವಿರುದ್ಧವಾದ ಹೇಳಿಕೆಯನ್ನು ಸಿದ್ದರಾಮಯ್ಯರಿಂದ ರಾಜ್ಯದ ಜನರು ನಿರೀಕ್ಷಿಸಿರಲಿಲ್ಲ.ಇದು ರಾಜ್ಯದ ಜನತೆಗೆ ಮಾಡಿದ ಅವಮಾನ. ಜನವಿರೋಧಿ ಕಾಂಗ್ರೆಸ್ ಎಂದು ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ಆಕ್ರೋಶ ಹೊರ ಹಾಕಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಿನದಿಂದ ದಿನಕ್ಕೆ ಹತಾಶೆಯ ಮಡುವಿಗೆ ಜಾರುತ್ತಿದ್ದಾರೆ ಎಂಬುದಕ್ಕೆ ಅವರ ಮಾತುಗಳೇ ಸಾಕ್ಷಿ. ಬಜೆಟ್ ಬಗ್ಗೆ ಸಿದ್ರಾಮಯ್ಯ ಆಡಿದ ಮಾತು ಅವರ ಘನತೆಗೆ ತಕ್ಕುದಲ್ಲ.ಸಿದ್ದರಾಮಯ್ಯನವರು ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ “ಅಡ್ಡಕಸುಬಿ” ಎಂದು ಯಾರಾದರೂ ಕರೆದರೆ, ನಿಮಗೆ ನೋವಾಗಬಹುದೇ? ಎಂದು ಬಿಜೆಪಿ ಪ್ರಶ್ನಿಸಿದೆ.

‌ಮಾನ್ಯ ಡಿ.ಕೆ.ಶಿವಕುಮಾರ್ ಅವರೇ,ನಿಮ್ಮ ರಾಜಕೀಯ ಪ್ರೇರಿತ ಗೊಡ್ಡು ಪಾದಯಾತ್ರೆಗೆ ಬೆದರಿ ಬಜೆಟ್‌ನಲ್ಲಿ ಮೇಕೆದಾಟು ಯೋಜನೆಗೆ ಹಣ ಮೀಸಲಿರಿಸಿದ್ದಲ್ಲ. ಮೇಕೆದಾಟು ಯೋಜನೆ ಅನುಷ್ಠಾನ ನಮ್ಮ ಬದ್ಧತೆ, ಅದಕ್ಕಾಗಿ ಹಣ ಮೀಸಲಿರಿಸಿದ್ದೇವೆ. ನಿಮ್ಮಿಂದ ಇದು ಸಾಧ್ಯವಾಗಿಲ್ಲ ಎಂಬುದಕ್ಕಾಗಿ ನೀವು ನಾಚಿಗೆ ಪಟ್ಟುಕೊಳ್ಳಬೇಕು ಎಂದು ಟೀಕಿಸಿದೆ.

ನಿಲುವು ಮೊದಲು ಸ್ಪಷ್ಟಪಡಿಸಿ ; ಸುರ್ಜೆವಾಲಾಗೆ ಸವಾಲು

Advertisement

ಮೋದಿ ಸರ್ಕಾರ ಮೇಕೆದಾಟು ಯೋಜನೆಗೆ ಏಕೆ ಅನುಮತಿ ನೀಡುತ್ತಿಲ್ಲವೆಂದು ಸುರ್ಜೆವಾಲಾ ಪ್ರಶ್ನಿಸಿದ್ದಾರೆ.ಗೋವಾ & ತಮಿಳುನಾಡಿನಲ್ಲಿ ಕಾಂಗ್ರೆಸ್‌ ಪಕ್ಷ ಅನುಕೂಲಸಿಂಧು ರಾಜಕಾರಣ ನಡೆಸುತ್ತಿದೆ. ಮಹದಾಯಿ & ಮೇಕೆದಾಟು ವಿಚಾರದಲ್ಲಿ ಗೋವಾ ಮತ್ತು ತಮಿಳುನಾಡು ಕಾಂಗ್ರೆಸ್ ಪಕ್ಷದ ನಿಲುವು ಮೊದಲು ಸ್ಪಷ್ಟಪಡಿಸಿ ಎಂದು ಸವಾಲು ಹಾಕಿದೆ.

ಸುರ್ಜೇವಾಲರೇ, ನಿಮಗೆ ಮಾಹಿತಿ ಮತ್ತು ತಾಕತ್ತಿನ ಕೊರತೆ ಇದೆ. ಮೊದಲಾಗಿ ನೀವು ಪ್ರಶ್ನಿಸಿದ ರೀತಿಯೇ ತಪ್ಪು. ಡಿಪಿಆರ್‌ ಸಲ್ಲಿಸಲು ವಿಳಂಬ ಮಾಡಿದ್ದೇಕೆ ಎಂದು ಕಾಂಗ್ರೆಸ್ ಪಕ್ಷವನ್ನು ಮೊದಲು ಪ್ರಶ್ನಿಸಿ.
ತಮಿಳುನಾಡು ಸರ್ಕಾರವನ್ನು ಮೇಕೆದಾಟು ಯೋಜನೆಗಾಗಿ ಆಗ್ರಹಿಸುವ ತಾಕತ್ತು ನಿಮ್ಮಲ್ಲಿದೆಯೇ ? ಎಂದು ಇನ್ನೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದೆ.

ಮಾನ್ಯ ಸಿದ್ದರಾಮಯ್ಯ, ಶಿವಕುಮಾರ್ ಅವರೇ, ನಿಮ್ಮ ಉಸ್ತುವಾರಿಗೆ 2013-2018 ವರೆಗೆ ನಿಮ್ಮದೇ ಸರ್ಕಾರ‌ ಅಧಿಕಾರದಲ್ಲಿತ್ತು ಎಂಬುದನ್ನು ಒಮ್ಮೆ ನೆನಪಿಸಿ ಎಂದು ಟ್ವೀಟ್ ನಲ್ಲಿ ಬರೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next