Advertisement
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ 50 ಮಂದಿ ಶಾಸಕರ ಖರೀದಿಗೆ ಪ್ರಯತ್ನ ನಡೆಸಲಾಗುತ್ತಿದೆ. ಬಿಜೆಪಿ ಬ್ರೋಕರ್‌ಗಳು ಪ್ರತಿನಿತ್ಯ ನಮ್ಮ ಶಾಸಕರ ಸಂಪರ್ಕಿಸುತ್ತಿದ್ದಾರೆ. 50 ಕೋಟಿಯಿಂದ 100 ಕೋಟಿ ರೂ.ವರೆಗೂ ಆಫರ್ ಏರಿಕೆಯಾಗಿದೆ. ಮೊನ್ನೆಯೂ ಕೆಲ ಕಾಂಗ್ರೆಸ್ ಶಾಸಕರಿಗೆ ಕರೆ ಬಂದಿದೆ ಎಂದು ತಿಳಿಸಿದರು.
ಬಿಜೆಪಿಯ ಸಂತೋಷ್ ಜೀ, ಶೋಭಾ ಕರಂದ್ಲಾಜೆ, ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಇವರೆಲ್ಲಾ ಒಂದು ಗ್ಯಾಂಗ್ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಬೀಳಿಸುವುದಾಗಿ ಮೋದಿಗೆ ಮಾತು ಕೊಟ್ಟಿದ್ದಾರೆ. ಆದರೆ ನಮ್ಮದು 136 ಶಾಸಕರಿರುವ ಬಂಡೆಯಂಥ ಸರ್ಕಾರ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಲ್ಲ. ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ. ಫೋನ್ ಮಾಡಿ ಆಫರ್ ಮಾಡಿದವನ ಆಡಿಯೋ ಇದೆ. ಸರಿಯಾದ ಸಮಯದಲ್ಲಿ ರಿಲೀಸ್ ಮಾಡುತ್ತೇವೆ. ಆಪರೇಷನ್ ಕಮಲದ ಬಗ್ಗೆ ಮತ್ತಷ್ಟು ಸಾಕ್ಷ್ಯ ಕಲೆ ಹಾಕುತ್ತಿದ್ದೇವೆ. ಸಾಕ್ಷಿ ಸಮೇತ ಐಟಿ, ಇಡಿಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಕೊಡುತ್ತೇವೆ ಎಂದು ಹೇಳಿದರು. ನಿನ್ನನ್ನು ಇಡಿಯವರು ಹಿಡಿಯುತ್ತಿಲ್ವಾ?
ಕೆಲಸ ಶಾಸಕರಿಗೆ ಕರೆ ಮಾಡಿರುವ ವ್ಯಕ್ತಿಯು 100 ಕೋಟಿ ರೂ. ರೆಡಿ ಇದೆ. ಎಲ್ಲಿಗೆ ಬರ್ತೀರಾ?, 50 ಜನ ಮಂದಿ ಖರೀದಿಗೆ ಪ್ಲಾನ್ ನಡೆದಿದೆ. ನನಗೆ ಯಾರೋ ಒಬ್ಬ ಫೋನ್ ಮಾಡಿದ್ದ, 100 ಕೋಟಿ ರೆಡಿ ಅಂತಾ ಹೇಳ್ದ . ಹೇಯ್ ನೂರು ಕೋಟಿ ಇಟ್ಕೊಳಯ್ಯ, ನಿನ್ನ ಯಾರು ಇಡಿಯವರು ಹಿಡಿಯುತ್ತಿಲ್ವಾ? ಅಂತಾ ಹೇಳಿದ್ದೇನೆ. ಇಡಿಯವರಿಗೆ ಕರೆ ಮಾಡಬೇಕು ಅಂತಲೂ ಚಿಂತಿಸಿದ್ದೆ ಎಂದು ಶಾಸಕ ರವಿಕುಮಾರ್‌ಗೌಡ ಗಣಿಗ ಗಂಭೀರ ಆರೋಪ ಮಾಡಿದರು.
Related Articles
Advertisement
ಶಾಸಕ ರವಿ ಗಣಿಗ ವಿರುದ್ಧ ಬಿಜೆಪಿ ದೂರು:ಬಿಜೆಪಿ ಮುಖಂಡರು ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ನಾಲ್ಕಾರು ಮುಖಂಡರು ಕಾಂಗ್ರೆಸ್ ಸರ್ಕಾರ ಬೀಳಿಸಲು ಶಾಸಕರಿಗೆ 50 ರಿಂದ 100 ಕೋಟಿ ರೂವರೆಗೆ ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ರವಿಕುಮಾರ್ ಗೌಡ (ರವಿ ಗಣಿಗ) ಮಾಡಿರುವ ಆರೋಪವು ಸುಳ್ಳು, ಸಾಕ್ಷಿ ರಹಿತ ಹಾಗೂ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ದೂರಿದ್ದಾರೆ. ಈ ಸುಳ್ಳು ಆರೋಪಕ್ಕೆ ರವಿ ಗಣಿಗ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.