Advertisement

ಕಾಂಗ್ರೆಸ್‌ನಲ್ಲಿ ರಮ್ಯಾ ಹುದ್ದೆಗೆ ರೋಹನ್‌

11:26 PM Sep 28, 2019 | mahesh |

ನವದೆಹಲಿ: ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಘಟಕದ ಅಧ್ಯಕ್ಷ ಸ್ಥಾನ ನಿಭಾಯಿಸುತ್ತಿದ್ದ ಕನ್ನಡತಿ, ನಟಿ ರಮ್ಯಾ ದಿವ್ಯಸ್ಪಂದನ ಅವರ ಹುದ್ದೆಗೆ ಈಗ ರೋಹನ್‌ ಗುಪ್ತಾರನ್ನು ನೇಮಕ ಮಾಡಲಾಗಿದೆ.

Advertisement

ತತ್‌ಕ್ಷಣಕ್ಕೆ ಅನ್ವಯವಾಗುವಂತೆ ಕಾಂಗ್ರೆಸ್‌ ಅಧ್ಯಕ್ಷರು, ಪಕ್ಷದ ಸಾಮಾಜಿಕ ಮಾಧ್ಯಮದ ಹೊಣೆಯನ್ನು ರೋಹನ್‌ ಗುಪ್ತಾರಿಗೆ ವಹಿಸಿರುವುದಾಗಿ ಪಕ್ಷ ಶನಿವಾರ ತಿಳಿಸಿದೆ. ಗುಪ್ತಾ ಅವರು ಈ ಹಿಂದೆ ಇದೇ ಘಟಕದ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹೀನಾಯವಾಗಿ ಸೋಲುಂಡ ಬಳಿಕ, ಮಾಜಿ ಸಂಸದೆ ರಮ್ಯಾ ಅವರು ಪಕ್ಷದ ಚಟುವಟಿಕೆಗಳಿಂದ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಿಂ ದಲೂ ದೂರ ಉಳಿದಿದ್ದಾರೆ.

ತಮ್ಮೆಲ್ಲ ಸೋಷಿಯಲ್‌ ಮೀಡಿಯಾ ಖಾತೆಗಳನ್ನು ಡಿಲೀಟ್‌ ಮಾಡಿ, ಕಣ್ಮರೆಯಾಗಿದ್ದಾರೆ. ಇತ್ತೀಚೆಗೆ ಅವರ ವಿವಾಹದ ಸುದ್ದಿಯೂ ಮಾಧ್ಯಮ ಗಳಲ್ಲಿ ಹರಿದಾಡಿತ್ತು.  ಈಗ ಕಾಂಗ್ರೆಸ್‌ ಅವರ ಸ್ಥಾನಕ್ಕೆ ಮತ್ತೂಬ್ಬರನ್ನು ನೇಮಕ ಮಾಡಿರುವ ಕಾರಣ, ರಮ್ಯಾ ಅವರು ಸಕ್ರಿಯ ರಾಜ ಕಾರಣದಿಂದ ದೂರ ಉಳಿದರೇ ಎಂಬ ಅನುಮಾನ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next