ಮಧ್ಯ ಪ್ರದೇಶ : ಐ ಸಿ ಎಮ್ ಆರ್ ನಿಂದ ಮಾನ್ಯತೆ ಹೊಂದಿರದ ಕೋವಿಡ್ ಕಿಟ್ ಗಳನ್ನು ಸೋಂಕು ಪರೀಕ್ಷೆಯಲ್ಲಿ ಬಳಸಲಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಲ್ಲಿನ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಹರಿಹಾಯ್ದಿದೆ.
ಮಾನ್ಯತೆ ಇಲ್ಲದ ಕೋವಿಡ್ ಕಿಟ್ ಗಳನ್ನು ಕೋರಿಯಾದಿಂದ ಆಮದು ಮಾಡಿಕೊಂಡು ಕೋವಿಡ್ ಪರೀಕ್ಷೆಗೆ ಬಳಸಿಕೊಳ್ಳಲಾಗಿದೆ. ಇದು ಕೋವಿಡ್ ಹೆಸರಿನಲ್ಲಿ ಮಾಡಿದ ಬ್ರಹ್ಮಾಂಡ ಭ್ರಷ್ಟಾವಚಾರ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ಆರೋಪಿಸಿದೆ.
ಇದನ್ನೂ ಓದಿ : ಕಂದಾಹಾರ್ ಜನಪ್ರಿಯ ಹಾಸ್ಯ ನಟನ ಬರ್ಬರ ಹತ್ಯೆ: ತಾಲಿಬಾನ್ ವಿರುದ್ಧ ಆಕ್ರೋಶ
ಮಾದ‍್ಯಮಗಳಿಗೆ ಪ್ರತಿಕಕ್ರಿಯಿಸಿದ ಮಧ್ಯ ಪ್ರದೇಶ ಕಾಂಗ್ರೆಸ್ ನಾಯಕ ಜಿತು ಪತ್ವಾರಿ, ದೇಶದ ಪ್ರಧಾನಿ ನರೇಂದ್ರ ಮೋದಿ ಸೌತ್ ಕೋರಿಯಾದಿಂದ ಕೋವಿಡ್ ಕಿಟ್ ಗಳನ್ನು ಆಮದು ಮಾಡಿಕೊಳ್ಳಬೇಡಿ ಎಂದು ಎಲ್ಲ ರಾಜ್ಯಗಳಿಗೂ ಸೂಚಿಸಿದ್ದರೂ ಕೂಡ, ಮಧ್ಯ ಪ್ರದೇಶ ಸರ್ಕಾರ ಕೊರಿಯಾದಿಂದ ಕೋವಿಡ್ ಕಿಟ್ ಗಳನ್ನು ಆಮದು ಮಾಡಿಕೊಂಡು ಕೋವಿಡ್ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿದೆ. ಮಧ್ಯ ಪ್ರದೇಶದ ಜನತೆ ಮುಂದೆ ಖಂಡಿತವಾಗಿ ಶಿವರಾಜ್ ಸಿಂಗ್ ಚೌಹಾಣ್ ಗೆ ಪಾಠ ಕಲಿಸಲಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಆದಾಗ್ಯೂ, ಮಧ್ಯಪ್ರದೇಶ ಸರ್ಕಾರವು ಕೋವಿಡ್ -19 ಪರೀಕ್ಷಾ ಕಿಟ್‌ಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪವನ್ನು ತಳ್ಳಿಹಾಕಿದೆ
ಈ ಬಗ್ಗೆ ಪ್ರತಿಕ್ರಿಯಿಸಿದ ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್, “ಕಿಟ್ ಗಳು ಗುಣಮಟ್ಟದದ್ದಾಗಿರಲಿಲ್ಲದಿದ್ದರೇ ಮತ್ತು ಕಿಟ್ ಗಳಿಗೆ ಮಾನ್ಯತೆ ಪ್ರಮಾಣಪತ್ರ ಇಲ್ಲದಿದ್ದರೆ ಅದು ಐಸಿಎಮ್ ಆರ್ ಪೋರ್ಟಲ್ ನಲ್ಲಿ ಮೊದಲ ಸ್ಥಾನದಲ್ಲಿ ಇರುತ್ತಿರಲಿಲ್ಲ. ಎಂದು ಕಾಂಗ್ರೆಸ್ ಆರೋಪಕ್ಕೆ ಪರೋಕ್ಷವಾಗಿ ಕುಟುಕಿದ್ದಾರೆ.
ಇದನ್ನೂ ಓದಿ : ಗ್ರಾಹಕ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿದ ವೊಡೋಫೋನ್ ಐಡಿಯಾ : ವಿಶೇಷತೆಗಳೇನು..?