Advertisement
ಭಗವಂತ ಆಯುಷ್ಯ ಕೊಟ್ಟ, ಆರೋಗ್ಯ ಕೊಟ್ಟ. ಆದ್ದರಿಂದ ಪಂಚಮ ಪರ್ಯಾಯವನ್ನು ನಡೆಸಲು ಸಾಧ್ಯವಾಯಿತು. ಸ್ತೋತ್ರ ಮಾಡುವುದಿದ್ದರೆ ಭಗವಂತನ ಸ್ತೋತ್ರ ಮಾಡಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು. ನಾವು ರಾಜಕೀಯದಿಂದ ಹೊರಗಿದ್ದೇ ಮಾರ್ಗ ದರ್ಶನ ಮಾಡುತ್ತೇವೆ. ಮಠಾಧಿಪತಿಗಳು ರಾಜ ಕೀಯ ದಿಂದ ಹೊರಗಿರಬೇಕು ಎಂಬುದೇ ನಮ್ಮ ನೀತಿ. ಧರ್ಮದ ರಕ್ಷಣೆ, ಪರಿಸರ ಸಂರಕ್ಷಣೆ ಮೊದ ಲಾದ ಸಂದರ್ಭದಲ್ಲಿ ಮಾತ್ರ ರಾಜಕೀಯಕ್ಕೆ ಸಂಬಂಧಿಸಿ ಹೋರಾಟ, ಮಾರ್ಗದರ್ಶನ ನಡೆಸು ತ್ತೇವೆ ಎಂದು ಶ್ರೀಗಳು ಹೇಳಿದರು.
ಪರ್ಯಾಯ ಸ್ವಾಗತ ಸಮಿತಿ ಪರವಾಗಿ ನೀಡಿದ ಅಭಿನಂದನಾ ಪತ್ರವನ್ನು ಮಟ್ಟು ಲಕ್ಷ್ಮೀ ನಾರಾಯಣ ವಾಚಿಸಿದರು. ಪೇಜಾವರ ಶ್ರೀಗಳು ಐತಿಹಾಸಿಕ ಪರ್ಯಾಯ ಪೂಜೆಯನ್ನು ನಡೆಸಿದ ಸಂದರ್ಭ ನಾವು ಸಾಕ್ಷಿಗಳಾಗಿರುವುದೇ ನಮ್ಮ ಭಾಗ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಗಣ್ಯರಾದ ಪ್ರಮೋದ್ ಮಧ್ವರಾಜ್, ಪಿ.ಜಿ.ಆರ್. ಸಿಂಧ್ಯಾ, ಶೋಭಾ ಕರಂದ್ಲಾಜೆ, ವಿನಯಕುಮಾರ ಸೊರಕೆ, ಕೆ. ರಘುಪತಿ ಭಟ್, ಬಾಲಾಜಿ ರಾಘವೇಂದ್ರ ಆಚಾರ್ಯ, ಹರಿನಾರಾಯಣದಾಸ ಆಸ್ರಣ್ಣ ಮೊದಲಾದವರು ಉಪಸ್ಥಿತರಿದ್ದರು.