ನವದೆಹಲಿ : ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ತೀವ್ರಗೊಳಿಸುತ್ತಿದ್ದು, ಶನಿವಾರ “ಚಾರ್ಜ್ ಶೀಟ್” ಬಿಡುಗಡೆ ಮಾಡಿದ್ದು, ಬಿಜೆಪಿಯನ್ನು ‘ಭ್ರಷ್ಟ್ ಜುಮ್ಲಾ ಪಾರ್ಟಿ’ ಎಂದು ಕರೆದಿದೆ. ಅದರ ಮಂತ್ರ ‘ಕುಚ್ ಕಾ ಸಾಥ್, ಖುದ್ ಕಾ ವಿಕಾಸ್, ಸಬ್ಕೆ ಸಾಥ್ ವಿಶ್ವಾಸ್ ಘಾತ್’ (ಕೆಲವರ ಲಾಭಕ್ಕಾಗಿ, ಸ್ವಯಂ ಅಭಿವೃದ್ಧಿ ಮತ್ತು ಎಲ್ಲರಿಗೂ ದ್ರೋಹ) ಎಂದು ಆರೋಪಿಸಿದೆ.
ಭಾರತ್ ಜೋಡೋ ಯಾತ್ರೆಯನ್ನು ಮುನ್ನಡೆಸುತ್ತಿರುವ ರಾಹುಲ್ ಗಾಂಧಿ ಅವರು ಶ್ರೀನಗರದ ಲಾಲ್ ಚೌಕ್ ಪ್ರದೇಶದಲ್ಲಿರುವ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಲಿದ್ದು, ನಂತರ ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರ ಯಾತ್ರೆಯ ಪರಾಕಾಷ್ಠೆ ಎನ್ನುವ ಸಾರ್ವಜನಿಕ ಸಭೆ ನಡೆಯಲಿದೆ ಎಂದು ವಿರೋಧ ಪಕ್ಷ ಹೇಳಿದೆ.
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಮತ್ತು ಸಂಘಟನೆಯ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪಕ್ಷದ ಮುಂದಿನ ಕಾರ್ಯಕ್ರಮ ಹಾಥ್ ಸೇ ಹಾಥ್ ಜೋಡೋ ಅಭಿಯಾನದ ಲಾಂಛನವನ್ನು ಅನಾವರಣಗೊಳಿಸಿದರು.
ಲಾಂಛನವು ಭಾರತ್ ಜೋಡೋ ಯಾತ್ರೆಯಂತೆಯೇ ಇದೆ, ಆದರೆ ಒಂದೇ ವ್ಯತ್ಯಾಸವೆಂದರೆ ಅದರ ಮೇಲೆ ಕಾಂಗ್ರೆಸ್‌ನ ಕೈ ಚಿಹ್ನೆ ಇದೆ, ಇದು 100 ಪ್ರತಿಶತ ರಾಜಕೀಯ ಪ್ರಚಾರವಾಗಿದೆ, ಇದು ದೇಶಾದ್ಯಂತದ ಮೆರವಣಿಗೆ ಎಂದು ಹೇಳಲಾಗುವುದಿಲ್ಲ ಎಂದು ರಮೇಶ್ ಹೇಳಿದರು.
Related Articles
ವೇಣುಗೋಪಾಲ್ ಅವರು ಜನವರಿ 26 ರಿಂದ ಪ್ರಾರಂಭವಾಗುವ ಕಾಂಗ್ರೆಸ್ ಅಭಿಯಾನದ ಭಾಗವಾಗಿ, ಪಕ್ಷವು ‘ಚಾರ್ಜ್ ಶೀಟ್’ ಮತ್ತು ರಾಹುಲ್ ಗಾಂಧಿಯವರ ಪತ್ರವನ್ನು ಯಾತ್ರೆಯ ಸಂದೇಶದೊಂದಿಗೆ ಪ್ರತಿ ಮನೆಗಳಿಗೆ ಕೊಂಡೊಯ್ಯಲಿದೆ ಎಂದು ಹೇಳಿದರು.