ಇಂಫಾಲ್ : ಮಣಿಪುರ್ ವಿಧಾನ ಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳುಗಳು ಬಾಕಿ ಇರುವಾಗಲೇ ಮಣಿಪುರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ರಾಜಿನಾಮೆ ನೀಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದಾಸ್ ಕೊಂಥೌಜಮ್ ಭಾರತೀಯ ಜನತಾ ಪಕ್ಷದತ್ತ ವಾಲಿದ್ದು, ಮಾತ್ರವಲ್ಲದೇ, ರಾಜ್ಯ ಕಾಂಗ್ರೆಸ್ ನ ಪ್ರಭಾವಿ ಎಂಟು ಮಂದಿ ಶಾಸಕರು ಪಕ್ಷಾಂತರಕ್ಕೆ ಸಿದ್ದರಾಗಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ : ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣ: ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ
ಮುಂದಿನ ವರ್ಷ, ಅಂದರೇ, 2022 ರಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈಗಾಗಲೇ ರಾಜಕೀಯ ಪಡಸಾಲೆಯಲ್ಲಿ ಚುನಾವಣಾ ಪೂರ್ವ ಸಿದ್ಧತೆಗಳು ನಡೆಯುತ್ತಿವೆ. ಪಕ್ಷಾಂತರಕ್ಕೆ ವಾಲುತ್ತಿರುವ ಕಾಂಗ್ರೆಸ್ ಪ್ರಭಾವಿ ನಾಯಕರನ್ನು ಉಳಿಸಿಕೊಳ್ಳುವ ಪ್ರಯತ್ನ ರಾಷ್ಟ್ರೀಯ ಕಾಂಗ್ರೆಸ್ ಮಾಡುತ್ತಿದೆಯಾದರೂ, ಗೋವಿಂದಾಸ್ ಕೊಂಥೌಜಮ್ ಹಾಗೂ ಅವರ ಬೆಂಬಲಿಗರಾದ ಎಂಟು ಮಂದಿ ಪ್ರಮುಖ ಶಾಸಕರು ಬಿಜೆಪಿಗೆ ಇಂದು ( ಮಂಗಳವಾರ, ಜುಲೈ 20) ಸೇರ್ಪಡೆಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಇತ್ತ, ರಾಜ್ಯ ಬಿಜೆಪಿಯ ಮುಖ್ಯಮಂತ್ರಿ ಬಿರೆನ್ ಸಿಂಗ್, ಈ ಬಾರಿ ಚುನಾವಣೆಯಲ್ಲಿ ಒಂದಿಷ್ಟು ಪೈಪೋಟಿಯ ಕಣ ಕಾಣಿಸುತ್ತಿರುವ ಕಾರಣದಿಂದ ವಲಸೆ ನಾಯಕರನ್ನು ಸೇರ್ಪಡೆ ಮಾಡಿಕೊಳ್ಳುವುದರತ್ತ ಮುಖಮಾಡಿ ಅಧಿಕಾರವನ್ನು ಉಳಿಸಿಕೊಳ್ಳವ ಪ್ರಯತ್ನದಲ್ಲಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ : BSY ಜತೆ ಸಮುದಾಯ : ಬದಲಾವಣೆ ಕೆಂಡಕ್ಕೆ “ಆಡಿಯೋ’ ತುಪ್ಪ : ಬಿಎಸ್‌ವೈ ಮೌನ