ಶಿವಮೊಗ್ಗ: ಸಿಎಂ-ಸಚಿವರು, ಸಿಎಂ-ಡಿಸಿಎಂ ನಡುವೆ ಹಲವು ವಿಷಯಕ್ಕೆ ಸಂಬಂಧಿಸಿ ಗೊಂದಲ ಇದೆ. ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಗೊಂದಲಗಳು ಮುಂದುವರಿದಿದ್ದು, ಇದನ್ನು ರಾಜ್ಯದ ಜನರು ಗಮನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸ ಕ ಬಿ.ವೈ.ವಿಜಯೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಕಷ್ಟು ವಿಳಂಬ ಮಾಡಿ ಸರಕಾರ ಬರಗಾಲ ಘೋಷಿಸಿದೆ. ಈಗ ಕೇಂದ್ರದಿಂದ ತಂಡ ಬಂದಿದೆ. ಇದರ ನಡುವೆ ಸರಕಾರ ಹೊಸದಾಗಿ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಲು ಉತ್ಸುಕವಾಗಿದೆ. ಇದು ನಿಜಕ್ಕೂ ದುರದೃಷ್ಟಕರ. ಈ ಬಗ್ಗೆ ಸಿಎಂ, ಡಿಸಿಎಂ ದ್ವಂದ್ವ ನಿಲುವು ಹೊಂದಿದ್ದಾರೆ. ಇದೆಲ್ಲವೂ
ಬಡವರ ಬಗ್ಗೆ ಸರಕಾರಕ್ಕೆ ಕಾಳಜಿ ಇಲ್ಲದುದನ್ನು ತೋರಿಸುತ್ತಿದೆ ಎಂದರು.
ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಮನೂರು ರಾಜಕಾರಣಿಯಾಗಿ ಈ ಮಾತನ್ನು ಹೇಳಿಲ್ಲ. ಸಮಾಜದ ಮುಖಂಡರಾಗಿ, ವೀರ ಶೈ ವ-ಲಿಂಗಾ ಯತ ಸಂಘ ಟ ನೆಯ ಅಧ್ಯಕ್ಷರಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯದ ಪರಿಸ್ಥಿತಿಯನ್ನೇ ನೋಡಿ ಹೇಳಿರುವ ಅವರ ಮಾತನ್ನು ಆಡಳಿತ ನಡೆಸುವವರು ಉದಾರ ಮನಸ್ಸಿನಿಂದ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.