Advertisement

ಶೈಕ್ಷಣಿಕ ವರ್ಷದ ಕುರಿತು ಶಾಲೆಗಳಿಗೆ ಗೊಂದಲ

12:16 PM Jun 16, 2020 | Suhan S |

ಮುಂಬಯಿ, ಜೂ. 15: 2020-21ರ ಶೈಕ್ಷಣಿಕ ವರ್ಷವು ಜೂನ್‌ 15ರಿಂದ ಪ್ರಾರಂಭವಾಗಲಿದೆ ಎಂದು ರಾಜ್ಯ ಶಿಕ್ಷಣ ಇಲಾಖೆ ಈ ಹಿಂದೆ ಘೋಷಿಸಿದ್ದರೂ, ರಾಜ್ಯ ಸರಕಾರವು ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಸುತ್ತೋಲೆ ಅಥವಾ ನಿರ್ದೇಶನವನ್ನು ನೀಡದಿರುವುದರಿಂದ ಶಾಲೆಗಳನ್ನು ಪುನಃ ರಾರಂಭಿಸುವುದರ ಬಗ್ಗೆ ಗೊಂದಲಗಳು ಮುಂದುವರಿದಿದೆ.

Advertisement

ಆನ್‌ಲೈನ್‌ ಅಥವಾ ಆಫ್ಲೈನ್‌ ಶಿಕ್ಷಣ ಆಗಿರಲಿ ರಾಜ್ಯ ಶಿಕ್ಷಣ ಇಲಾಖೆಯು ತರಗತಿಗಳ ಪ್ರಾರಂಭದ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಶಾಲೆಗಳಿಗೆ ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ರಾಜ್ಯಕ್ಕೆ ಸಲ್ಲಿಸಿದ ಸ್ಟ್ಯಾಂಡರ್ಡ್‌ ಆಪರೇಟಿಂಗ್‌ ಕಾರ್ಯವಿಧಾನಗಳು (ಎಸ್‌ ಒಪಿಗಳು) ಪುನಃ ತೆರೆಯುವ ವಿವರಗಳನ್ನು ಒಳಗೊಂಡಿವೆ. ಇದನ್ನು ಸರಕಾರದ ಅನುಮೋದನೆಯ ಅನಂತರ ಸಾರ್ವಜನಿಕ ಗೊಳಿಸಲಾಗುವುದು. ಈ ಮಧ್ಯೆ ಶಿಕ್ಷಕರು ಶಾಲೆಗೆ ಹೋಗಬಹುದು ಮತ್ತು ಆನ್‌ಲೈನ್‌ ತರಗತಿಗಳಿಗೆ ಇ-ವಿಷಯವನ್ನು ರಚಿಸುವ ಕೆಲಸ ಮಾಡಬಹುದು ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೆಲವು ಶಾಲೆಗಳು ಸೋಮವಾರದಿಂದ ಕೆಲವು ಆನ್‌ಲೈನ್‌ ತರಗತಿಗಳನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಸೂಚನೆಗಳ ಅನುಪಸ್ಥಿತಿಯಲ್ಲಿ ಅವರು ತಮ್ಮದೇ ಆದ ವೇಳಾಪಟ್ಟಿಯನ್ನು ರೂಪಿಸಿಕೊಂಡಿದ್ದಾರೆ ಎನ್ನಲಾಗಿದೆ. ಸರಕಾರವು ನಮಗೆ ಸ್ಪಷ್ಟ ಸೂಚನೆಗಳನ್ನು ನೀಡುವವರೆಗೆ ನಾವು ದಿನಕ್ಕೆ ಎರಡು ಗಂಟೆಗಳ ಕಾಲ ಕಲಿಸಲು ಯೋಜಿಸುತ್ತಿದ್ದೇವೆ ಎಂದು ಉಪನಗರ ಶಾಲೆಯ ಪ್ರಾಂಶುಪಾಲರೊಬ್ಬರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next