Advertisement

ಧೈರ್ಯದಿಂದ ಸಮಸ್ಯೆ ಎದುರಿಸಿ, ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ

07:06 PM Mar 13, 2021 | Team Udayavani |

ಕಲಬುರಗಿ: ಜೀವನದಲ್ಲಿ ಸಾಧನೆ ಮಾಡಲು ಎಂತಹದೇ ಸಮಸ್ಯೆಗಳು ಎದುರಾದರೂ ಧೈರ್ಯದಿಂದ ಎದುರಿಸಿ ಸಾಧನೆಯ ಮೆಟ್ಟಿಲು ಏರಬೇಕು. ಆತ್ಮಸ್ಥೈರ್ಯ
ಕಳೆದುಕೊಳ್ಳಬಾರದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ, ಕರ್ನಾಟಕ ಜನಪದ ಅಕಾಡೆಮಿ ಅಧ್ಯಕ್ಷೆ ಬಿ.ಮಂಜಮ್ಮ ಜೋಗುತಿ ಹೇಳಿದರು.

Advertisement

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಶುಕ್ರವಾರ ಗೋದುತಾಯಿ ಅವ್ವ ಅವರ 50ನೇ ಪುಣ್ಮಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗೋದುತಾಯಿ ಅವ್ವ ಹೆಸರಿನ ಅವ್ವ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಸಾಧನೆ ಮಾಡಲು ಸರಳ ದಾರಿ ಇರುವುದಿಲ್ಲ. ದಾರಿಯುದ್ದಕ್ಕೂ ಮುಳ್ಳುಗಳೇ ಹೆಚ್ಚು. ಆ ಎಲ್ಲಾ ಮುಳ್ಳುಗಳನ್ನು ಹೊಡೆದೊಡಿಸಿ ಸಾಧನೆ ಮಾಡಬೇಕೆಂಬ ಛಲ ಇಟ್ಟುಕೊಳ್ಳಬೇಕು. ಇಂದು ಎಷ್ಟೋ ಜನರು ಧೈರ್ಯವಿಲ್ಲದೆ ಸಾವನ್ನೇ ಕೊನೆ ಎಂದು ತಿಳಿದುಕೊಂಡಿದ್ದಾರೆ. ಆದರೆ ಸಾವೆ ಕೊನೆಯಲ್ಲ, ಸಮಸ್ಯೆಗಳು ಬಂದಾಗ ಹೋರಾಡಬೇಕು, ಜಯಶಾಲಿಯಾಗಬೇಕೆಂದು ಹೇಳಿದರು.

ತಾವು ಎದುರಿಸಿದ ಕಷ್ಟಗಳು ಅವುಗಳನ್ನು ಮೆಟ್ಟಿ ನಿಂತು ಹೇಗೆ ಸಾಧನೆ ಮಾಡಲು ಸಾಧ್ಯವಾಯಿತು  ಎಂಬುಂದನ್ನು ತಮ್ಮ ಭಾಷಣದದ್ದುಕ್ಕೂ ಹೇಳಿದರು.
ಗೋದುತಾಯಿ ಅವ್ವ ಅವರ ಹೆಸರಿನ ಅವ್ವ ಪ್ರಶಸ್ತಿ ಸ್ವೀಕರಿಸಿದ್ದಕ್ಕೆ ತಮಗೆ ಬಹಳ ಸಂತೋಷವಾಗಿದೆ ಎಂದರು.

ಸಾನ್ನಿಧ್ಯ ವಹಿಸಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್‌ ಪೂಜ್ಯ ಡಾ| ದಾಕ್ಷಾಯಿಣಿ ಎಸ್‌. ಅಪ್ಪಾ ಅವರು ದಾವಣಗೆರೆ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದುದಕ್ಕಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಬೀದರ ವೈದ್ಯಕೀಯ ಮಹಾವಿದ್ಯಾಲಯದ ಡಾ| ಉಮಾದೇವಿ ಬಿ.ದೇಶಮುಖ ಮಾತನಾಡಿ, ಗೋದುತಾಯಿ ಅವ್ವಾಜೀಯವರು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅವರಂತೆ ಪೂಜ್ಯ ದಾಕ್ಷಾಯಿಣಿ ಅಪ್ಪ ಅವರು ದಾಸೋಹ, ಕಾಯಕವನ್ನು ಚಿಕ್ಕಂದಿನಿಂದಲೇ ಮಾಡಿಕೊಂಡು ಬರುತ್ತಿದ್ದಾರೆ ಎಂದರು.

Advertisement

ರೇಷ್ಮಿ ಶಿಕ್ಷಣ ಮತ್ತು ಚಾರಿಟೇಬಲ್‌ ಟ್ರಸ್ಟನ ಮುಖ್ಯಸ್ಥೆ ಡಾ| ಭಾರತಿ ಎನ್‌.ರೇಷ್ಮಿ ಗೌರವ ಅತಿಥಿಯಾಗಿ  ಮತ್ತು ಮಹಾವಿದ್ಯಾಲಯ ಪ್ರಾಚಾರ್ಯೆ ಡಾ| ನೀಲಾಂಬಿಕಾ ಶೇರಿಕಾರ ಅಧ್ಯಕ್ಷೀಯ ಸ್ಥಾನ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಮಹಾ ವಿದ್ಯಾಲಯದಿಂದ ಆಗಮಿಸಿದ ಪ್ರಾಧ್ಯಾಪಕರು, ಸಾಹಿತಿಗಳು, ಕಲಾವಿದರು, ನಾಲ್ಕು ಚಕ್ರದ ಪದಾ ಧಿಕಾರಿಗಳು, ಮಹಾವಿದ್ಯಾಲಯದ ಕೃಪಾಸಾಗರ ಗೊಬ್ಬುರ, ಡಾ| ಸಂಗೀತಾ ಪಾಟೀಲ, ನಿರ್ಮಲಾ ಪಾರಾ, ವಿದ್ಯಾ ರೇಷ್ಮಿ, ವಿನೋದ ಹಳಕಟ್ಟಿ, ಅಶೋಕ ಮೂಲಗೆ, ಅಪ್ಪಾಸಾಬ ಬಿರಾದಾರ, ಅನುಸೂಯಾ ಬಡಿಗೇರ, ಶಶೀಕಲಾ ಪಾರಾ, ಪ್ರಭಾವತಿ ಮತ್ತು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ| ಸಿದ್ದಮ್ಮ ಗುಡೇದ್‌ ಪ್ರಾಸ್ತಾವಿಕ ಮಾತನಾಡಿದರು. ಡಾ| ಇಂದಿರಾ ಶೆಟಕಾರ ಸ್ವಾಗತಿಸಿದರು. ಡಾ| ಪುಟ್ಟಮಣಿ ದೇವಿದಾಸ ನಿರೂಪಿಸಿದರು. ಜಾನಕಿ ಹೊಸುರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next