ಕಾಣಲಿಲ್ಲಾ. ಕರಾವಳಿಗೆ ಅನ್ಯಾಯ ಆಗೇತಿ ಅಂದ್ ಕೂಡ್ಲೆ ಆ ಭಾಗದ ಶಾಸಕರೆಲ್ಲಾ ಗಾಂಧಿ ಮುಂದ್ ಕುಂತ ಪ್ರತಿಭಟನೆ ಮಾಡಿದ್ರು. ಮಲೆನಾಡಿಗೆ ಅನ್ಯಾಯ ಆಗೇತಿ ಅಂದ್ರೂ ಆ ಭಾಗದ ಎಲ್ಲಾ ಎಮ್ಮೆಲ್ಲೆಗೋಳು ಪಕ್ಷಾ ಮರತು ಒಂದಾದ್ರು. ಆದ್ರ ಉತ್ತರ ಕರ್ನಾಟಕಕ್ಕ ಅನ್ಯಾಯ ಆಗೇತಿ ಅಂತ ಪ್ರತಿಪಕ್ಷದ ಎಮ್ಮೆಲೆ ಬಾಯಿ ಮಾಡಿದ್ರ ಆಡಳಿತ ಪಕ್ಷದಾಗ ನಿಂತು ಅದ ಭಾಗದ ಮಿನಿಸ್ಟ್ರೆ ಅನ್ಯಾಯ ಆಗಿಲ್ಲಾ ಅಂದ್ರು
Advertisement
ಐತಾರ ಮುಂಜಾನೆದ್ದು ದೌಡ್ ಕಬ್ಬನ್ ಪಾರ್ಕಿಗಿ ಹೋಗಬೇಕು ಅಂತ ಯಜಮಾನ್ತಿ ಮುಂದ ಅಂದೆ. ಐತಾರ ದಿನಾ ಅಷ್ಟು ದೌಡ್ ಅಲ್ಲೇನೈತಿ ಅಂದ್ಲು. ಕಬ್ಬನ್ ಪಾರ್ಕಿಗಿ ಯಾಕ್ ಹೊಕ್ಕಾರ್ ಗೊತ್ತಿಲ್ಲನ? ನೀನು ಬಾ ಹೋಗೂನು ಅಂದೆ. ಅಷ್ಟ ಹೇಳಗೊಡದ ಶ್ರೀಮತಿ ಇಂಟರ್‌ನಲ್ ಸೆಕ್ಯುರಿಟಿ ವಿಂಗ್ಅಲರ್ಟ್ ಆತು ಅಂತ ಕಾಣತೈತಿ. ನಾ ಯಾಕ್ ಬರ್ಲಿ ಯಾರ್ ಕೂಡ ತಿರಗ್ಯಾಡಾಕ್ ಹೊಂಟಿಯೋ ಹೋಗಿ ಬಾ ಅಂದ್ಲು. ಸುಮ್ನ ಒತ್ತಾಯ ಮಾಡಿ ಕರಕೊಂಡು ಬಂದು ಅಕಿ ಮನಸಿಗ್ಯಾಕ ಬ್ಯಾಸರಾ ಮಾಡೂದು ಅಂತೇಳಿ ಮನ್ಯಾಗ ಬಿಟ್ಟು ಗಾಡಿ ಹತ್ತಿದೆ. ಅಷ್ಟರಾಗ ನನ್ನ ಸಲುವಾಗಿ ಕಬ್ಬನ್ ಪಾರ್ಕಿನ್ಯಾಗ ಕಾಯಾರು ಯಾಡ್ ಸರೆ ವೇರ್ ಆರ್ ಯು? ಅಂತ ಮೆಸೆಜ್ ಹಾಕಿದ್ರು.
Related Articles
Advertisement
ಎಲೆಕ್ಷನ್ ನಿಂತಾಗ ಎಲ್ಲಾ ಎಮ್ಮೆಲ್ಲೆ ಅಭ್ಯರ್ಥಿಗೋಳು ತಮ್ಮ ಕ್ಷೇತ್ರಕ್ಕ ಕೋಟ್ಯಾಂತರ ರೂಪಾಯಿ ಅನುದಾನ ತಂದು ಸಾಕಷ್ಟು ಅಭಿವೃದ್ಧಿ ಮಾಡೇನಿ ಅಂತ ಭಾಷಣಾ ಮಾಡ್ತಾರು. ಅಧಿವೇಶನದಾಗ ಬಂದು ಮಾತ್ಯಾಡುವಾಗ ನಮ್ಮದು ಅತ್ಯಂತ ಹಿಂದುಳಿದ ತಾಲೂಕು ಅಂತಾರು. ಮಾಜಿ ಮಂತ್ರಿಯೊಬ್ಬರು ತಮ್ಮ ಕ್ಷೇತ್ರಾನ ಸಿಂಗಾಪೂರ್ ಮಾಡಿದಂಗ ಮಾಡೇನಿ ಒಂದ್ ಸಾರಿ ಬಂದು ನೋಡು ಅಂತ ಹೇಳಿದ್ರು, ಅಷ್ಟು ಅಭಿವೃದ್ಧಿ ಮಾಡಿದ್ರೂ ಜನಾ ಅವರ್ನ ಸೋಲಿಸಿ ಬ್ಯಾರೇದಾರ್ನ ಆರಿಸಿ ಕಳಿಸ್ಯಾರು, ಹೊಸದಾಗಿ ಬಂದ್ ಎಮ್ಮೆಲ್ಲೆ ತಮ್ಮದು ಅತ್ಯಂತ ಹಿಂದುಳಿದ ಕ್ಷೇತ್ರ ಅಂತ ಭಾಷಣಾ ಮಾಡ್ತಾರು. ಯಾರ್ ಮಾತ್ ನಂಬುದು ಹೇಳ್ರಿ? ಭಾರತ ವಿಶ್ವದಾಗ ಆರನೇ ದೊಡ್ಡ ಶ್ರೀಮಂತ ದೇಶ ಅಂತ ವರ್ಲ್ಡ್ ಬ್ಯಾಂಕ್‌ನ್ಯಾರು ಹೇಳ್ತಾರಂತ. ಆದ್ರ ದೇಶದಾಗಿನ ಜನರ ಆದಾಯ ಮಾತ್ರ ಹೆಚ್ಚಾಗಿಲ್ಲ. ಫ್ರಾನ್ಸ್‌ನ ಹಿಂದ್ ಹಾಕಿ ಶ್ರೀಮಂತ ರಾಷ್ಟ್ರ ಆಗಿರೋ ಭಾರತದ ಜನರ ತಲಾ ಆದಾಯ ಅವರಿಗಿಂತ ಇಪ್ಪತ್ತು ಪಟ್ಟು ಕಡಿಮಿ ಐತೆಂತ. ಅಂದ್ರ ದೇಶ ಶ್ರೀಮಂತ ಆಗಾಕತ್ತೇತಿ ಜನಾ ಮಾತ್ರ ಬಡುರಾಗೇ ಉಳದಾರು. ಅಂಬಾನಿ ಏಷ್ಯಾದ ಅತಿದೊಡ್ಡ ಶ್ರೀಮಂತ ಆದ್ರೂ ದೇಶದ ಜನರ ತಲಾ ಆದಾಯ ಮಾತ್ರ ಹೆಚ್ಚಗಿ ಆಗವಾಲ್ರು.
ಅದಕ್ಕ ಆಳಾರು ಮತ್ತು ಜನರ ನಡಕಿನ ಅಂತರ ಕಾರಣ ಅನತೈತಿ. ಉತ್ತರ ಕರ್ನಾಟಕ ಭಾಗದ ಎಮ್ಮೆಲ್ಲೆಗೋಳಿಗೆ ಗೌಡ್ರಿ, ಸವಕಾರ್ರಿ, ದೇಸಾಯಿಗಿರಿ ಮನಸ್ಥಿತಿ ಇನ್ನೂ ಕಡಿಮಿ ಆಗಿಲ್ಲ ಅನತೈತಿ. ಹಿಂಗಾಗೇ ಅವರು ತಮ್ಮ ಗತ್ತಿನ್ಯಾಗ ತಿರಗ್ಯಾಡ್ತಾರು ಬಿಟ್ರ, ಆ ಭಾಗದ ಅಭಿವೃದ್ಧಿ ಬಗ್ಗೆ ಒಗ್ಗಟ್ಟು ತೋರಸಾಕ ಹೋಗುದಿಲ್ಲ ಅನತೈತಿ. ಒಂದೂರಿನ ಗೌಡ ಮತ್ತೂಂದು ಊರಿಗೆ ಆಳು ಅನ್ನೊ ಗಾದಿ ಮಾತೈತಿ. ಪ್ರಜಾಪ್ರಭುತ್ವದಾಗ ಯಾರಿಗೆ ಯಾರು ಸುಪ್ರೀಂ ಅನ್ನೋದ ದೊಡ್ಡ ಪ್ರಶ್ನೆ ಆಗೇತಿ ಅನತೈತಿ. ಯಾಕಂದ್ರ ಶಾಸಕರೆಲ್ಲಾ ತಾವು ಮಾಡಿರೋ ಕಾನೂನನ್ನ ಕೋರ್ಟ್‌ಗೆ ಪ್ರಶ್ನೆ ಮಾಡಾಕ್ ಅಧಿಕಾರ ಇಲ್ಲಾ. ಶಾಸಕಾಂಗ ಎಲ್ಲಾರಿತ ಸುಪ್ರೀಂ ಅನ್ನೋದು ಅವರ ವಾದಾ. ಸದನದೊಳಗ ಏನ್ ಮಾತಾಡಿದ್ರೂ ನಮ್ನ ಕೇಳಾಕಕೋರ್ಟಿಗೆ ಅಧಿಕಾರ ಇಲ್ಲಾ. ಇಲ್ಲಿ ನಾವ ಸುಪ್ರೀಂ ಅಂತ ಕೆಲವು ಎಮ್ಮೆಲ್ಲೆಗೋಳು ಜಡ್ಜ್ಗೋಳ್ ಮ್ಯಾಲ ಇರೋಬರೋ ಸಿಟ್ಟೆಲ್ಲಾ ಅಲ್ಲೇ ತೀರಿಸಿಕೊಂಡು ಬಿಟ್ರಾ. ಜಡ್ಜ್ಗೋಳು ಇದನ್ನ ಕೇಳಿ ಸುಮ್ನ ಇರ್ತಾರಾ? ಅವರೂ ಕಾಯ್ತಿರಾìರು. ಅವರ ಹಂತೇಕ ಕೇಸ್ ಬಂದಾಗ ಅವರು ನಾವ ಸುಪ್ರೀಂ ಅಂತ ಹೇಳ್ತಾರು. ನಮ್ಮ ಟಿವಿ ಆಂಕರ್‌ಗೊàಳು ಸ್ಟುಡಿಯೋದಾಗ ಕುಂತಾಗ ಅವರ ಸುಪ್ರೀಂ ಅವರ ಮುಂದ ಸುಪ್ರೀಂ ಕೋರ್ಟು ಇಲ್ಲಾ. ಶಾಸಕಾಂಗಾನೂ ಇಲ್ಲಾ. ನಮ್ಮನ್ಯಾಗ ನಾವ ಸುಪ್ರೀಂ. ಆದ್ರ ಏನ್ ಬಂತು? ನಡಮನ್ಯಾಗ ನಡಿ ಅಧಿಕಾರ ಅಡಗಿ ಮನ್ಯಾಗ ನಡಿದುಲ್ಲಾ. ನಡಮನ್ಯಾಗ ಅಧಿಕಾರ ಐತಿ ಅಂತೇಳಿ ಅಡಗಿ ಮನ್ಯಾಗ ಚಲಾಯಿಸಾಕ ಹೋದ್ರ ಬೆಡ್ ರೂಮಿಗಿ ಪ್ರವೇಶವಿಲ್ಲ. ನಾ ಎಮ್ಮೆಲ್ಲೆ ನಾನ ಸುಪ್ರೀಂ ಅಂತೇಳಿ ಅಧಿಕಾರ ಇದ್ದಾಗ
ದರ್ಪಾ ತೋರಿದ್ರ ಎಲೆಕ್ಷೆನ್ ದಿನಾ ಮತದಾರ ನಾನ ಸುಪ್ರೀಂ ಅಂತಾನು. ಪ್ರಜಾಪ್ರಭುತ್ವದಾಗ ಎಲ್ಲಾರೂ ಸಮಾನರು ಅನ್ನೋ ದಾದ್ರ ಈ ಸುಪ್ರೀಂ ಅನ್ನೋದೇ ಸಂವಿಧಾನ ಬಾಹಿರ ಅನಕಾನೂನಿಗೂ ಮಾನವೀಯತೆಗೂ ಸಂಘರ್ಷ ನಡದೈತಿ ಅನಸ್ಥೈತಿ. ಸಮಾನತೆ ಅನ್ನೋದು ಬಂದಾಗ ಮನ್ನಿ ಅಕ್ರಮ ಸಂಬಂಧದ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ್ಯಾಗ ಒಂದು ಅಫಿಡವಿಟ್ ಸಲ್ಲಿಸಿ ಅಕ್ರಮ ಸಂಬಂಧದ ತಪ್ಪಿಗೆ ಹೆಣ್ಮಕ್ಕಳ್ನ ಹೊಣೆಗಾರರನ್ನಾಗಿ ಮಾಡಬಾರದು ಅಂತ ಹೇಳ್ತಾರು. ಇದ್ನ ನೋಡಿದ್ರ ಕೇಂದ್ರ ಸರ್ಕಾರ ಹೆಣ್ಮಕ್ಕಳಿಗೆ ಈ ಸಮಾಜದಾಗ ಸಮಾನತೆ ಇಲ್ಲ ಅಂತ ಹೇಳಿದಂಗ ಕಾಣತೈತಿ. ಮದುವಿ ಆದ ಗಂಡಸಿನ ಮ್ಯಾಲ ಹುಡುಗಿ ಕಣ್ ಹಾಕಿದ್ರ, ಪಾಪ ಹೆಣ್ಮಗಳು
ಅಂತ ಮಾನವೀಯತೆಯಿಂದ ಕರುಣೆ ತೋರಿಸಿದ್ರೆ ಏನ್ ಮಾಡೋದು? ಕಣ್ ಹಾಕಿದಾಕಿಗೆ ಕರುಣೆ ತೋರಬೇಕಾ ಕಟಗೊಂಡಾಕಿ ಕಾನೂನಿಗೆ ತಲಿ ಬಾಗಬೇಕಾ? ಏನ್ ಮಾಡಿದ್ರೂ ಒಬ್ಬರಿಗೆ ಅನ್ಯಾಯ ಆಗೂದ. ಕಾನೂನು ಮತ್ತ ಮಾನವೀಯತೆ ನಡಕ ಯಾರ್ ಸುಪ್ರೀಂ ಅನ್ನೋ ಸಂಘರ್ಷ ನಡದೈತಿ ಅಂತ ಅನಸೆôತಿ. ಸಮಾಜಾ ದೊಡ್ಡದಾ ಸಂವಿಧಾನ ದೊಡ್ಡದಾ ಅನ್ನೋ ಪ್ರಶ್ನೆ ಬಂದಾಗ. ಸಮಾಜಾನ ಇಲ್ಲದ ಸಂವಿಧಾನ ಇದ್ರೆನ್ ಬಂತು ಅನ್ನೋ ಪ್ರಶ್ನೆ ಮೂಡತೈತಿ. ಅದ್ಕ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿದ್ರೂ, ಮಾನವೀಯತೆ ಆಧಾರದ ಮ್ಯಾಲ ಕ್ಷಮಾದಾನ ನೀಡೋ ಅಧಿಕಾರ ಸಂವಿಧಾನದಾಗ ಕೊಟ್ಟಾರು ಅನಸ್ಥೈತಿ. ಸಮಾಜದಾಗ ಸಮಾನತೆ ಬರಬೇಕಂದ್ರ ಅನ್ಯಾಯದ ಕೂಗು ನಿಲ್ಲಬೇಕು. ಅದಕ್ಕೆ ಆಳಾರು ಅನ್ಯಾಯ ಆಗದಂಗ ನೋಡಕೊಬೇಕು. ಕಬ್ಬನ್ ಪಾರ್ಕಿಗಿ ಹ್ವಾದ ಗಂಡ ಎಷ್ಟೊತ್ತಾದ್ರೂ ಬರದಿದ್ರ ಮನ್ಯಾಗ ಕುಂತ ಮಡದಿ ಮನಸಿನ್ಯಾಗ ಮೂಡೋ ಆಲೋಚನೆ ಸುಮ್ನ ಕಲ್ಪಿಸಿಕೊಂಡ್ರು ರವಿಚಂದ್ರನ ಕನ್ನಡಾ ಸಿನೆಮಾ ಹಾಡು ಕೇಳಿದಂಗ ಅಕ್ಕೇತಿ. ಆದ್ರೂ ಏನೋ ಆಗೇತಿ ಅಂತ ಅಂದ್ಕೊಂಳ್ಳಾರಿಗೆ ಇರೋ ವಿಷಯ ಹೇಳಿ ಬಿಡಬೇಕು. ನಾನಂತೂ ಯಜಮಾನ್ತಿಗೆ ಇರೋದೆಲ್ಲಾ ಹೇಳಿದೆ. ಆದ್ರೆ, ಸ್ವಲ್ಪ ತೆರಿಗೆ ಬಿತ್ತು. ಉತ್ತರ ಕರ್ನಾಟಕದ ಅನ್ಯಾಯದ ಬಗ್ಗೇನೂ, ಅಧಿಕಾರ ನಡಸಾರಿಗೆ ಹೊರೆ ಜಾಸ್ತಿ ಆದ್ರೂನು ಇರೋದೇನು ಅಂತ ಹೇಳಿ ನ್ಯಾಯಾ ಕೊಡಬೇಕಿತ್ತು ಅಂತ ಅನಸ್ಥೈತಿ. ಶಂಕರ ಪಾಗೋಜಿ