ಬೆಂಗಳೂರು: ವಿಧಾನಸಭೆ ಕಾರ್ಯದರ್ಶಿ ಹುದ್ದೆ ಹೊಣೆಗಾರಿಕೆ ವಿಚಾರದಲ್ಲಿ ಸಂಘರ್ಷ ಉಂಟಾಗಿದ್ದು, ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಕಾರ್ಯದರ್ಶಿ ಜವಾಬ್ದಾರಿ ನಿಭಾಯಿಸುವವರು ಯಾರು? ಎಂಬ ಪ್ರಶ್ನೆ ಮೂಡಿದೆ.
ವಿಧಾನಸಭೆ ಕಾರ್ಯದರ್ಶಿ ಎಸ್. ಮೂರ್ತಿ ರಜೆಯ ಮೇಲಿದ್ದಾಗ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಎಂ.ಕೆ.
ವಿಶಾಲಾಕ್ಷಿಯವರಿಗೆ ಪ್ರಭಾರ ಕಾರ್ಯದರ್ಶಿ ಹುದ್ದೆ ನೀಡಿ ಬೆಳಗಾವಿ ಅಧಿವೇಶನ ನಡೆಸುವ ಜವಾಬ್ದಾರಿ ವಹಿಸಿದ್ದಾರೆ.
ಆದರೆ, ಅಧಿವೇಶನದ ಸಂದರ್ಭದಲ್ಲಿ ಎಸ್.ಮೂರ್ತಿ ಅವರಿಗೆ ರಜೆಯ ಮೇಲೆ ತೆರಳುವುದೋ ಅಥವಾ ಅವರ ಕಾರ್ಯಭಾರ ಏನು ಎಂಬುದನ್ನು ಸೂಚಿಸಿಲ್ಲ. ಹೀಗಾಗಿ, ನವೆಂಬರ್ 27ರಿಂದ ಕಚೇರಿಗೆ ಆಗಮಿಸಿ ನನ್ನ ಕಾರ್ಯ ಮುಂದುವರೆಸುತ್ತೇನೆ. ಜತೆಗೆ, ವಿಧಾನ ಮಂಡಲ ಅಧಿವೇಶನದಲ್ಲಿ ಕಾರ್ಯದರ್ಶಿ ಕುರ್ಚಿಯಲ್ಲೇ ಕೆಲಸ ಮಾಡುತ್ತೇನೆ ಎಂದು ಮೂರ್ತಿ ಹೇಳಿದ್ದಾರೆ.
ಹೀಗಾಗಿ,ಇದರಿಂದ ಸಂಘರ್ಷ ಉಂಟಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಕೆ.ಬಿ.ಕೋಳಿವಾಡ್ ಅವರು ಸ್ಪೀಕರ್ ಆಗಿದ್ದ ಅವಧಿಯಲ್ಲಿ ನೇಮಕಾತಿ ಸೇರಿದಂತೆ ವಿಧಾನಸಭೆ ಸಚಿವಾಲಯದಲ್ಲಿ ನಡೆದ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶಿಸಿರುವ ಸಭಾಧ್ಯಕ್ಷ ರಮೇಶ್ ಕುಮಾರ್, ಎಸ್.ಮೂರ್ತಿ ಅವರ ಅಧಿಕಾರಗಳನ್ನು ಮೊಟಕುಗೊಳಿಸಿದ್ದರು.ಈಗ ಅವರ ಹುದ್ದೆಯನ್ನೂ ಬದಲಾಯಿ
ಸದೇ ಬೇರೆಯವರಿಗೆ ಪ್ರಭಾರ ಜವಾಬ್ದಾರಿ ವಹಿಸಲಾಗಿದೆ.