Advertisement

ಸುಧಾಕರ್‌ ಕೈನಲ್ಲಿ ಒತ್ತೆ

02:43 AM Jul 11, 2019 | Sriram |

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಬುಧವಾರ ಅತ್ಯಂತ ನಾಟಕೀಯ ಪ್ರಸಂಗಗಳಿಗೆ ಕಾರಣವಾಯಿತು.ದೊಡ್ಡ ಹೈಡ್ರಾಮಾಗೆ ವಿಧಾನಸೌಧವೇ ವೇದಿಕೆ ಯಾಗಿದ್ದುದು ಮಾತ್ರ ವಿಪರ್ಯಾಸ.

Advertisement

ಡ್ರಾಮಾ ಶುರುವಾಗಿದ್ದು ಹೇಗೆ?: ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್‌ ಮತ್ತು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ವಿಧಾನಸೌಧಕ್ಕೆ ಆಗಮಿಸಿ, ಸ್ಪೀಕರ್‌ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದರು. ಇವರಿಬ್ಬರು ರಾಜೀನಾಮೆ ಸಲ್ಲಿಸಿದ ಸುದ್ದಿ ತಿಳಿದ ತಕ್ಷಣ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಸಚಿವ ಪ್ರಿಯಾಂಕ್‌ ಖರ್ಗೆ ವಿಧಾನಸೌಧಕ್ಕೆ ದೌಡಾಯಿಸಿದರು.

ಸಚಿವ ಎಂ.ಟಿ.ಬಿ. ನಾಗರಾಜ್‌ ರಾಜೀನಾಮೆ ಸಲ್ಲಿಸಿ ಇವರೆಲ್ಲರಿಂದ ತಪ್ಪಿಸಿಕೊಂಡು ರಾಜಭವನ ದತ್ತ ಹೋದರು. ಆದರೆ, ಡಾ.ಸುಧಾಕರ್‌ ರಾಜೀನಾಮೆ ಸಲ್ಲಿಸಿ ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಸ್ಪೀಕರ್‌ ಕಚೇರಿಯಿಂದ ಹೊರಗಡೆ ಹೋಗುತ್ತಿರುವ ಸಂದರ್ಭದಲ್ಲಿ ಪರಿಷತ್‌ ಸದಸ್ಯ ನಜೀರ್‌ ಅಹಮದ್‌, ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಡಾ. ಸುಧಾಕರ್‌ ಅವರನ್ನು ಕೊರಳಿಗೆ ಕೈ ಹಾಕಿ ಹಿಡಿದುಕೊಂಡು ಲಿಫ್ಟ್ ಮೂಲಕ ಮೂರನೇ ಮಹಡಿಯಲ್ಲಿರುವ
ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಅವರ ಕೊಠಡಿ ಕರೆದುಕೊಂಡು ಹೋಗಿ ಕೂಡಿ ಹಾಕಿದರು.

ನೂಕಾಟ, ತಳ್ಳಾಟ: ಈ ಸಂದರ್ಭದಲ್ಲಿ ಶಾಸಕ ಸುಧಾಕರ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ತಳ್ಳಾಟ ಉಂಟಾಯಿತು. ಡಾ. ಸುಧಾಕರ್‌ ಅವರನ್ನು ಕಾಂಗ್ರೆಸ್‌ ನಾಯಕರು ಕರೆದು ಕೊಂಡು ಹೋಗಿದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣ ಅಲ್ಲಿಯೇ ಸ್ಪೀಕರ್‌ ಕಚೇರಿಗೆ ಆಗಮಿಸಿದ್ದ ಬಿಜೆಪಿ ಶಾಸಕರಾದ ಬಸವರಾಜ್‌ ಬೊಮ್ಮಾಯಿ, ಜೆ.ಸಿ. ಮಾಧುಸ್ವಾಮಿ ಸ್ಪೀಕರ್‌ ರಮೇಶ್‌ ಕುಮಾರ್‌ಗೆ ಡಾ. ಸುಧಾಕರ್‌ ಮೇಲೆ ಹಲ್ಲೆ ನಡೆಸಲಾಗಿದೆ.

ವಿಧಾನಸೌಧದಲ್ಲಿ ಶಾಸಕರಿಗೆ ಭದ್ರತೆಯಿಲ್ಲ ಎಂದು ದೂರು ಸಲ್ಲಿಸಿದರು.ನಂತರ ವಿಧಾನಸೌಧದ ಮೂರನೇ ಮಹಡಿಗೆ ಬಿಜೆಪಿಯ ಶಾಸಕರು ಸುಧಾಕರ್‌ ಭೇಟಿಗೆ ತೆರಳಿದರು. ಅಷ್ಟರಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಅಲ್ಲಿಗೆ ಆಗಮಿಸಿದ್ದರು.

Advertisement

ಸುಧಾಕರ್‌ ಮನವೊಲಿಕೆ ಪ್ರಯತ್ನಿಸಿದರು. ಈ ಮದ್ಯೆ, ಪೊಲೀಸರು ಮೂರನೇ ಮಹಡಿಗೆ ಯಾರನ್ನೂ ಬಿಡುವುದಿಲ್ಲ ಎಂದು ಮೂರನೇ ಮಹಡಿಯ ಗೇಟ್‌ ಹಾಕಿ ದರು. ಈ ಸಂದರ್ಭದಲ್ಲಿ ಬಿಜೆಪಿ ಶಾಸಕ ಜೆ.ಸಿ. ಮಾಧುಸ್ವಾಮಿ ಹಾಗೂ ಪೊಲೀಸ್‌ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

ಜಾರ್ಜ್‌ ಕಚೇರಿ ಎದುರು ಪ್ರತಿಭಟನೆ
ಕೈಗಾರಿಕಾ ಸಚಿವ ಕೆ.ಜೆ. ಜಾರ್ಜ್‌ ಕಚೇರಿ ಎದುರು ಸುಧಾಕರ್‌ ಭೇಟಿಗೆ ಅವಕಾಶ ನೀಡುವಂತೆ ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಬಿಜೆಪಿಯ ಶಾಸಕರು ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಬಿಜೆಪಿ ಶಾಸಕರನ್ನು ಎಳೆದು ಹೊರ ನಡೆಯುವಂತೆ ತಳ್ಳಿದರು. ಇದರಿಂದ ಆಕ್ರೋಶಗೊಂಡ ಬಿಜೆಪಿ ಶಾಸಕ ಬಸವರಾಜ್‌ ಬೊಮ್ಮಾಯಿ ಜಾರ್ಜ್‌ ಕಚೇರಿಯ ಬಾಗಿಲಿಗೆ ಜೋರಾಗಿ ಗುದ್ದಿ ಕಾಲಿನಿಂದ ಒದ್ದರು. ಜತೆಗೆ ಮಾಜಿ ಸಚಿವ ರೇಣುಕಾಚಾರ್ಯ ಹಾಗೂ ಸಚಿವ ಯು.ಟಿ.ಖಾದರ್‌ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಅಲೋಕ್‌ಕುಮಾರ್‌ ಸೌಧಕ್ಕೆ ಆಗಮನ
ಡಾ.ಸುಧಾಕರ್‌ಗೆ ರಕ್ಷಣೆ ಒದಗಿಸಬೇಕು ಎಂದು ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಒತ್ತಾಯಿಸಿದರು. ವಿಧಾನಸೌಧದಲ್ಲಿನ ವಿಚಾರದ ಬಗ್ಗೆ ಮಾಹಿತಿ ಪಡೆದ ರಾಜ್ಯಪಾಲರು ನಗರ ಪೊಲೀಸ್‌ ಆಯುಕ್ತರಿಗೆ ಹತ್ತು ನಿಮಿಷದಲ್ಲಿ ಡಾ.ಕೆ.ಸುಧಾಕರ್‌ ಅವರನ್ನು ರಾಜಭವನಕ್ಕೆ ಕರೆತರುವಂತೆ ಸೂಚಿಸಿದರು. ಅದರಂತೆ ನಗರ ಪೊಲೀಸ್‌ ಆಯುಕ್ತ ಅಲೋಕ್‌ಕುಮಾರ್‌ ಅವರು ಪೊಲೀಸ್‌ ಪಡೆಯೊಂದಿಗೆ ಆಗಮಿಸಿ ಕರೆದೊಯ್ದರು.

Advertisement

Udayavani is now on Telegram. Click here to join our channel and stay updated with the latest news.

Next