Advertisement

Drugs: 15 ದಿನಗಳಲ್ಲಿ 5.4 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

11:13 AM Oct 28, 2023 | Team Udayavani |

ಬೆಂಗಳೂರು: ಮಾದಕ ದಂಧೆಯ ವಿರುದ್ಧ ಸಮರ ಮುಂದುವರಿಸಿರುವ ಬೆಂಗಳೂರು ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಕಳೆದ ಹದಿನೈದು ದಿನಗಳ ಅವಧಿಯಲ್ಲಿ ನಗರಾದ್ಯಂತ 10 ಜನ ದಂಧೆಕೋರರನ್ನ ಬಂಧಿಸಿ 5.04 ಕೋಟಿ ಮೌಲ್ಯದ ವಿವಿಧ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಕಾಡುಗೋಡಿ, ಕೆ.ಆರ್‌.ಪುರ, ಸೋಲದೇವನಹಳ್ಳಿ, ಎಚ್‌ಎಸ್‌ಆರ್‌ ಲೇಔಟ್‌, ವೈಟ್‌ ಫೀಲ್ಡ್‌ , ಬಾಣಸವಾಡಿ, ಪರಪ್ಪನ ಅಗ್ರಹಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. 8 ಜನ ವಿದೇಶಿ ಡ್ರಗ್‌ ಪೆಡ್ಲರ್‌ಗಳ ಸಹಿತ ಒಟ್ಟು 10 ಜನ ಡ್ರಗ್ಸ್‌ ದಂಧೆಕೋರು ಸೆರೆ ಸಿಕ್ಕಿದ್ದರು. ಬಂಧಿತರ ಬಳಿ 3.806 ಕೆ.ಜಿ ಎಂಡಿಎಂಎ ಕ್ರಿಸ್ಟಲ್ಸ್, 50 ಗ್ರಾಂ ಕೊಕೇನ್‌, 25 ಎಕ್ಸಟಿಸಿ ಪಿಲ್ಸ್, 50 ಎಲ್‌ ಎಸ್ಟಿ ಸ್ಟ್ರಿಪ್ಸ್‌ ಸೇರಿದಂತೆ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ‌

ಪೆಡ್ಲರ್‌ಗಳು ಕಡಿಮೆ ಬೆಲೆಗೆ ಡ್ರಗ್ಸ್‌ ಆಮದು ಮಾಡಿಕೊಂಡು ಅವುಗಳನ್ನು ಕಾಲೇಜು ವಿದ್ಯಾರ್ಥಿಗಳು, ಐಟಿ-ಬಿಟಿ ಕಂಪನಿಯ ಉದ್ಯೋಗಿಗಳು, ಪರಿಚಿತ ಗಿರಾಕಿಗಳಿಗೆ ಮಾರಾಟ ಮಾಡಿ ಹೆಚ್ಚು ದುಡ್ಡು ಸಂಪಾದಿಸುತ್ತಿದ್ದರು ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next