Advertisement

ಫೇಸ್‌ಆ್ಯಪ್‌ನಿಂದ ಗೌಪ್ಯತೆಗೆ ಚ್ಯುತಿ

11:53 PM Jul 18, 2019 | Team Udayavani |

ವಾಷಿಂಗ್ಟನ್‌: ರಷ್ಯಾ ಮೂಲದ ಫೇಸ್‌ಆ್ಯಪ್‌ ಕಳೆದ ಕೆಲವು ದಿನಗಳಿಂದ ವಿಶ್ವಾದ್ಯಂತ ವೈರಲ್ ಆಗಿದೆ. ಜನರು ಫೋಟೋಗಳನ್ನು ಈ ಆ್ಯಪ್‌ಗೆ ಹಾಕಿ ವಯಸ್ಸಾದ ಮೇಲೆ ತಾವು ಹೇಗೆ ಕಾಣಿಸುತ್ತಿದ್ದೇವೆ ಎಂಬುದನ್ನು ನೋಡಿಕೊಂಡು, ಅಂತಹ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಫೇಸ್‌ಆ್ಯಪ್‌ನಲ್ಲಿ ಈಗ ಡೇಟಾ ಗೌಪ್ಯತೆಯ ಬಗ್ಗೆ ಪ್ರಶ್ನೆಗಳೂ ಎದ್ದಿವೆ. ಈಗ ಅಮೆರಿಕದ ನ್ಯೂಯಾರ್ಕ್‌ ಡೆಮಾಕ್ರಾಟ್ ಸಂಸದ ಚಕ್‌ ಶುಮರ್‌ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಎಫ್ಬಿಐಗೆ ಮನವಿ ಮಾಡಿದ್ದಾರೆ.

Advertisement

ಜನರ ಫೋಟೋಗಳನ್ನು ಈ ಫೋಟೋ ಆ್ಯಪ್‌ ಕ್ಲೌಡ್‌ಗೆ ಅಪ್‌ಲೋಡ್‌ ಮಾಡುತ್ತಿದೆ ಮತ್ತು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವವರ ಸಂಪೂರ್ಣ ಫೋಟೋಗಳು ಮತ್ತು ಡೇಟಾವನ್ನು ಪಡೆದುಕೊಳ್ಳುತ್ತದೆ ಎಂಬ ವಿಚಾರ ಬಹಿರಂಗಗೊಳ್ಳುತ್ತಿದ್ದಂತೆ ಭಾರಿ ವಿವಾದವಾಗಿದೆ. 2017ರಲ್ಲೂ ಫೋಟೋದಲ್ಲಿ ಜನಾಂಗೀಯತೆಯನ್ನೇ ಬದಲಿಸುವ ಫಿಲ್ಟರ್‌ ಅಳವಡಿಸಿದ್ದಕ್ಕೆ ಫೇಸ್‌ಆ್ಯಪ್‌ ವಿರುದ್ಧ ಟೀಕೆ ವ್ಯಕ್ತವಾಗಿತ್ತು. ನಂತರ ಈ ಫಿಲ್ಟರ್‌ ಅನ್ನು ಕಂಪನಿ ಹಿಂಪಡೆದಿತ್ತು.

ಆದರೆ ಇತ್ತೀಚೆಗೆ ವಯಸ್ಸಿನ ಫಿಲ್ಟರ್‌ ಪರಿಚಯಿಸಿದ ನಂತರ ಮತ್ತೆ ಭಾರಿ ಜನಪ್ರಿಯವಾಗಿದೆ. ಈ ಫಿಲ್ಟರ್‌ ಅಳವಡಿಸಿದಾಗ ತಮ್ಮ ಸಾಧನದಲ್ಲೇ ಈ ಫೋಟೋಗಳು ಪ್ರೋಸೆಸ್‌ ಆಗುತ್ತವೆ ಎಂದು ಬಳಕೆದಾರರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಈ ಫೋಟೋ ಕ್ಲೌಡ್‌ಗೆ ಅಪ್‌ಲೋಡ್‌ ಆಗುತ್ತದೆ. ಹೀಗಾಗಿ ಇದು ಗೌಪ್ಯತೆ ಬಗ್ಗೆ ಆತಂಕವನ್ನು ಹುಟ್ಟುಹಾಕಿದೆ.

Advertisement

Udayavani is now on Telegram. Click here to join our channel and stay updated with the latest news.

Next