ಅಹ್ಮದಾಬಾದ್: ಗುಜರಾತ್‌ನ ಸೂರತ್‌ನಿಂದ ಬಿಲಿಮೋರಾಕ್ಕೆ ದೇಶದ ಮೊದಲ ಬುಲೆಟ್ ರೈಲು 2026ರಲ್ಲಿ ಸಂಚಾರ ನಡೆಸಲಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಸೂರತ್ ಜಿಲ್ಲೆಗಳಲ್ಲಿ ಬುಲೆಟ್ ರೈಲು ಯೋಜನೆಯ ಕಾಮಗಾರಿ ಪರಿಶೀಲಿಸಿದ ಅವರು ಈ ಮಾತನ್ನಾಡಿದ್ದಾರೆ.
ಯೋಜನೆಗೆ ಗುಜರಾತ್ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳಿಂದ ಒಟ್ಟು 1,396 ಹೆಕ್ಟೇರ್ ಜಾಗದ ಆವಶ್ಯಕತೆ ಇದೆ. ಅದರಲ್ಲಿ ಈಗಾಗಲೇ 1,260.76 ಹೆಕ್ಟೇರ್(ಶೇ.90.31) ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಗುಜರಾತ್‌ನಲ್ಲಿ ಶೇ.98.79 ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಹಾಗೂ ಮಹಾರಾಷ್ಟ್ರದಲ್ಲಿ ಶೇ.71.49 ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಕೊಟ್ಟಿದ್ದಾರೆ.