Advertisement

ವಿಶ್ವಾಸ, ಸಹಕಾರದಿಂದ ಯಶಸ್ಸು: ಲಲಿತಾ ಜಿ. ಮಲ್ಯ

12:10 PM Jun 02, 2019 | Team Udayavani |

ಮಹಾನಗರ: ಶಿಕ್ಷಣ ಎಂಬು ದೊಂದು ತಂಡ ಪ್ರಯತ್ನ. ಇಲ್ಲಿ ಹೆತ್ತವರು, ಶಿಕ್ಷಕ, ವಿದ್ಯಾರ್ಥಿ ಒಬ್ಬರಿಗೊಬ್ಬರು ಪರಸ್ಪರ ವಿಶ್ವಾಸ, ಸಹಕಾರದಿಂದ ಒಗ್ಗೂಡಿದರೆ ಮಾತ್ರ ವಿದ್ಯಾರ್ಥಿಯ ಜೀವನದಲ್ಲಿ ಯಶಸ್ಸು ಸಾಧ್ಯ ಎಂದು ಬೆಸೆಂಟ್ ಸಂಸ್ಥೆಗಳ ಶೈಕ್ಷಣಿಕ ಸಲಹಾಗಾರ್ತಿ, ಶಿಕ್ಷಣ ತಜ್ಞೆ ಲಲಿತಾ ಜಿ. ಮಲ್ಯ ಹೇಳಿದರು.


Advertisement

ನಗರದ ಬೆಸೆಂಟ್ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಅವರು ಗುರುವಾರ ಆಯೋಜಿಸಲಾದ ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ವಿದ್ಯಾರ್ಥಿ- ಹೆತ್ತವರಿಗಾಗಿ ಒಂದು ದಿನದ ಪುನಶ್ಚೇತನ ಕಾರ್ಯಾಗಾರದಲ್ಲಿ ಸಂಪ ನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ಮಕ್ಕಳಿಗೆ ಮಾದರಿಯಾಗಿ
ಹೆತ್ತವರು ಕೇವಲ ಶುಲ್ಕ ಸಂದಾಯ ಗಾರರಂತಿರದೆ ತಮ್ಮ ಮಕ್ಕಳಿಗೆ ತಾವೇ ಮಾದರಿಯಾಗಿರಬೇಕು. ತಮ್ಮ ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿ ಯಿಂದ ಶಿಕ್ಷಕ ರೊಂದಿಗೆ ನಿರಂತರ ವಿಚಾರ ವಿನಿಮಯ ಮಾಡುತ್ತಿರಬೇಕು. ಆಗಲೇ ಕಲಿಯುವಿಕೆ ಎಂಬುದು ಪುರಸ್ಕಾರದಂತಾಗುತ್ತದೆ ಎಂದರು.

ಪ್ರಾಂಶುಪಾಲ ಡಾ| ನಾಯಕ್‌ ರೂಪಸಿಂಗ್‌ ಜಿ. ಪ್ರಾಸ್ತಾವಿಕ ಮಾತನಾಡಿ, ಕಾಲೇಜಿನ ನೀತಿಸಂಹಿತೆಯನ್ನು ವಾಚಿಸಿದರು. ಈ ಸಂದರ್ಭ ಕಳೆದ ಸಾಲಿ ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಕಲಾ ವಿಭಾಗದಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾದ ಜೋಶಿ ದಿವ್ಯ ತನ್ನ ಅನಿಸಿಕೆಯನ್ನು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿ ವಿಮೆನ್ಸ್‌ ನ್ಯಾಷನಲ್ ಎಜುಕೇಶನ್‌ ಸೊಸೈಟಿ ಉಪಾಧ್ಯಕ್ಷ ಅಣ್ಣಪ್ಪ ನಾಯಕ್‌, ಸದಸ್ಯರಾದ ಶ್ಯಾಮಸುಂದರ್‌ ಕಾಮತ್‌, ಬೆಳ್ತಂಗಡಿ ಗಣೇಶ್‌ ಕೃಷ್ಣ ಭಟ್ ಉಪಸ್ಥಿತರಿದ್ದರು.

Advertisement

ಪ್ರಥಮ ಪಿಯುಸಿಯ ವಿದ್ಯಾರ್ಥಿ-ಹೆತ್ತವರಿಗಾಗಿ ನಡೆದ ಕಾರ್ಯಕ್ರಮವನ್ನು ಸಮಾಜಶಾಸ್ತ್ರ ಉಪನ್ಯಾಸಕಿ ಹರಿಣಿ ಜೆ. ನಿರ್ವಹಿಸಿ, ಇತಿಹಾಸ ಉಪನ್ಯಾಸಕಿ ಗಾಯತ್ರಿ ಶೆಟ್ಟಿ ವಂದಿಸಿದರು. ಮಧ್ಯಾಹ್ನ ಬಳಿಕದ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕಿ ಸುಶೀಲಾ ಬಿ. ನಿರ್ವಹಿಸಿ, ಇತಿಹಾಸ ಉಪನ್ಯಾಸಕ ರೂಪಾಕ್ಷ ಎಂ. ವಂದಿಸಿದರು.

ಆಡಳಿತ ಮಂಡಳಿಯ ಕಾರ್ಯ ದರ್ಶಿ ದೇವಾನಂದ ಪೈ ಮಾತನಾಡಿ, ಹದಿಹರೆಯದ ಮಕ್ಕಳ ಲಾಲನೆ ಪಾಲನೆಯಲ್ಲಿ ಹೆತ್ತವರು ತಮ್ಮ ಸಮಯ ಮೀಸಲಿಡಬೇಕು. ದ್ವಿತೀಯ ಪಿಯುಸಿ ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಕಾಲಘಟ್ಟ ಹಾಗೂ ನಿರ್ಣಾಯಕಹಂತವಾಗಿದ್ದು ಓದಿನೊಂದಿಗೆ ಶಿಸ್ತನ್ನು ಮೈಗೂಡಿಸಿಕೊಳ್ಳಿ ಎಂದರು.

ಶಿಸ್ತು ಮೈಗೂಡಿಸಿಕೊಳ್ಳಿ
ಆಡಳಿತ ಮಂಡಳಿಯ ಕಾರ್ಯ ದರ್ಶಿ ದೇವಾನಂದ ಪೈ ಮಾತನಾಡಿ, ಹದಿಹರೆಯದ ಮಕ್ಕಳ ಲಾಲನೆ ಪಾಲನೆಯಲ್ಲಿ ಹೆತ್ತವರು ತಮ್ಮ ಸಮಯ ಮೀಸಲಿಡಬೇಕು. ದ್ವಿತೀಯ ಪಿಯುಸಿ ಎಂಬುದು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಕಾಲಘಟ್ಟ ಹಾಗೂ ನಿರ್ಣಾಯಕಹಂತವಾಗಿದ್ದು ಓದಿನೊಂದಿಗೆ ಶಿಸ್ತನ್ನು ಮೈಗೂಡಿಸಿಕೊಳ್ಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next