Advertisement

30ರಿಂದ ವಿಶ್ವಾಸ ಕಿರಣ

11:13 PM Sep 22, 2019 | Lakshmi GovindaRaju |

ಬೆಂಗಳೂರು: ದ್ವಿತೀಯ ಪಿಯುದಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿ ಗಳಿಗೆ ಎಸ್‌ಸಿಪಿ-ಟಿಎಸ್‌ಪಿ ಯೋಜನೆಯ ವಿಶ್ವಾಸಕಿರಣ ಕಾರ್ಯಕ್ರಮದಡಿ ಇಂಗ್ಲಿಷ್‌ ಭಾಷೆಯ ವಿಶೇಷ ಬೋಧನೆ ಸೆ.30ರಿಂದ ಅ.12ರ ತನಕ ನಡೆಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿದೆ.

Advertisement

ರಾಜ್ಯದ 411 ಸರ್ಕಾರಿ ಪಿಯು ಕಾಲೇಜಿ ನಲ್ಲಿ ದ್ವಿತೀಯ ಪಿಯುನಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗದ ವಿದ್ಯಾರ್ಥಿಗಳಿಗೆ 9 ದಿನಗಳ ಇಂಗ್ಲಿಷ್‌ ಬೋಧನೆಯ ವಿಶೇಷ ತರಗತಿ ಇರಲಿದೆ. ಕಾಲೇಜುಗಳೇ ತರಬೇತಿ ಕೇಂದ್ರವಾಗಿರಲಿದೆ. ಜಿಲ್ಲಾ ಉಪನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇದರ ಉಸ್ತುವಾರಿ ವಹಿಸಿರುತ್ತಾರೆ.

ಪ್ರತಿ ಕಾಲೇಜಿಗೂ ಒಬ್ಬ ಹಿರಿಯ ಆಂಗ್ಲ ಉಪನ್ಯಾಸಕ ಅಥವಾ ಪ್ರಾಂಶುಪಾಲರನ್ನು ಸಂಯೋಜಿಸಲಾಗುತ್ತದೆ. ದಿನಕ್ಕೆ 3 ತರಗತಿಗಳು 90 ನಿಮಿಷದ ಕಾಲಮಿತಿಯಲ್ಲಿ ನಡೆಯಲಿದೆ. ವಿಶೇಷ ತರಗತಿಯ ಅಂತ್ಯದ ದಿನದಲ್ಲಿ 100 ಅಂಕಗಳಿಗೆ ಪರೀಕ್ಷೆ ನಡೆಸಿ, ಫ‌ಲಿತಾಂಶವನ್ನು ಕ್ರೋಢೀಕರಿಸಿ ಇಡಲಾಗುತ್ತದೆ ಎಂದು ಇಲಾಖೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next