Advertisement

ಸೈನಿಕರು ನನ್ನನ್ನು ಕೊಲ್ಲದೆ ಜೀವದಾನ ನೀಡಿದರು;ಉಗ್ರನಿಗೆ ಪಾಪಪ್ರಜ್ಞೆ

10:50 AM May 10, 2018 | |

ಶ್ರೀನಗರ : ಬಾರಾಮುಲ್ಲಾದಲ್ಲಿ ಸೇನಾಪಡೆಗಳಿಂದ ಬಂಧನಕ್ಕೊಳಗಾದ ಲಷ್ಕರ್‌ -ಇ-ತೊಯ್ಬಾ ಉಗ್ರ  ಐಜಾಜ್‌ ಗುಜ್ರಿಗೆ ಪಾಪ ಪ್ರಜ್ಞೆ ಕಾಡಿದ್ದು, ‘ಉಗ್ರವಾದಕ್ಕಿಳಿದಿರುವ ಇತರ ಯುವಕರು ಮನೆಗಳಿಗೆ ಮರಳಿ’ ಎಂದು ಮನವಿ ಮಾಡಿಕೊಂಡಿದ್ದಾನೆ. 

Advertisement

ಸೈನಿಕರರ ಸಮಕ್ಷಮದಲ್ಲಿ ಚಿತ್ರೀಕರಿಸಲಾಗಿರುವ ವಿಡಿಯೋದಲ್ಲಿ  ಉಗ್ರ ಗುಜ್ರಿಗೆ ಪಾಪ ಪ್ರಜ್ಞೆ ಕಾಡಿದ್ದು, ‘ಸೈನಿಕರು ನನ್ನನ್ನು ಕೊಂದು ಬಿಡಬಹುದಿತ್ತು ,ಆದರೆ ಅವರು ಹಾಗೆ ಮಾಡದೆ, ನನಗೆ ಜೀವದಾನ ನೀಡಿದರು.ಯಾರೆಲ್ಲಾ ತಪ್ಪು ದಾರಿಯಲ್ಲಿದ್ದೀರಿ, ಅವರೆಲ್ಲಾ  ಶಸ್ತ್ರಗಳನ್ನು ಬಿಟ್ಟು ಮನೆಗಳಿಗೆ ಮರಳಿ ಕುಟುಂಬ ಸದಸ್ಯರೊಂದಿಗೆ ಸೇರಿಕೊಳ್ಳಿ’ ಎಂದು ಮನವಿ ಮಾಡಿದ್ದಾನೆ. 

ಇನ್ನೋರ್ವ ಉಗ್ರ ನಾಸೀರ್‌ ಅಮಿನ್‌ ನನ್ನು ಉದ್ದೇಶಿಸಿ ಮಾತನಾಡಿದ ಗುಜ್ರಿ ‘ನಿನ್ನ ತಾಯಿ ತೀವ್ರ ಅನಾರೋಗ್ಯಕ್ಕೀಡಾಗಿದ್ದು ಮನೆಗೆ ಮರಳಿ ಅವರ ಆರೈಕೆ ಮಾಡು’ ಎಂದು ಕೇಳಿಕೊಂಡಿದ್ದಾನೆ. 

‘ನಾವು ಪೊದೆಗಳಲ್ಲಿ ಅಡಗಿ ಸೈನಿಕರತ್ತ ಗುಂಡು ಹಾರಿಸಿದೆವು. ಆದರೆ ಅವರು ಪ್ರತಿದಾಳಿ ಮಾಡದೆ ನನ್ನನ್ನು ಬಂಧಿಸಿ ಜೀವ ಉಳಿಸಿದರು’ ಎಂದಿದ್ದಾನೆ. 

ಎಪ್ರಿಲ್‌ 30 ರಂದು ಗುಜ್ರಿಯನ್ನು ಸೇನಾಪಡೆಗಳು ವಶಕ್ಕೆ ಪಡೆದಿದ್ದವು. 

Advertisement
Advertisement

Udayavani is now on Telegram. Click here to join our channel and stay updated with the latest news.

Next