Advertisement

ಕನ್ಫೆಷನ್‌ ವ್ಯವಸ್ಥೆ ರದ್ದು ಮಾಡಿ

06:00 AM Jul 28, 2018 | Team Udayavani |

ಹೊಸದಿಲ್ಲಿ: ಚರ್ಚ್‌ಗಳಲ್ಲಿ ನಡೆಸುವ ತಪ್ಪೊಪ್ಪಿಗೆ ಹೇಳಿಕೆ (ಕನ್ಫೆಷನಲ್‌ ಸ್ಟೇಟ್‌ಮೆಂಟ್‌) ವ್ಯವಸ್ಥೆ ರದ್ದು ಮಾಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲ್ಯೂ) ಶಿಫಾರಸು ಮಾಡಿದೆ. ಕೇರಳದಲ್ಲಿ ಇತ್ತೀಚೆಗೆ ಬಹಿರಂಗಗೊಂಡ ಎರಡು ಲೈಂಗಿಕ ಕಿರುಕುಳ ಪ್ರಕರಣಗಳ ಬಗ್ಗೆ ತನಿಖೆ ನಡೆಸಿರುವ ಆಯೋಗವು ಕೇಂದ್ರ ಸರಕಾರಕ್ಕೆ ಇಂಥ ಸಲಹೆ ನೀಡಿದೆ. 

Advertisement

ಎನ್‌ಸಿಡಬ್ಲ್ಯೂ ಅಧ್ಯಕ್ಷೆ ರೇಖಾ ಶರ್ಮಾ ಮಾತನಾಡಿ, ಮಹಿಳೆಯರ ಸುರಕ್ಷತೆ ದೃಷ್ಟಿ ಯಿಂದ ಈ ಕ್ರಮ ಅಗತ್ಯ. ಚರ್ಚ್‌ಗಳಲ್ಲಿನ ಈ ವ್ಯವಸ್ಥೆಯನ್ನು ಧರ್ಮಗುರುಗಳು ದುರುಪಯೋಗ ಮಾಡುತ್ತಿದ್ದಾರೆ ಎಂದು ಹೇಳಿದ್ದಾಗಿ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಆಯೋಗದ ಶಿಫಾರಸಿಗೆ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಕ್ಯಾಥಲಿಕ್‌ ಬಿಷಪ್ಸ್‌ ಕೌನ್ಸಿಲ್‌ ಅಧ್ಯಕ್ಷರಾದ ಆರ್ಚ್‌ಬಿಷಪ್‌ ಸೂಸಾ ಪಕಿಯಾಂ, “ಇದೊಂದು ಹಿಡನ್‌ ಅಜೆಂಡಾ. ತಪ್ಪೊಪ್ಪಿಗೆ ಎನ್ನುವುದು ಧರ್ಮದ ಅವಿಭಾಜ್ಯ ಅಂಗ. ಆಯೋಗವು ತನ್ನ ವ್ಯಾಪ್ತಿ ಮೀರಿ ಸಲಹೆ ನೀಡಿದೆ. ಈ ಕುರಿತು ನಾವು ಪ್ರಧಾನಿ ಮೋದಿ ಅವರಿಗೆ ಮನವಿಯೊಂದನ್ನು ಸಲ್ಲಿಸಿದ್ದೇವೆ’ ಎಂದಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next