Advertisement

ಸ್ತ್ರೀರೋಗ, ಪ್ರಸೂತಿ ತಜ್ಞರ ಸಮ್ಮೇಳನ

12:13 PM Dec 20, 2018 | Team Udayavani |

ಬೆಂಗಳೂರು: ಆರೋಗ್ಯಸೇವಾ ವೃತ್ತಿಪರರು ಹಾಗೂ ಸೇವೆ ಬಯಸುವವರ ಮನಸ್ಥಿತಿಯಲ್ಲಿ ಬದಲಾವಣೆ ತರುವುದು ತುರ್ತು ಅಗತ್ಯವಾಗಿದ್ದು, ಸಾಮಾಜಿಕ ಸಂಕೀರ್ಣತೆಗಳು, ಆರ್ಥಿಕ ಅಡೆತಡೆಗಳು, ಮನಸ್ಥಿತಿ ಮತ್ತು ಆರೋಗ್ಯಸೇವೆಯ ಲಭ್ಯತೆಯ ಕಷ್ಟಗಳನ್ನು ಆರೋಗ್ಯಪೂರ್ಣವಾಗಿ ಪರಿವರ್ತಿಸುವ ಕಾರ್ಯವಾಗಬೇಕಿದೆ ಎಂದು 62ನೇ ಅಖೀಲ ಭಾರತ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರ ಸಮ್ಮೇಳನದ (ಎಐಸಿಒಜಿ 2019)ಸಂಘಟನಾ ಅಧ್ಯಕ್ಷೆ ಡಾ. ಹೇಮಾದಿವಾಕರ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ದಿ ಫೆಡರೇಷನ್‌ ಆಫ್ ಅಬ್‌ಸ್ಟೆಟ್ರಿಕಲ್‌ ಅಂಡ್‌ ಗೈನಕಾಲಜಿಕಲ್‌ ಸೊಸೈಟೀಸ್‌ ಆಫ್ ಇಂಡಿಯಾ(ಫೊಗ್ಸಿ) ಹಾಗೂ ಬೆಂಗಳೂರು ಸೊಸೈಟಿ ಆಫ್ ಅಬ್‌ಸ್ಟೆಟ್ರಿಕ್ಸ್‌ ಅಂಡ್‌ ಗೈನಕಾಲಜಿ(ಬಿಎಸ್‌ಒಜಿ)ವತಿಯಿಂದ ನಡೆದ ಸಮ್ಮೇಳನದ ಯಶಸ್ಸಿನ ಕುರಿತು ಮಾತನಾಡಿದ ಅವರು, “ಮಹಿಳೆಯರ ಆರೋಗ್ಯ ರಾಷ್ಟ್ರದ ಆರೋಗ್ಯ’ ಘೋಷ ವಾಕ್ಯದ ಅಡಿಯಲ್ಲಿ ನಡೆದ ಸಮ್ಮೇಳನ ಸಮಾಜದಲ್ಲಿ ಆರೋಗ್ಯಕರ ಮಹಿಳೆಯರ ಪಾತ್ರವನ್ನು ಬಿಂಬಿಸಿಸುತ್ತಿದೆ ಎಂದಿದ್ದಾರೆ. 

ಫೊಗ್ಸಿ ಅಧ್ಯಕ್ಷ ಡಾ.ಜೈದೀಪ್‌ ಮಲ್ಹೋತ್ರಾ ಮಾತನಾಡಿ, ಪ್ರಸ್ತುತ ಆರೋಗ್ಯ ಮತ್ತು ದೋಷರಹಿತ ಮಾತೃ ಹಾಗೂ ಮಗುವಿನ ಆರೋಗ್ಯಸೇವೆಯ ಅವಕಾಶಗಳು ಹಾಗೂ ಸವಾಲುಗಳನ್ನು ಎದುರಿಸುವ ಸಲುವಾಗಿ ಹೆಚ್ಚು ವೃತ್ತಿಪರತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಮ್ಮೇಳನದ ಅಂಗವಾಗಿ ಡಿ.15ರಂದು ಫ್ರೀಡಂಪಾರ್ಕ್‌ವರೆಗೆ ನಡೆದ ವಾಕಥಾನ್‌ನಲ್ಲಿ ನೂರಾರು ವೈದ್ಯರು ಹಾಗೂ ಪ್ರಸೂತಿ ತಜ್ಞರು ಪಾಲ್ಗೊಂಡಿದ್ದರು. ಮಲ್ಲೇಶ್ವರಂ ಶಾಸಕ ಅಶ್ವತ್ಥ ನಾರಾಯಣ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ನಿರ್ದೇಶಕ ಎ.ಪಿ.ಅರ್ಜುನ್‌, ನಟ ವಿರಾಟ್‌ ವಾಕಥಾನ್‌ಲ್ಲಿ ಭಾಗವಹಿಸಿ ಸಾಥ್‌ ನೀಡಿದ್ದು ವಿಶೇಷವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next