Advertisement
ಸ್ವಾಗತ ಭಾಷಣಕ್ಕೆ ನಾನು ಮತ್ತು ಮೇಷ್ಟ್ರ ಬಗ್ಗೆ ಮಾತನಾಡಲು ನನ್ನ ವೈರಿ (!) ಹರಿಗೆ ಹೇಳಿದರು. ನನಗೆ ಮಾತ್ರವಲ್ಲ , ಇಡೀ ಹುಡುಗಿಯರ ಗುಂಪಿಗೇ ನಿಜವಾಗಿಯೂ ಬೇಸರವಾಗಿತ್ತು. ಪ್ರತೀ ಬಾರಿ ಮೊದಲ ಸ್ಥಾನಕ್ಕೆ ನಮ್ಮಿಬ್ಬರಿಗೆ ಜೋರು ಪೈಪೋಟಿ. ಹೀಗಿರುವಾಗ ಆತನಿಗೆ ಮೇಷ್ಟ್ರ ಬಗ್ಗೆ ಹೊಗಳುವ ಅವಕಾಶ ಸಿಕ್ಕು ನಾನು ಬರೀ ಸ್ವಾಗತ ಕೋರುವುದೆಂದರೆ? ನಾನು ಎಂದರೆ ಹುಡುಗಿಯರ ಪ್ರತಿನಿಧಿ, ಆತ ಹುಡುಗರ ಲೀಡರ್! ಹಾಗಾಗಿ, ಇದು ಇಡೀ ಹುಡುಗಿಯರಿಗೆ ಆದ ಅನ್ಯಾಯ ಎಂದು ನಮ್ಮ ಮನಸ್ಸಿನಲ್ಲಿತ್ತು. ಈ ಟೀಚರ್, ಹುಡುಗರಿಗೆ ಪಾರ್ಷಿಯಾಲಿಟಿ ಮಾಡ್ತಾರೆ ಎಂದು ಒಳಗೊಳಗೇ ಗೊಣಗಾಟವೂ ನಡೆಯಿತು. ಸ್ವಲ್ಪ ಪ್ರೋತ್ಸಾಹ ಸಿಕ್ಕಿದ್ದರೆ ದೊಡ್ಡ ಹೋರಾಟವನ್ನೇ ನಡೆಸುತ್ತಿ¨ªೆವೇನೋ ಗೊತ್ತಿಲ್ಲ. ಅಂತೂ ಸ್ವಾಗತ ಭಾಷಣಕ್ಕೆ ಭರ್ಜರಿ ತಯಾರಿ ನಡೆಯಿತು.
Related Articles
Advertisement
ವೇದಿಕೆಯಲ್ಲಿದ್ದವರು ಕೇವಲ ಸ್ವಾಗತ ಭಾಷಣದÇÉೇ ಇಷ್ಟು ಶಬ್ದಸಾಮರ್ಥ್ಯ, ಅಭಿನಯ ಚಾತುರ್ಯ ತೋರಿದ ನನ್ನನ್ನು ಕಂಡು ಬೆರಗಾಗಿಬಿಟ್ಟಿದ್ದರು! ಕನ್ನಡ ಕಲಿಸಿದ್ದ ಮೇಷ್ಟ್ರೇ ಬೆರಗಾಗಿ ತೆರೆದ ಬಾಯಿ ಮುಚ್ಚಲಿಲ್ಲ. ಆಯಮ್ಮ ತನ್ನ ಹೆಸರು ಮೈಕಿನಲ್ಲಿ ಕೇಳಿ ಆನಂದಭಾಷ್ಪ ಸುರಿಸುತ್ತಿದ್ದರೆ, ಯಾವಾಗಲೂ ನಿದ್ರಿಸುತ್ತಿದ್ದ ವಾಚ್‌ಮನ್ ಕುರ್ಚಿಯಿಂದ ನಿಂತೇಬಿಟ್ಟಿದ್ದ. ಇನ್ನೇನು ಬೇಕು, ನಮ್ಮ ಜಯಕ್ಕೆ ಸಾಕ್ಷಿ? ಹುಡುಗರ ಗುಂಪಿನತ್ತ ಕಿರುನಗೆ ಬೀರುತ್ತ ಕೆಳಗೆ ಬಂದು ಕುಳಿತಿ¨ªಾಯ್ತು.
ಅದಾದ ಮೇಲೆ ಏನೇನೋ ಕಾರ್ಯಕ್ರಮ, ಭಾಷಣ ಎಲ್ಲವೂ ನಡೆದರೂ ನಾವೆಲ್ಲರೂ ಕಾಯುತ್ತಿದ್ದದ್ದು ಮೇಷ್ಟ್ರ ಸನ್ಮಾನಕ್ಕಾಗಿ; ಅಥವಾ ಹರಿ ಮಾಡಬೇಕಾಗಿದ್ದ ಅಭಿನಂದನಾ ಭಾಷಣಕ್ಕಾಗಿ. ಮೊದಲು ಶಿಕ್ಷಕರು ಮೇಷ್ಟ್ರ ಬಗ್ಗೆ ಓದಿ ಅವರ ಸಾಧನೆ ಎÇÉಾ ತಿಳಿಸಿದರು. ವೇದಿಕೆಯಲ್ಲಿದ್ದವರ ಕಣ್ಣು ತುಂಬಿಬಂದಿತ್ತು, ನಾವೂ ಹನಿಗಣ್ಣಾಗಿ¨ªೆವು. ಕಡೆಯಲ್ಲಿ ಮೇಷ್ಟ್ರಿಗೆ ಪ್ರಿಯವಾದ ನಾಲ್ಕನೇ ತರಗತಿ ಮಕ್ಕಳಿಂದ ಒಂದೆರಡು ಮಾತು ಎಂದಿದ್ದೇ ಹರಿ ಎದ್ದು ನಿಂತ. ನಮಗೋ ಆತನಾಡುವ ಮಾತು ಕೇಳಲು ಎಲ್ಲಿಲ್ಲದ ಕುತೂಹಲ. ಈ ಹರಿ ಅದೆಲ್ಲಿಂದ ಸಂಗ್ರಹಿಸಿದ್ದನೋ ಗೊತ್ತಿಲ್ಲ, ಮೇಷ್ಟ್ರು ಹುಟ್ಟಿದ ಆಸ್ಪತ್ರೆಯಿಂದ ಶುರು ಮಾಡಿ ಎರಡು ಬಾರಿ ಪಿಯುಸಿ ಫೇಲಾಗಿದ್ದದ್ದನ್ನೂ ಹೆಮ್ಮೆಯಿಂದ ವಿವರಿಸಿದ.
ಸೆಖೆ ಹೆಚ್ಚಾಗಿಯೋ ಏನೋ ಮೇಷ್ಟ್ರು ಬೆವರು ಒರೆಸಿಕೊಂಡರು. ನಮಗೆ ನಿಜವಾಗಿಯೂ ಇಷ್ಟೆÇÉಾ ವಿವರವಾಗಿ ಮಾಹಿತಿ ಕಲೆಹಾಕಿದ ಹುಡುಗರ ಬಗ್ಗೆ ಹೆಮ್ಮೆ ಮೂಡಿತು. ಏನಾದರಾಗಲಿ ನಮ್ಮ ಸಹಪಾಠಿಗಳೇ ತಾನೆ? ಅಲ್ಲದೇ ಹತ್ತಾರು ಬಾರಿ ಇಂಥ ಒಳ್ಳೆಯ ಮೇಷ್ಟ್ರು ಎÇÉಾ ಬಿಟ್ಟು ಹೋಗೇ ಬಿಡುತ್ತಾರೆ, ನಮಗೆ ಇನ್ನೆಂದೂ ನೋಡಲೂ ಸಿಗುವುದಿಲ್ಲ ಎಂಬುದನ್ನು ನೆನೆದರೇ ಬಹಳ ದುಃಖವಾಗುತ್ತದೆ ಎಂದು ಒತ್ತಿ ಒತ್ತಿ ಹೇಳಿದ ರೀತಿಗೆ ನಮಗೆ ಒಂಥರಾ ಬೇಸರವಾಗಿತ್ತು. ಹೆಡ್ ಮೇಡಂ ಕಣ್ಣÇÉೇ “ಸಾಕು’ ಎಂದು ಸನ್ನೆ ಮಾಡಿದರೂ ಭಾವಾವೇಶಕ್ಕೆ ಒಳಗಾಗಿದ್ದ ಹರಿ ಅದನ್ನೆಲ್ಲ ಲೆಕ್ಕಿಸುವ ಸ್ಥಿತಿಯಲ್ಲಿರಲಿಲ್ಲ. ಅಂತೂ ಕಡೆಯ ಹಂತಕ್ಕೆ ಬಂದಾಗ ಬಿಕ್ಕಿದ ದನಿಯಲ್ಲಿ , “ಈ ಶತಮಾನ ಕಂಡ ಅತ್ಯುತ್ತಮ ಮೇಷ್ಟ್ರಾದ ಇವರಿಗೆ ದೊಡ್ಡ ದೊಡ್ಡ ಪ್ರಶಸ್ತಿ ಸಿಗಲಿ, ಬಹಳ ಬೇಗ ಅವರು ಕೀರ್ತಿಶೇಷರಾಗಲಿ ಎಂದು ದೇವರಲ್ಲಿ ಮನಸಾರೆ ಪ್ರಾರ್ಥಿಸುತ್ತೇವೆ’ ಎಂದಾಗ ಮಕ್ಕಳಾದ ನಾವೆÇÉಾ ಕಣ್ಣೊರೆಸಿಕೊಳ್ಳುತ್ತಲೇ ಎರಡು ನಿಮಿಷ ಜೋರಾಗಿ ಚಪ್ಪಾಳೆ ತಟ್ಟಿಬಿಟ್ಟೆವು. ಅದ್ಯಾಕೋ ವೇದಿಕೆಯಲ್ಲಿದ್ದವರು ಕಕ್ಕಾಬಿಕ್ಕಿಯಾದರೆ ಮೇಷ್ಟ್ರು ಮಾತ್ರ ಅಳುವವರಂತೆ ಕಂಡರು. ಅಂತೂ ಸನ್ಮಾನ ಸಮಾರಂಭ ಬಹಳ ಚೆನ್ನಾಗಿ ಮುಗಿಯಿತು. ನಾವೆÇÉಾ ವೈರತ್ವ ಮರೆತು, ಸೊಗಸಾದ ಭಾಷಣ ಮಾಡಿದ ಹರಿಯನ್ನು ಅಭಿನಂದಿಸುತ್ತ ನಿಂತಿ¨ªೆವು. ಹೆಡ್ ಮೇಡಂ ಯಾಕೋ ಮುಖ ಊದಿಸಿಕೊಂಡು ನಮ್ಮ ಟೀಚರ್ ಮೇಲೆ ರೇಗಾಡುತ್ತ ಸರಸರ ನಡೆದೇಬಿಟ್ಟರು.
ಕನ್ನಡ ಮೇಷ್ಟ್ರು ನಮ್ಮ ಹತ್ತಿರ ಬಂದು, “ಏನಪ್ಪಾ ಹರಿ, ನನ್ನ ಮೇಲೇಕೆ ಅಷ್ಟು ಸಿಟ್ಟು?’ ಅಂದರು. ನಮಗೋ ಎಲ್ಲಿಲ್ಲದ ಆಶ್ಚರ್ಯ. ಹರಿ ಏನೂ ಮಾತನಾಡದೇ ನಿಂತ. ಅವರೇ ಮಾತು ಮುಂದುವರಿಸಿ, “ಅಂದ ಹಾಗೆ ನನಗೆ ಏನೋ ಪ್ರಶಸ್ತಿ ಸಿಗಲಿ ಎಂದು ಹಾರೈಸಿದೆಯಲ್ಲ, ಯಾರು ಹಾಗೆ ಹೇಳಿಕೊಟ್ಟರು?’ ಎಂದರು. ಹರಿ ಕೂಡಲೇ, “ನಾನೇ ಬರೆದಿದ್ದು ಸರ್! ಲೈಬ್ರರಿಯಲ್ಲಿ ಇರುವ ಪುಸ್ತಕದಲ್ಲಿ ವೀಣೆ ಶೇಷಣ್ಣ, ಪಿಟೀಲು ಚೌಡಯ್ಯ ಮುಂತಾದವರ ಹೆಸರಿನ ಮುಂದೆ ಕೀರ್ತಿಶೇಷ ಇದೆಯಲ್ಲ. ಅಂಥವರಿಗೆ ಸಂದ ಪ್ರಶಸ್ತಿ ನಿಮಗೂ ಸಿಗಲಿ’ ಎಂದು ನಾನೇ ಸೇರಿಸಿದೆ. “ನಿಮ್ಮ ಹೆಸರಿನ ಜತೆ ಚೆನ್ನಾಗಿ ಹೊಂದಿಕೊಳ್ಳುತ್ತೆ ಸರ್’ ಎಂದ. ಮೇಷ್ಟ್ರು ಶಿಷ್ಯನಿಂದ ಇಂಥ ಮಾತು ಕೇಳಿ, “ನನ್ನ ಜೀವನ ಪಾವನವಾಯಿತು. ಕನ್ನಡ ಕಲಿಸಿದ್ದಕ್ಕೂ ಸಾರ್ಥಕ. ಅಂದ ಹಾಗೆ ಅದರ ಅರ್ಥ ಗೊತ್ತೇ?’ ಎಂದು ಕೇಳಿದರು. ಖುಷಿಯಿಂದ ಹಿಗ್ಗಿ ಹೀರೆಕಾಯಿಯಾಗಿದ್ದ ಹರಿ, “ಇಲ್ಲ’ ಎಂದು ತಲೆ ಆಡಿಸಿದ. ಮೇಷ್ಟ್ರು ನಿಧಾನವಾಗಿ, “ಕೀರ್ತಿಶೇಷ ಎಂದರೆ ಕೀರ್ತಿಯನ್ನು ಮಾತ್ರ ಉಳಿಸಿ ಹೋದವರು ಎಂದರ್ಥ. ಸತ್ತು ಹೋದವರಿಗೆ ಬಳಸುವ ಶಬ್ದ ಅದು. ಅಂತೂ ಸನ್ಮಾನ ಮಾಡಿ, ನಾನು ಬೇಗ ಸಾಯಲಿ ಎಂದು ವೇದಿಕೆಯÇÉೇ ಹಾರೈಸಿದೆ, ಅದಕ್ಕೆ ನೀವೆಲ್ಲ ಚಪ್ಪಾಳೆ ಹೊಡೆದಿರಿ. ಸರಿಹೋಯ್ತು’ ಎಂದರು. ಪಾಪ ಹರಿ ಪೆಚ್ಚಾಗಿದ್ದ , ನಾವೂ ಏನು ಮಾಡಬೇಕೆಂದು ತಿಳಿಯದೇ ಸುಮ್ಮನಾದೆವು. ಕಡೆಗೆ ಮೇಷ್ಟ್ರೇ, “ಹೋಗಲಿ ಬಿಡು, ಹಾಗೆ ಹಾರೈಸಿದರೆ ಆಯುಷ್ಯ ಹೆಚ್ಚಾಗುತ್ತೆ ಅಂದುಕೊಳ್ತೀನಿ. ಚೆನ್ನಾಗಿ ಓದಿ ಜಾಣರಾಗಿ. ಇನ್ನು ಮುಂದೆ ಮಾತನಾಡುವಾಗ ಎಲ್ಲಿಂದ ಆರಿಸಿದರೂ ಪ್ರತೀ ಶಬ್ದದ ಅರ್ಥ ತಿಳಿದು ಮಾತನಾಡಿ’ ಎಂದು ಸಮಾಧಾನ ಮಾಡಿದರು. ಅಂತೂ ಕನ್ನಡ ಮೇಷ್ಟ್ರ ಸನ್ಮಾನ ಸಮಾರಂಭ ಈ ರೀತಿ ಮುಗಿದಿತ್ತು!
– ಕೆ. ಎಸ್. ಚೈತ್ರಾ